ಮಂಗಳೂರು: MDMA ಮಾರಾಟ- ಇಬ್ಬರ ಬಂಧನ
ಎಂಡಿಎಂಎ ಮಾದಕ ವಸ್ತು ಮಾರಾಟ ಇಬ್ಬರ ಬಂಧನ

ಮಂಗಳೂರು: ಬೈಕಿನಲ್ಲಿ ಬಂದು ನಿಷೇಧಿತ ಮಾದಕ ವಸ್ತು ಎಂಡಿಎಂಎ ಅನ್ನು ಹಣಕ್ಕಾಗಿ ಸಾರ್ವಜನಿಕರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಉಳ್ಳಾಲ ಪೊಲೀಸರ ತಂಡ ಬಂಧಿಸಿದ್ದಾರೆ.

ತ್ರಿಶೂರ್ ವಡಕಂಚೇರಿ ನಿವಾಸಿ ಶೇಕ್ ತನ್ಸಿರ್ (20) ಮತ್ತುಕೋಝಿಕ್ಕೋಡ್ ಕಡಮೇರಿ ನಿವಾಸಿ ಸಾಯಿಕೃಷ್ಣ ( 19) ಬಂಧಿತರು

 ಇಬ್ಬರಿಂದ 2.77 ಗ್ರಾಂ ತೂಕದ ನಿಷೇಧಿತ ಎಂಡಿಎಂಎ , ಎರಡು ಮೊಬೈಲ್ ಹಾಗೂ ರೂ. 50,000 ಬೆಲೆಬಾಳುವ ಎಫ್ ಝೆಡ್ ಬೈಕನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಎನ್ ಡಿಪಿಎಸ್ ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!