ಮೂಡಬಿದಿರೆ: (ಅ.23) ಬನ್ನಡ್ಕದಲ್ಲಿ ಎರಡನೇ ವರ್ಷದ ಶಾರದೋತ್ಸವ
ಬನ್ನಡ್ಕದಲ್ಲಿ ಎರಡನೇ ವರ್ಷದ ಶಾರದೋತ್ಸವ

ಮೂಡುಬಿದಿರೆ: ಬನ್ನಡ್ಕ ಸಾರ್ವಜನಿಕ ಶ್ರೀ ಶಾರದೋತ್ಸವ ಟ್ರಸ್ಟ್ ಆಶ್ರಯದಲ್ಲಿ 2ನೇ ವರ್ಷದ ಶಾರದೋತ್ಸವ ಅ.23ರಂದು ಶ್ರೀಕ್ಷೇತ್ರ ಬನ್ನಡ್ಕದ ಕಲಾಮಂದಿರದಲ್ಲಿ ನಡೆಯಲಿದೆ.

ಬೆಳಗ್ಗೆ 7 ಗಂಟೆಗೆ ಗಣಹೋಮ, 9ಗಂಟೆಗೆ ಒಂಟಿಕಟ್ಟೆಯಿಂದ ಮೂಡುಬಿದಿರೆ ನಗರವಾಗಿ ಬನ್ನಡ್ಕಕ್ಕೆ ಶಾರದೆಯ ವಿಗ್ರಹ ಮೆರವಣಿಗೆ ನಡೆಯಲಿದೆ. 10:45ಕ್ಕೆ ಶಾರದೆಯ ವಿಗ್ರಹವನ್ನು ಟ್ರಸ್ಟ್ನ ಅಧ್ಯಕ್ಷ ಎಂ.ದಯಾನಂದ ಪೈ ಪ್ರತಿಷ್ಠಾಪಿಸಲಿದ್ದು, ಶಾಸಕ ಉಮಾನಾಥ ಕೋಟ್ಯಾನ್ ದೀಪ ಪ್ರಜ್ವಲನೆ ಮಾಡಲಿದ್ದಾರೆ.

ಬಳಿಕ ಭಜನಾ ಸಂಕೀರ್ತನೆ, ಮಧ್ಯಾಹ್ನ 12ಗಂಟೆಯಿಂದ ಶ್ರೀದುರ್ಗಾಹೋಮ, ಮಹಾಪೂಜೆಯಿದೆ. ಮಧ್ಯಾಹ್ನ 1:30ರಿಂದ ಸಾಯಂಕಾಲ 4:30ರವರೆಗೆ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿದೆ.

5ಗಂಟೆಯಿಂದ ಟ್ರಸ್ಟ್ನ ಅಧ್ಯಕ್ಷ ಎಂ.ದಯಾನಂದ ಪೈ ಅವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಸಂಸದ ನಳಿನ್ ಕುಮಾರ್ ಕಟೀಲ್, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದ ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರ ಕುಮಾರ್, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಆಳ್ವಾಸ್ ಸಂಸ್ಥೆಯ ಅಧ್ಯಕ್ಷ ಡಾ.ಎಂ ಮೋಹನ ಆಳ್ವ, ಬಿಜೆಪಿ ದ.ಕ ಜಿಲ್ಲಾಧ್ಯಕ್ಷ ಸುದರ್ಶನ್ ಎಂ. ಸಹಿತ ಗಣ್ಯರು ಭಾಗವಹಿಸುವರು. ಸಾಮಾಜಿಕ ಕಾರ್ಯಾಕರ್ತ ಪ್ರಕಾಶ್ ಮಲ್ಪೆ ದಿಕ್ಸೂಚಿ ಭಾಷಣ ಮಾಡಲಿದ್ದು, ಸಾಧಕ ಕೃಷಿಕ ಡಾ.ನಾಗರಾಜ್ ಶೆಟ್ಟಿ ಅಂಬೂರಿ, ವೈದ್ಯಕೀಯ ಕ್ಷೇತ್ರದ ಸಾಧನೆಗಾಗಿ ಡಾ.ಉಜ್ವಲ್ ಯು.ಸುವರ್ಣ ಅವರನ್ನು ಸನ್ಮಾನಿಸಲಾಗುವುದು ಎಂದು ಅವರನ್ನು ಸನ್ಮಾನಿಸಲಾಗುವುದು. 

ಇದೇ ಸಂದರ್ಭದಲ್ಲಿ ದೇವರಿಗೆ ಬೆಳ್ಳಿಯ ಕಿರೀಟ, ನೂತನ ಪೀಠ ಹಾಗೂ ನೂತನ ಪ್ರಭಾವಳಿಯನ್ನು ಈ ಸಂದರ್ಭದಲ್ಲಿ ಸಮರ್ಪಿಸಲಾಗುವುದು.

೭ಗಂಟೆಗೆ ಮಹಾಪೂಜೆ, ವಿಸರ್ಜನಾ ಪೂಜೆ ನಡೆಯಲಿದ್ದು, 7:30ಕ್ಕೆ ಬನ್ನಡ್ಕದಿಂದ ಅಲಂಗಾರು ಮಾರ್ಗವಾಗಿ ಒಂಟಿಕಟ್ಟೆಯ ಕಡಲಕೆರೆಯವರೆ ವೈಭವದ ಶೋಭಾಯಾತ್ರೆ ನಡೆಯಲಿದ್ದು, ಶಾರದೆಯ ವಿಗ್ರಹವನ್ನು ಜಲಸ್ತಂಬನಗೊಳಿಸಲಾಗುವುದು ಎಂದು ಟ್ರಸ್ಟ್ನ ಕಾರ್ಯದರ್ಶಿ ಸೂರಜ್ ಜೈನ್ ಮಾರ್ನಾಡ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!