ಮಂಗಳೂರು: ಅಮ್ಮ ಎಂಟರ್‌ಪ್ರೈಸಸ್ ಮೆಗಾ ಲಕ್ಕಿ ಸ್ಕೀಮ್'ನ ಪ್ರಥಮ ಡ್ರಾ ಯಶಸ್ವಿ
ಒಂದು ಲಕ್ಷ ಮೌಲ್ಯದ ಚಿನ್ನದ ಆಭರಣ ಗೆದ್ದ ಉಡುಪಿಯ ಪ್ರವೀಣ್ ಕುಮಾರ್

ಮಂಗಳೂರಿನ ಕಾವೂರು ಗಾಂಧಿನಗರದಲ್ಲಿ ಕಾರ್ಯಚರಿಸುತ್ತಿರುವ ಅಮ್ಮ ಎಂಟರ್ ಪ್ರೈಸಸ್‌ನ ಮೆಗಾ ಲಕ್ಕಿ ಸ್ಕೀಮ್ ಸೀಝನ್ ಐದರ ಪ್ರಥಮ ಡ್ರಾ ಯಶಸ್ವಿಯಾಗಿ ನಡೆದಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಯಶಸ್ವಿ ಲಕ್ಕಿ ಸ್ಕೀಮ್ ನಡೆಸಿ ಕರಾವಳಿ ಜನರ ಮನ ಗೆದ್ದಿರುವ ಅಮ್ಮ ಎಂಟರ್ ಪ್ರೈಸಸ್ ಸಂಸ್ಥೆಯು ಈ ಬಾರಿಯೂ 20 ಕಂತುಗಳ ಲಕ್ಕಿ ಸ್ಕೀಮ್ ನಡೆಸುತ್ತಿದ್ದು ಮೊದಲ ಡ್ರಾ ನಡೆದಿದ್ದು ಬಹುಮಾನವನ್ನು ವಿತರಿಸಲಾಯಿತು. 

ಮೊದಲ ಡ್ರಾ ಒಂದು ಲಕ್ಷ ಮೌಲ್ಯದ ಚಿನ್ನದ ಆಭರಣವನ್ನು ಉಡುಪಿಯ ಪ್ರವೀಣ್ ಕುಮಾರ್ ಅವರು ಗೆದ್ದುಕೊಂಡು ಅದೃಷ್ಟ ತಮ್ಮದಾಗಿಸಿಕೊಂಡಿದ್ದಾರೆ. ಇವರಿಗೆ ಬಹುಮಾನ ವಿತರಣಾ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ ಶರಣ್ ಪಂಪವೆಲ್ ವಿಶ್ವ ಹಿಂದೂ ಪರಿಷತ್ ಪ್ರಮುಖರು ಬಹುಮಾನ ವಿತರಿಸಿ ಅಭಿನಂದನೆ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕರಾದ ಧನುಷ್ ಕಾಟಿಪಳ್ಳ, ಸುರೇಶ್ ಕುಮಾರ್, ಅತಿಥಿಗಳಾಗಿ ಆಗಮಿಸಿದ್ದ ಪ್ರಮೋದ್ ಪಂಪವೆಲ್, ಶೈಲೇಶ್ ಮಾಡೂರ್, ಅಕ್ಷಯ್ ಉಪಸ್ಥಿತರಿದ್ದರು.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!