'ಐಸಾಬಾಸ್' ತುಳು ಆಲ್ಬಮ್ ಸಾಂಗ್  ಹಾಗೂ 'ಳ' ಕನ್ನಡ ಕಿರು ಚಿತ್ರಕ್ಕೆ ಪ್ರಶಸ್ತಿಗಳ  ಗರಿ
ಹಲವು ವಿಭಾಗಳಲ್ಲಿ ಪ್ರಶಸ್ತಿ ಬಾಚಿಕೊಂಡ - 'ಳ' ಕನ್ನಡ ಕಿರು ಚಿತ್ರ - ಐಸಾಬಾಸ್ ಆಲ್ಬಮ್ ಸಾಂಗ್

ಫಿಲ್ಮ್ ಫೆಸ್ಟಿವಲ್ ಜಂಕ್ಷನ್ ಕೊಲ್ಕತಾ ಆಯೋಜಿಸಿದ ಇಂಡಿಯನ್ ಶಾರ್ಟ್ ಸಿನೆಮಾ ಫಿಲ್ಮ್  ಫೆಸ್ಟಿವಲ್  ನಡೆಸಿದ ಸ್ಪರ್ಧೆಯಲ್ಲಿ ತುಳು ಆಲ್ಬಮ್ ಸಾಂಗ್ ಐಸಾಬಾಸ್ ಹಾಗೂ "ಳ ' ಕನ್ನಡ ಕಿರು ಚಿತ್ರ ಹಲವು ವಿಭಾಗಳಲ್ಲಿ ಮೆಚ್ಚುಗೆ ಪಡೆದು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. 

ತುಳು ಆಲ್ಬಮ್ ಸಾಂಗ್ ಐಸಾಬಾಸ್ ಗೆ  ಮೂರು ವಿಭಾಗದಲ್ಲಿ ಪ್ರಶಸ್ತಿ

ಐಸಾಬಾಸ್ ತುಳು ಮ್ಯೂಸಿಕಲ್ ಆಲ್ಬಮ್ ಸಾಂಗ್ ಮೂರು ವಿಭಾಗಗಳಲ್ಲಿ ಪ್ರಶಸ್ತಿ ಗಳಿಸಿಕೊಂಡಿದೆ. ಅತ್ಯುತ್ತಮ ಕಥೆಗಾಗಿ "ಬೆಸ್ಟ್ ಸ್ಟೋರಿ ಪ್ರಶಸ್ತಿ" ಚೇತನ್.ಕೆ. ವಿಟ್ಲ ಪಡೆದುಕೊಂಡಿದ್ದು, ಅತ್ಯುತ್ತಮ  ಮ್ಯೂಸಿಕಲ್  ವಿಡಿಯೋ  ಆಲ್ಬಮ್ ಸಾಂಗ್ ಪ್ರಶಸ್ತಿ, ಅತ್ಯುತ್ತಮ ಸಂಕಲನಕಾರ ಪ್ರಶಸ್ತಿ ಬಾತು ಕುಲಾಲ್ ರವರು ಪಡೆದುಕೊಂಡಿದ್ದಾರೆ. ಪ್ರಶಸ್ತಿಯನ್ನು ನಿರ್ಮಾಪಕರಾದ ವಿದ್ಯಾ ವೇಣುಗೋಪಾಲ್ ಆಚಾರ್ಯರು ಪಡೆದುಕೊಂಡಿದ್ದಾರೆ. 

