ಮಣಿಪಾಲ: ಅಕ್ರಮ ಪಟಾಕಿ ದಾಸ್ತಾನು - ಪೊಲೀಸ್ ರೈಡ್ - ಲಕ್ಷಾಂತರ ಮೌಲ್ಯದ ಪಟಾಕಿ ವಶ.!
ಅಕ್ರಮ ಪಟಾಕಿ ದಾಸ್ತಾನು ಕೇಂದ್ರಕ್ಕೆ ಪೊಲೀಸರ ದಾಳಿ - ಲಕ್ಷಾಂತರ ಮೌಲ್ಯದ ಪಟಾಕಿ ವಶ

ಮಣಿಪಾಲ: ಅಂಗಡಿಯೊಂದರಲ್ಲಿ ಅಕ್ರಮವಾಗಿ ದಾಸ್ತಾನು ಇರಿಸಲಾದ ಲಕ್ಷಾಂತರ ರೂ. ಮೌಲ್ಯದ ಪಟಾಕಿಯನ್ನು ಮಣಿಪಾಲ ಪೊಲೀಸರು ವಶಪಡಿಸಿಕೊಂಡ ಘಟನೆ ಮಣಿಪಾಲ ಸಮೀಪದ ಪರ್ಕಳ ದಲ್ಲಿ ನಡೆದಿದೆ. 

ಮಣಿಪಾಲ ಪೊಲೀಸ್ ನಿರೀಕ್ಷಕ ದೇವರಾಜ್ ಟಿ.ವಿ. ನೇತೃತ್ವದ ತಂಡ ಪರ್ಕಳ ಮುಖ್ಯಪೇಟೆಯ ದಿನಸಿ ಅಂಗಡಿಯ ಹಿಂಬದಿಯಲ್ಲಿದ್ದ ಶಿವಪ್ರಸಾದ್ ಠಾಕೂರು ಎಂಬವರ ಗೋಡಾನ್‌ಗೆ ದಾಳಿ ನಡೆಸಿದ್ದು, ಪರವಾನಿಗೆ ಇಲ್ಲದೆ ಅಕ್ರಮವಾಗಿ ದಾಸ್ತಾನು ಇರಿಸಿದ್ದ ಸುಮಾರು 760 ಕೆ.ಜಿ. ತೂಕದ ಪಟಾಕಿಗಳನ್ನು ವಶಪಡಿಸಿಕೊಂಡಿದೆ.

ವಶಪಡಿಸಲಾದ ಪಟಾಕಿ ಮೌಲ್ಯ ಸುಮಾರು 1.25 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಶಿವಪ್ರಸಾದ್ ಠಾಕೂರು ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!