ಗಗನಕ್ಕೇರಿದ್ದ ಟೊಮೆಟೊ ಬೆಲೆಯಲ್ಲಿ ಭಾರೀ ಕುಸಿತ.!
ಟೊಮೆಟೊ ಬೆಲೆ ದಿಢೀರ್ ಕುಸಿತ

ಟೊಮೆಟೊ ಅಂದ್ರೆ ಕೆಂಪು ಚಿನ್ನ ಅನ್ನೋ ಮಾತು ಕೇಳಿಬರುತ್ತೆ. ಕಳೆದ ಕೆಲ ವಾರದಿಂದ ಟೊಮೆಟೊಗೆ ನಿಜವಾಗಿಯೂ ಚಿನ್ನದ ಬೆಲೆ ಬಂದಿತ್ತು. ಹೀಗಾಗಿಯೇ ರೈತರು ಜೀವನದಲ್ಲೇ ಕಾಣದಷ್ಟು ಹಣ ಗಳಿಸಿದ್ದರು. ಹೀಗೆ ದಿನದಿಂದ ದಿನಕ್ಕೆ ಟೊಮೆಟೊ ಬೆಲೆ ಏರುತ್ತಿರುವುದು ಕೃಷಿಕರಿಗೂ ಖುಷಿ ಕೊಟ್ಟಿತ್ತು, ಆದ್ರೆ ಈ ಖುಷಿಯೆಲ್ಲಾ ಮಾಯವಾಗಿದೆ. ಯಾಕೆ ಅಂದ್ರಾ? ಟೊಮೆಟೊ ಬೆಲೆ ಕುಸಿತ ಇದ್ದಕ್ಕೆ ಪ್ರಮುಖ ಕಾರಣ.

ಭಾರೀ ದುಭಾರಿಯಾಗಿದ್ದ ಟೊಮೆಟೋ ಬೆಲೆ ಇದೀಗ ದಿಢೀರ್ ಅಗಿ ಕೆ.ಜಿ ಟೊಮೆಟೋ ಬೆಲೆ 30-40ರೂ.ಗೆ ಕುಸಿತ ಕಂಡಿದೆ. ಚಿಕ್ಕಬಳ್ಳಾಪುರ ಮಾರುಕಟ್ಟೆಯಲ್ಲಿ ಟೊಮೆಟೋ ದರ ಭಾರೀ ಇಳಿಕೆಯಾಗಿದ್ದು, 15 ಕೆಜಿ ಬಾಕ್ಸ್ 2,000-2,500 ರೂಪಾಯಿ ಕಂಡಿದ್ದ ಟೊಮೆಟೋ ಬೆಲೆ ಈಗ 450 ರೂಪಾಯಿಗೆ ಇಳಿದಿದೆ.

ಇನ್ನು ಮಳೆ ಇದ್ದ ಕಾರಣದಿಂದ ರೈತರಿಂದ ಮಾರುಕಟ್ಟೆಗೆ ಟೊಮೆಟೋ ಸರಬರಾಜು ಆಗದ ಕಾರಣ ಬೆಲೆ ಜಾಸ್ತಿ ಆಗಿತ್ತು. ಮಳೆ ನಿಂತ ಕಾರಣ ಇದೀಗ ಟೊಮೆಟೋ ಸರಬರಾಜು ಆಗುತ್ತಿದ್ದು, ಇದೀಗ ದಿಢೀರ್ ಅಗಿ ಕೆ.ಜಿ ಟೊಮೆಟೋ ಬೆಲೆ 30-40ರೂ.ಗೆ ಕುಸಿತ ಕಂಡಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!