ಎಸ್.ಆರ್.ಎಚ್ ವಿರುದ್ಧ ಚೆನ್ನೈ ಜಯದಲ್ಲಿ ಧೋನಿ ದಾಖಲೆ.!
ಐಪಿಎಲ್ ಇತಿಹಾಸದಲ್ಲೇ ಐಕಾನಿಕ್ ಕ್ರಿಕೆಟಿಗ ಎಂಎಸ್ ಧೋನಿ ಮತ್ತೊಂದು ದಾಖಲೆ

ಚೆನ್ನೈ ಚೆಪಾಕ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ  ಭರ್ಜರಿ ಜಯ ಸಾಧಿಸಿದ್ದು, ತಂಡದ ಸ್ಟಾರ್ ಆಟಗಾರ ಎಂ.ಎಸ್.ಧೋನಿಯವರ ದಾಖಲೆ ಕಿರೀಟಕ್ಕೆ ಮತ್ತೊಂದು ಗರಿ ಸೇರಿದೆ. 

ಸಿಎಸ್ ಕೆ ತಂಡದ ಮಾಜಿ ನಾಯಕರೂ ಆಗಿರುವ ಧೋನಿ, 150ನೇ ಐಪಿಎಲ್ ಜಯ ಸಾಧಿಸಿದ ಮೊದಲ ಆಟಗಾರ ಎನಿಸಿದರು. ಒಂಬತ್ತು ಪಂದ್ಯಗಳಲ್ಲಿ ಐದನ್ನು ಗೆದ್ದ ಅವರ ತಂಡ ಇದೀಗ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಧೋನಿ ಒಟ್ಟಾರೆ 259 ಐಪಿಎಲ್ ಪಂದ್ಯಗಳನ್ನು ಆಡಿದ್ದು, 137.13 ಸ್ಟ್ರೈಕ್ ರೇಟ್ ನೊಂದಿಗೆ 5178 ರನ್ ಗಳಿಸಿದ್ದಾರೆ. ಇದರಲ್ಲಿ 24 ಅರ್ಧ ಶತಕಗಳು ಸೇರಿವೆ. 

ಪ್ರಸಕ್ತ ಋತುವಿನಲ್ಲಿ 259.46 ಸ್ಟ್ರೈಕ್ ರೇಟ್ ನೊಂದಿಗೆ 9 ಪಂದ್ಯಗಳ 7 ಇನಿಂಗ್ಸ್ ಗಳಿಂದ 96 ರನ್ ಗಳಿಸಿದ್ದು, ಇದುವರೆಗೂ ಔಟ್ ಆಗಿಲ್ಲ. ಭಾನುವಾರ ಎಸ್ ಆರ್ಎಚ್ ವಿರುದ್ಧದ ಪಂದ್ಯದಲ್ಲಿ ಕೇವಲ 4 ಎಸೆತಗಳಿರುವಾಗ ಬ್ಯಾಟಿಂಗ್ ಗೆ ಬಂದ ಧೋನಿ, ಮೊದಲ ಎಸೆತದಲ್ಲಿ 4 ಹಾಗೂ ಎರಡನೇ ಎಸೆತದಲ್ಲಿ ಒಂದು ರನ್ ಗಳಿಸಿ ಔಟ್ ಆಗದೇ ಉಳಿದರು. ಐಪಿಎಲ್ ಇತಿಹಾಸದಲ್ಲೇ ಐಕಾನಿಕ್ ಕ್ರಿಕೆಟಿಗ ಎನಿಸಿಕೊಂಡಿರುವ ಧೋನಿ ತಮ್ಮ ನಾಯಕತ್ವ ಶೈಲಿಯಿಂದ ಅಪಾರ ಜನಪ್ರಿಯತೆ ಪಡೆದಿದೆ. ಎಂಥದ್ದೇ ಒತ್ತಡದಲ್ಲೂ ಸಮಚಿತ್ತದಿಂದ ಇರುವ ಧೋನಿ, ಸೀಮಿತ ಓವರ್ ಗಳ ಕ್ರಿಕೆಟ್ ನಲ್ಲಿ ಅದ್ಭುತ ಫಿನಿಶರ್ ಎನಿಸಿಕೊಂಡಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!