ಈ ತುಳು ಆಲ್ಬಮ್ ಸಾಂಗ್ ವಿವಾನ್  ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ನಿರ್ಮಾಣವಾಗಿದ್ದು.  ವಿಭಿನ್ನವಾಗಿ ಮೂಡಿ ಬಂದಿದ್ದು. ರಾಗ ಸ೦ಯೊಜನೆ, ಸಾಹಿತ್ಯ, ಕಥೆ, ಸಂಭಾಷಣೆ, ನಿರ್ದೇಶನ ಚೇತನ್ ಕೆ ವಿಟ್ಲ, ಸಹ ನಿರ್ದೇಶನ ಅಚಲ್ ವಿಟ್ಲ, ಗಾಯನ ಭವಾನಿ ಶಂಕರ, ಛಾಯಗ್ರಹಣ  ಹಾಗೂ ಸಂಕಲನ ಬಾತುಕುಲಾಲ್, ಕಲಾ ನಿರ್ದೇಶನ ಎಂ. ಜಿ. ಕೆ ಶಿಲ್ಪಾ ಕಲಾ ಕುಂಬ್ಳೆ, ಸಂಗೀತ ಅಶ್ವಿನ್ ಪುತ್ತೂರು, ಹಾಗೂ ಪೋಸ್ಟರ್ ಪಜ್ಜೆ ಡಿಸೈನ್ ಕನ್ಯಾನ ಇವರದಾಗಿದ್ದು, ವಿದ್ಯಾ ವೇಣು ಗೋಪಾಲ ಆಚಾರ್ಯ ರವರು ನಿರ್ಮಾಣ ಮಾಡಿದ್ದಾರೆ.

ಈ ಆಲ್ಬಮ್ ಸಾಂಗ್ ನಲ್ಲಿ  ಚರಣ್ ಮುಳ್ಳೇರಿಯ, ಸುನಿಲ್ ಮಂಗಲ್ಪಾಡಿ, ಲಿಂಗಪ್ಪ ಕುಬಣೂರು, ವೇಣುಗೋಪಾಲ್ ಆಚಾರ್ಯ,  ಆಚಲ್  ವಿಟ್ಲ, ಸಂಜು ಮೈಸೂರು, ಬಾಬು ಬದಿಯಡ್ಕ ವೈಷ್ಣವಿ ಆಚಾರ್ಯ ಮುಂತಾದವರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದಾರೆ. ಈ ಆಲ್ಬಂ ಸಾಂಗ್ ನು   V4 vaishu ಕ್ರೀಯೆಷನ್ಸ್ ಯುಟುಬ್  ಚಾನೆಲ್ ನಲ್ಲಿ ವೀಕ್ಷಿಸಬಹುದು.

'ಳ' ಕನ್ನಡ ಕಿರು ಚಿತ್ರಕ್ಕೆ ಮೂರು ವಿಭಾಗದಲ್ಲಿ ಪ್ರಶಸ್ತಿ

ಫಿಲ್ಮ್ ಫೆಸ್ಟಿವಲ್ ಜಂಕ್ಷನ್ ಕೋಲ್ಕತಾ ಆಯೋಜಿಸಿದ ಇಂಡಿಯನ್ ಶಾರ್ಟ್ ಸಿನೆಮಾ ಫಿಲ್ಮ್ ಫೆಸ್ಟಿವಲ್ ಸ್ಪರ್ಧೆಯಲ್ಲಿ  "ಳ ' ಕನ್ನಡ ಕಿರು ಚಿತ್ರಕ್ಕೆ ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಾಯಕ ನಟ, ಅತ್ಯುತ್ತಮ ಛಾಯಾಗ್ರಹಣಕ್ಕೆ ವಿಭಾಗಕ್ಕೆ ಪ್ರಶಸ್ತಿ ದೊರಕಿವೆ.

ಈ ಕಿರು ಚಿತ್ರದ ನಿರ್ದೇಶಕ ಚೇತನ್ ಕೆ ವಿಟ್ಲರವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ,   ನಾಯಕ ನಟ ಕಾರ್ತಿಕ್ ಕೂಮಾರ್ ರವರಿಗೆ ಅತ್ಯುತ್ತಮ ನಾಯಕ ನಟ ಪ್ರಶಸ್ತಿ ಹಾಗೂ ಅಚಲ್ ವಿಟ್ಲ ರವರಿಗೆ ಅತ್ಯುತ್ತಮ ಛಾಯಗ್ರಾಹಕ ಪ್ರಶಸ್ತಿ ದೊರಕಿದೆ.

