ಲವ್ ಸೆಕ್ಸ್ ದೋಖಾ: ಮದುವೆಯಾಗುವುದಾಗಿ ನಂಬಿಸಿ ಟೆಕ್ಕಿ ಯುವತಿಗೆ ಕೈಕೊಟ್ಟ ಯುವಕ
ಮದುವೆ ಆಗುವುದಾಗಿ ನಂಬಿಸಿ ವಂಚನೆ
ಯುವತಿ ಮೇಲೆ ಹಲ್ಲೆ, ಚಾಕುವಿನಿಂದ ಇರಿದ ಆರೋಪ

ಮದುವೆ ಆಗುವುದಾಗಿ ನಂಬಿಸಿ ಟೆಕ್ಕಿ ಯುವತಿಗೆ ಯುವಕ ವಂಚನೆ ಮಾಡಿರುವಂತಹ ಘಟನೆ ಬಂಡೇಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆ ಮೂಲಕ ನಗರದಲ್ಲೊಂದು ಲವ್ ಸೆಕ್ಸ್ ದೋಖಾ ಪ್ರಕರಣ ಬೆಳಕಿಗೆ ಬಂದಿದೆ. ಖಾಸಗಿ ಕಂಪನಿಯೊಂದರಲ್ಲಿ ಟೆಕ್ಕಿಯಾದ್ದ 27 ವರ್ಷದ ಯುವತಿಗೆ ಆದಿತ್ಯ ಸಿಂಗ್ ಎಂಬಾತ ವಂಚಿಸಿದ್ದಾನೆ. ಜಿಮ್​ನಲ್ಲಿ ಯುವತಿಗೆ ಆದಿತ್ಯ ಸಿಂಗ್ ಪರಿಚಯ ಆಗಿದ್ದ. ಬಳಿಕ ಲಿವಿಂಗ್ ರಿಲೇಷನ್​ಶಿಪ್​​ನಲ್ಲಿದ್ದರು.

ಮದುವೆ ಆಗುವಂತೆ ಯುವತಿ ಕೇಳಿದ್ದಕ್ಕೆ ಆದಿತ್ಯ ಸಿಂಗ್​​ ನಿರಾಕರಿಸಿದ್ದು, ಯುವತಿ ಮೇಲೆ ಹಲ್ಲೆ, ಚಾಕುವಿನಿಂದ ಇರಿದು ಗೋಡೆಗೆ ತಲೆ ಚಚ್ಚಿದ ಆರೋಪ ಮಾಡಲಾಗಿದೆ. ಸದ್ಯ ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ. 


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!