ಮಂಗಳೂರಿನ 16 ಎಎಸ್‌ಐಗಳು ಇನ್ಮುಂದೆ ಪಿಎಸ್‌ಐ.!
16 ಎಎಸ್‌ಐಗಳಿಗೆ ಪಿಎಸ್‌ಐಗಳಾಗಿ ಭಡ್ತಿ- ಕಮಿಷನರ್‌ ಅಗರ್ವಾಲ್ ಆದೇಶ

ಮಂಗಳೂರು : ಹಲವು ವರ್ಷಗಳಿಂದ ಮುಂಭಡ್ತಿಗೆ ಕಾಯುತ್ತಿದ್ದ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ 16 ಪೊಲೀಸ್ ಸಹಾಯಕ ಉಪನಿರೀಕ್ಷಕರಿಗೆ ಪೊಲೀಸ್ ಉಪನಿರೀಕ್ಷಕರಾಗಿ ಮುಂಭಡ್ತಿ ನೀಡಿ ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಆದೇಶ ಹೊರಡಿಸಿದ್ದಾರೆ.ಪಿಎಸ್‌ಐಗಳಾಗಿ ಭಡ್ತಿ ಪಡೆದಿರುವವರನ್ನು ವಿವಿಧ ಪೊಲೀಸ್ ಠಾಣೆಗಳಿಗೆ ನಿಯೋಜಿಸಲಾಗಿದೆ.

ಪಿಎಸ್‌ಐ ಭಡ್ತಿಯಾಗಿರುವ ಕಂಕನಾಡಿ ನಗರ ಪೊಲೀಸ್ ಠಾಣೆಯ ನವೀನ್ ಮೂಡುಬಿದಿರೆಗೆ, ಕಂಕನಾಡಿ ನಗರ ಠಾಣೆಯ ಜನಾರ್ದನ ನಾಯ್ಕ ಸುರತ್ಕಲ್ ಪೊಲೀಸ್ ಠಾಣೆಗೆ , ಸಿಎಸ್ಪಿಯ ಆನಂದ ಬಿ. ಉತ್ತರ ಸಂಚಾರ ಠಾಣೆಗೆ, ಗ್ರಾಮಾಂತರ ಠಾಣೆಯ ವಿನೋದ್ ಕೊಣಾಜೆ ಠಾಣೆಗೆ, ಪಣಂಬೂರು ಠಾಣೆಯ ಈಶ್ವರ ಸ್ವಾಮಿ ಕದ್ರಿ ಸಂಚಾರ ಠಾಣೆಗೆ, ಕದ್ರಿ ಠಾಣೆಯ ಶಾಂತಪ್ಪ ಜಿ. ಕಂಕನಾಡಿ ನಗರ ಠಾಣೆಗೆ, ಸಂಚಾರ ಪಶ್ಚಿಮ ಠಾಣೆಯ ಕೃಷ್ಣಪ್ಪ ಮೂಡುಬಿದಿರೆ ಠಾಣೆಗೆ, ಉತ್ತರ ಠಾಣೆಯ ಶಿವಪ್ಪ ಗೌಡ ಅದೇ ಠಾಣೆಗೆ ನಿಯೋಜನೆಗೊಂಡಿದ್ದಾರೆ.

ಉರ್ವ ಠಾಣೆಯ ಉಲ್ಲಾಸ್ ಪಾಂಡುರಂಗ ಬರ್ಕೆ ಠಾಣೆಗೆ, ಉತ್ತರ ಠಾಣೆಯ ಓಂ ದಾಸ್ ಸೆನ್ ಠಾಣೆಗೆ, ಐಎಸ್ಡಿಯ ರವಳೇಂದ್ರ ಗ್ರಾಮಾಂತರ ಠಾಣೆಗೆ, ಸಂಚಾರ ಪಶ್ಚಿಮ ಠಾಣೆಯ ಶಶಿಧರ ಶೆಟ್ಟಿ ಸುರತ್ಕಲ್ ಠಾಣೆಗೆ, ಉಳ್ಳಾಲ ಠಾಣೆಯ ಪ್ರಾಣೇಶ್ ಕುಮಾರ್ ಬಿ. ಅದೇ ಠಾಣೆಗೆ, ಸೆನ್ ಠಾಣೆಯ ಮೋಹನ್ ಅದೇ ಠಾಣೆಗೆ, ಸಿಸಿಬಿಯ ಹರೀಶ್ ಪದವಿನಂಗಡಿ ಸಿಎಸ್ಬಿಗೆ, ದಕ್ಷಿಣ ಠಾಣೆಯ ಪುರಂದರ ಬಿ.ಪಿ. ಸಿಸಿಆರಬಿ.ಪಿ. ಸಿಸಿಆರ್ಬಿಗೆ ಪಿಎಸ್‌ಐ ಹುದ್ದೆಗೆ ನೇಮಕ ಮಾಡಿ ವರ್ಗಾಯಿಸಲಾಗಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!