ವಿಟ್ಲದ ಪ್ರತಿಭಾವಂತ ಯುವಕರ ತಂಡದಿಂದ ತಯಾರದ ಈ ಕಿರು ಚಿತ್ರ ಒಂದು ವ್ಯಕ್ತಿಯ ನ್ಯೂನತೆ ಹಾಗೂ ಅದರ ಸುತ್ತ ಅವಮಾನಿಸುವ ಜನರ ಮಧ್ಯೆ ಸಾಧನೆಗೈಯುವಂತಹ ಕಥಾ ಹಂದರ ಹೊಂದಿರುವ ಸಾರಾಂಶಉಳ್ಳ ಕಿರು ಚಿತ್ರ ಇದಾಗಿದು ಈಗಾಗಲೇ ಕರ್ನಾಟಕದದ್ಯಾ೦ತ  ಎಲ್ಲರ ಮೆಚ್ಚುಗೆ ಪಡೆದಿರುವ ಈ ಕಿರು ಚಿತ್ರ ಬೇರೆ ಬೇರೆ ವಾಹಿನಿಗಳಲ್ಲಿ ಈಗಾಗಲೇ  ಪ್ರಸಾರಗೊಂಡು ಹಲವು ಪ್ರಶಸ್ತಿಗಳು ದೊರಕಿವೆ.

ಕಿರು ಚಿತ್ರಕ್ಕೆ ನಿರ್ದೇಶನ, ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ರಾಗಸ೦ಯೊಜನೆ ಚೇತನ್ ಕೆ ವಿಟ್ಲ ರವರದ್ದಾಗಿದು, ಈ ಕಿರು ಚಿತ್ರದಲ್ಲಿ ಸಹ ನಿರ್ದೇಶನದ ಜೊತೆಗೆ ನಾಯಕ ನಟನಾಗಿ ಕಾರ್ತಿಕ್ ಕುಮಾರ್ ನಟಿಸಿದ್ದು, ನಾಯಕಿಯಾಗಿ ಸುಪ್ರಿಯಾ ಆಚಾರ್ ನಟಿಸಿದ್ದಾರೆ. ಈ ಕಿರು ಚಿತ್ರಕ್ಕೆ ಅಚಲ್ ವಿಟ್ಲ ಛಾಯಗ್ರಹಣವಿದ್ದು , ಬೆಳಕು ಶಶಾ೦ಕ್ ಕುಂಬ್ರ, ಸಂಗೀತ ಹಾಗೂ ಗಾಯನ ಯಶು ಸ್ನೇಹಗಿರಿ, ಸಂಕಲನ ಬಾತುಕುಲಾಲ್ ರದಾಗಿದ್ದು ಈ ಕಿರು ಚಿತ್ರವನ್ನು ಶಿವಪ್ರಕಾಶ್ ಮಿತ್ತೂರು ರವರು ನಿರ್ಮಿಸಿದ್ದು, ಮನೋಜ್ ಅರ್ಕ, ಮಹೇಶ್ ವರ್ಮ ವಿಟ್ಲ, ಶ್ರೀಮತಿ ಅನುರಾಧ, ಗಿರೀಶ್ ಕಣಿಯೂರು, ಯುಕ್ತೆಶ್, ಪವನ್, ಅಭಿಲಾಷ್, ಆರ್ಪಿತ್ , ಅಂಕಿತ್ ಮದನ್ ಪೂಜಾರಿ ಮುಂತಾದವರ ತಾರಬಳಗವಿದ್ದು ಈ ಕಿರು ಚಿತ್ರ ಅನ್ನಪೂರ್ಣೆಸ್ವರಿ ಕ್ರಿಯೇಷನ್ ಯುಟುಬ್ ಚಾನೆಲ್ ವೀಕ್ಷಿಸಬಹುದು.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!