ಸುಳ್ಯ: ಬೈಕ್ ಕಳ್ಳತನದ ಆರೋಪಿ ಅರೆಸ್ಟ್
ಬೈಕ್ ಕಳ್ಳತನ

ಕೆಲವೇ ಗಂಟೆಗಳಲ್ಲಿ ಆರೋಪಿಯ ಬಂಧನ

ಸುಳ್ಯ: ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ.

ಕೊಡಗು ಸೋಮವಾರಪೇಟೆಯ ಬಸವನಹಳ್ಳಿಯ ಸುಬ್ರಮಣಿ (26) ಬಂಧಿತ ಆರೋಪಿ.

ಸೆ. 16ರಂದು ನಾಪತ್ತೆಯಾಗಿದ್ದ ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಸುಳ್ಯ ಪೊಲೀಸ್ ಉಪ ನಿರೀಕ್ಷಕರು ಮತ್ತು ಸಿಬ್ಬಂದಿ ತಂಡ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕೆಲವೇ ಗಂಟೆಗಳಲ್ಲಿ ಸುಳ್ಯ ತಾಲೂಕು ಆಲಟ್ಟಿ ಗ್ರಾಮದ ಸರಳಿಕುಂಜ ಎಂಬಲ್ಲಿ ಆರೋಪಿಯನ್ನು ಪತ್ತೆ ಮಾಡಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!