ಉಡುಪಿ: ಯುವತಿ ನಾಪತ್ತೆ - ದೂರು ದಾಖಲು.!
ಉಡುಪಿ ಮೂಡುಬೆಳ್ಳೆ ಯುವತಿ ಮಿಸ್ಸಿಂಗ್

ಉಡುಪಿ: ಮನೆಯಿಂದ ಹೋರಟ ಯುವತಿ ಮನೆಗೆ ಬರದೆ ನಾಪತ್ತೆಯಾದ ಘಟನೆ ಶರ‍್ವ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 

ನಾಪತ್ತೆಯಾದ ಯುವತಿಯನ್ನು ಉಡುಪಿ ಜಿಲ್ಲೆಯ ಕಾಪು ಮೂಡುಬೆಳ್ಳೆ ಕೊಂಗಿಬೈಲು ನಿವಾಸಿ ವಿನಿತಾ (22) ಎನ್ನಲಾಗಿದೆ.

ಅಪರಾಹ್ನ 3 ಗಂಟೆಗೆ ತನ್ನ ಅಕ್ಕನಲ್ಲಿ ಉಡುಪಿಗೆ ಹೋಗಿ ಬರುವುದಾಗಿ ತಿಳಿಸಿ ತನ್ನ ಮನೆಯಿಂದ ಹೋದವರು ವಾಪಾಸು ಮನೆಗೆ ಬಾರದೆ ಕಾಣೆಯಾಗಿದ್ದಾರೆ. ಬಿ.ಕಾಂ. ಪದವೀಧರೆಯಾಗಿದ್ದ ಈಕೆ ಪ್ರಸ್ತುತ ಉಡುಪಿ ಎಂಜಿಎಂ ಕಾಲೇಜ್ ಬಳಿಯ ಎಲೆಕ್ಟ್ರಿಕಲ್ ಬೈಕ್ ಶೋರೂಂನಲ್ಲಿ ಸುಮಾರು 4 ತಿಂಗಳಿನಿಂದ ಕೆಲಸ ಮಾಡಿಕೊಂಡಿದ್ದು, ವಾರದ ಹಿಂದೆ ಕೆಲಸಬಿಟ್ಟಿದ್ದರು ಎಂದು ತಿಳಿದುಬಂದಿದೆ.

ಆಕೆ ಉಪಯೋಗಿಸುತ್ತಿದ್ದ ಮೊಬೈಲ್ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿದ್ದು, ಆಕೆಯ ಸ್ನೇಹಿತರಲ್ಲಿ, ಸಂಬಂಧಿಕರ ಮನೆಯಲ್ಲಿ, ಆಸುಪಾಸಿನಲ್ಲಿ ಹುಡುಕಾಡಿದ್ದು, ಈ ತನಕ ಪತ್ತೆಯಾಗಿರುವುದಿಲ್ಲ ಎಂದು ಎಂದು ಸಹೋದರ ನೀಡಿದ ದೂರಿನಂತೆ ಶರ‍್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!