ಬೆಳ್ತಂಗಡಿ: 9 ತಿಂಗಳ ಮಗುವಿನೊಂದಿಗೆ ತಾಯಿ ನಾಪತ್ತೆ
ಕಳೆಂಜ ಗ್ರಾಮದ ಕಾರ್ಯತ್ತಡ್ಕದಲ್ಲಿ ನಡೆದ ಘಟನೆ
ಜಯಶ್ರೀ (29) ಹಾಗೂ ಪುತ್ರಿ ರುಷಿಕಾ (9 ತಿಂಗಳು) ನಾಪತ್ತೆಯಾದವರು

ಬೆಳ್ತಂಗಡಿ: 9 ತಿಂಗಳ ಮಗುವಿನೊಂದಿಗೆ ತಾಯಿ ನಾಪತ್ತೆಯಾಗಿರುವ ಘಟನೆ ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಕಾರ್ಯತ್ತಡ್ಕದಲ್ಲಿ ನಡೆದಿದೆ. 

ಕಳೆಂಜ ಗ್ರಾಮದ ಕಾರ್ಯತ್ತಡ್ಕ ನಿವಾಸಿ ವೆಂಕಪ್ಪ ಗೌಡರ ಪತ್ನಿ ಜಯಶ್ರೀ (29) ಹಾಗೂ ನವರ ಪುತ್ರಿ ರುಷಿಕಾ( 9 ತಿಂಗಳು) ನಾಪತ್ತೆಯಾದವರು. ಮಾ.22 ರಂದು ರಾತ್ರಿ ಜಯಶ್ರೀ ರೂಮಿನಲ್ಲಿ ತನ್ನ ಇಬ್ಬರು ಮಕ್ಕಳೊಂದಿಗೆ  ಮಲಗಿದ್ದು, ವೆಂಕಪ್ಪ ಗೌಡ ಅವರು ಮನೆಯ ಹಾಲ್‌ ನಲ್ಲಿ ಮಲಗಿದ್ದರು. 

ಮರುದಿನ ಬೆಳಿಗ್ಗೆ ವೆಂಕಪ್ಪಗೌಡರು ಎದ್ದು ನೋಡಿದಾಗ ಪತ್ನಿ ಹಾಗೂ 9 ತಿಂಗಳ ಮಗು ರುಷಿಕಾ ನಾಪತ್ತೆಯಾಗಿದ್ದರೆನ್ನಲಾಗಿದೆ. ಈ ಬಗ್ಗೆ ವೆಂಕಪ್ಪಗೌಡ ಕೊಟ್ಟ ದೂರಿನಂತೆ  ಧರ್ಮಸ್ಥಳ ಪೊಲೀಸ್‌ ರಾಣೆಯಲ್ಲಿ  ಪ್ರಕರಣ ದಾಖಲಿಸಲಾಗಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!