ಚಾರ್ಮಾಡಿ ಘಾಟ್‌ನಲ್ಲಿ ಕೆಟ್ಟು ನಿಂತ ಲಾರಿ - ಕಿ.ಮೀ. ಗಟ್ಟಲೆ ಟ್ರಾಫಿಕ್ ಜಾಮ್
10 ಚಕ್ರದ ವಾಹನಕ್ಕಿಂತ ದೊಡ್ಡ ವಾಹನಗಳು ಸಂಚಾರಕ್ಕೆ ನಿಷೇಧವಿದ್ದರೂ ಸಂಚರಿಸಿದ 16 ಚಕ್ರದ ಲಾರಿ
ಕೆಟ್ಟು ನಿಂತು ನೂರಾರು ವಾಹನ ಸವಾರರ ಪರದಾಟ

ಚಾರ್ಮಾಡಿ ಘಾಟಿಯಲ್ಲಿ 16 ಚಕ್ರದ ಲಾರಿ ಕೆಟ್ಟು ನಿಂತ ಪರಿಣಾಮ ಕಿ.ಮೀ. ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದೆ. ಹುಬ್ಬಳ್ಳಿಯಿಂದ ಮಂಗಳೂರಿಗೆ ಹೋಗುತ್ತಿದ್ದ ಸಿಮೆಂಟ್ ಲಾರಿ ಬೆಳಗ್ಗೆ 8:30ರ ವೇಳೆಗೆ ಚಾರ್ಮಾಡಿ ಘಾಟಿಯ 10ನೇ ತಿರುವಿನಲ್ಲಿ ಕೆಟ್ಟು ನಿಂತಿದೆ. 

ಘಾಟಿಯ ತಿರುವಿನಲ್ಲಿ ಟರ್ನ್ ಮಾಡಲಾಗದೇ ಲಾರಿ ನಿಂತ ಕಾರಣ ಮುಂದೆಯೂ ಹೋಗಲಾಗದೆ, ಹಿಂದೆಯೂ ಹೋಗಲಾಗದೆ ವಾಹನಗಳ ಚಾಲಕರು ಈಗ ಪರದಾಡುತ್ತಿದ್ದಾರೆ.  

ಚಿಕ್ಕಮಗಳೂರು-ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟಿನಲ್ಲಿ 10 ಚಕ್ರದ ವಾಹನಕ್ಕಿಂತ ದೊಡ್ಡ ವಾಹನಗಳು ಸಂಚಾರಕ್ಕೆ ನಿಷೇಧವಿದೆ. ಹೀಗಿದ್ದರೂ ಕೊಟ್ಟಿಗೆಹಾರ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ಇದ್ದರೂ ಈ ಲಾರಿಗೆ ಅನುಮತಿ ನೀಡಿದ್ದು ಹೇಗೆ ಎಂಬ ಪ್ರಶ್ನೆ ಎದ್ದಿದೆ. ಪೊಲೀಸರು ವಾಹನ ಬಿಟ್ಟಿರುವುದಕ್ಕೆ ಸ್ಥಳೀಯರು ಅಸಮಾಧಾನಗೊಂಡಿದ್ದು ಬೆಳಗ್ಗೆಯಿಂದಲೂ ನೂರಾರು ವಾಹನ ಸವಾರರು ಪರದಾಡುತ್ತಿದ್ದಾರೆ. 


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!