ಮಂಗಳೂರು: ಚುನಾವಣಾ ಅಕ್ರಮಗಳನ್ನು ತಡೆಹಿಡಿಯಲು ಸಕಲ ವ್ಯವಸ್ಥೆ; ಮೂರು ಕೋಟಿ ಅಧಿಕ ಮೌಲ್ಯದ ಡ್ರಗ್ಸ್ ವಶ
ಚುನಾವಣೆ ಹಿನ್ನೆಲೆ: ಮದ್ಯ, ಡ್ರಗ್ಸ್ ವಶಕ್ಕೆ

ಮಂಗಳೂರು: ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾದ ದಿನದಿಂದ ಮಾರ್ಚ್ 20 ರವರೆಗೆ 12,300 ರೂಪಾಯಿ ಮೌಲ್ಯದ 21.34 ಲೀಟರ್ ಮದ್ಯವನ್ನು ಜಪ್ತಿ ಮಾಡಲಾಗಿದೆ. 3,13,500 ರೂ.ಗಳ ಮೌಲ್ಯದ 1.65 ಕೆಜಿ ಡ್ರಗ್ಸ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ತಿಳಿಸಿದೆ.

2024ರ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಅಕ್ರಮಗಳನ್ನು ತಡೆಹಿಡಿಯಲು ಜಿಲ್ಲೆಯಲ್ಲಿ ಒಟ್ಟು 8 ಖರ್ಚು ವೆಚ್ಚ ಪರೀವೀಕ್ಷಕರರನ್ನು, 72 ಪ್ಲೈಯಿಂಗ್ ಸ್ವ್ಯಾಡ್ (ಎಫ್.ಎಸ್.ಟಿ), 69 ಎಸ್.ಎಸ್.ಟಿ ತಂಡಗಳು ಮತ್ತು 8 ಅಬಕಾರಿ ತಂಡಗಳನ್ನು ಜಿಲ್ಲೆಯಾದ್ಯಂತ ನಿಯೋಜಿಸಲಾಗಿದೆ.

ನೀತಿ ಸಂತೆ ಜಾರಿಯಾದ ದಿನದಿಂದ ಮಾ.20ವರೆಗೆ ದೂರವಾಣಿ ಮೂಲಕ (1950) ಸಾರ್ವಜನಿಕರಿಂದ 75 ಕರೆಗಳನ್ನು ಸ್ವೀಕರಿಸಿ ಸ್ಪಂದಿಸಲಾಗಿದೆ ಸಿ-ಸಿಲ್ ಆಪ್ ಮೂಲಕ 11 ದೂರುಗಳು ಸ್ವೀಕೃತಗೊಂಡಿದೆ. ಈ ಎಲ್ಲಾ ದೂರುಗಳನ್ನು ವಿಲೇವಾರಿ ಮಾಡಲಾಗಿದೆ. ಎನ್‌ಜಿಆರ್‌ಎಸ್ ಪೊರ್ಟಲ್ (ರಾಷ್ಟ್ರೀಯ ಕುಂದುಕೊರತೆಗಳ ಪರಿಹಾರ ವ್ಯವಸ್ಥೆ )ಮೂಲಕ ಜಿಲ್ಲೆಯಲ್ಲಿ 27 ದೂರುಗಳು ಸ್ವೀಕೃತಗೊಂಡಿದೆ. 22 ದೂರುಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಪ್ರಕಟನೆ ತಿಳಿಸಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!