ಕುಳಾಯಿ:(ಸೆ.೦3) ಕೋಟೆದ ಬಬ್ಬು ದೈವದ ದರ್ಶನ ಹಾಗೂ ರಾಹು ಗುಳಿಗ ದೈವದ ನೇಮೋತ್ಸವ
ಪುರಾತನ ಕೋಟೆದ ಬಬ್ಬು ದೈವಸ್ಥಾನದಲ್ಲಿ ಕೋಟೆದ ಬಬ್ಬು ದೈವದ ದರ್ಶನ
ರಾಹು ಗುಳಿಗ ದೈವದ ನೇಮೋತ್ಸವ

ಕುಳಾಯಿ: ಪುರಾತನ ಕೋಟೆದ ಬಬ್ಬು ದೈವಸ್ಥಾನ ಕುಳಾಯಿ ಇಲ್ಲಿ ಬಬ್ಬು ದೈವದ ದರ್ಶನ ಹಾಗೂ ರಾಹು ಗುಳಿಗ ದೈವದ ನೇಮೋತ್ಸವ ಜರಗಲಿದೆ.

ದಿನಾಂಕ : 03-09-2023ನೇ ಆದಿತ್ಯವಾರ  ಶ್ರಾವಣ ಮಾಸದ ಪುಣ್ಯ ದಿನದಂದು ಆಡಳಿತ ಮಂಡಳಿ ಮತ್ತು ಊರ ಗ್ರಾಮಸ್ಥರ ಸಹಕಾರದೊಂದಿಗೆ ಶ್ರೀ ಕ್ಷೇತ್ರದಲ್ಲಿ ಬೆಳಗ್ಗೆ 10.30 ಗಂಟೆಗೆ ಕೋಟೆದ ಬಬ್ಬು ದೈವದ ದರ್ಶನ ಹಾಗೂ ಮಧ್ಯಾಹ್ನ 12.00ಕ್ಕೆ ಸರಿಯಾಗಿ ರಾಹು ಗುಳಿಗ ದೈವದ ನೇಮೋತ್ಸವ ನಡೆಯಲಿದೆ.

ಭಕ್ತಾಭಿಮಾನಿಗಳಾದ ತಾವೆಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಪುರಾತನ ಕೋಟೆದ ಬಬ್ಬು ಹಾಗೂ ಪರಿವಾರ ದೈವಗಳ ಕೃಪೆಗೆ ಪಾತ್ರರಾಗಿ ಸಿರಿಮುಡಿ ಗಂಧ ಪ್ರಸಾದ ಸ್ವೀಕರಿಸಿ ದೈವಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಕ್ಷೇತ್ರದ ಆರಾಧನ ವೃಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!