ಮಂಗಳೂರು: ಮಂಗಳಾದೇವಿ ದಸರಾ - ವ್ಯಾಪಾರಿಗಳ ಸ್ಟಾಲ್‌ಗಳಿಗೆ ಕೇಸರಿ ಧ್ವಜ ಕಟ್ಟಿದ ಬಜರಂಗದಳ.!
ಮಂಗಳಾದೇವಿ ದೇವಸ್ಥಾನದಲ್ಲಿ ಕೇಸರಿ ಧ್ವಜ ಅಭಿಯಾನ

ಮಂಗಳೂರು: ಹಿಂದೂ ಸಂಘಟನೆಗಳ ತೀವ್ರ ವಿರೋಧದ ನಡುವೆಯೂ ದ.ಕ.ಜಿಲ್ಲಾಡಳಿತ ನಗರದ ಮಂಗಳಾದೇವಿ ದೇವಸ್ಥಾನದ ನವರಾತ್ರಿ ಉತ್ಸವದ ಸಂತೆ ವ್ಯಾಪಾರದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೂ ಅವಕಾಶ ನೀಡಿದೆ. ಜಿಲ್ಲಾಡಳಿತದ ಈ ನಿರ್ಧಾರ ಹಿಂದೂ  ಸಂಘಟನೆಗಳ ಕಣ್ಣು ಕೆಂಪಾಗಿರಿಸಿದೆ. ಇದಕ್ಕೆ ಟಕ್ಕರ್ ನೀಡಲು ಹಿಂದೂಗಳು ನಡೆಸುವ ಸ್ಟಾಲ್‌ಗಳಿಗೆ ಕೇಸರಿ ಧ್ವಜ ಗಳನ್ನು ಕಟ್ಟಿ ಹಿಂದೂಗಳು ಈ ಅಂಗಡಿಯಲ್ಲಿ ವ್ಯಾಪಾರ ಮಾಡಬೇಕೆಂದು ಕರೆ ನೀಡಿದೆ.

 ಈ ಬಗ್ಗೆ ಪ್ರತಿಕ್ರೀಯಿಸಿರುವ ವಿಎಚ್ ಪಿ ದಕ್ಷಿಣ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ ವೆಲ್ ದೇವಸ್ಥಾನದ ಆಸುಪಾಸಿನಲ್ಲಿ ಹಿಂದೂಗಳಿಗೆ ಅವಕಾಶ ನೀಡಬೇಕು. ಹಿಂದೂ ದೇವರನ್ನು ನಂಬದ, ಮೂರ್ತಿ ಪೂಜೆ ವಿರೋಧಿಗಳಿಗೆ ನಮ್ಮ ಉತ್ಸವದಲ್ಲಿ ಯಾಕೆ ಅವಕಾಶ ಕೊಡಬೇಕು, ಜಿಲ್ಲಾಡಳಿತದ ಈ ನೀತಿ ಹಿಂದೂ ವಿರೋಧಿಯಾಗಿದೆ.

ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಸೇರುವ ದೇವಸ್ಥಾನದಲ್ಲಿ ಹಿಂದೂಗಳಿಗೆ ವ್ಯಾಪಾರಕ್ಕೆ ಅವಕಾಶ ನೀಡಬೇಕು, ನಾವೂ ಮುಸಲ್ಮಾನ್ ವ್ಯಾಪಾರಿಗಳ ವಿರೋಧಗಳಲ್ಲ ನಮ್ಮ ದೇವಸ್ಥಾನದ ಸುತ್ತ ಮುತ್ತ ಮೊದಲು ಹಿಂದುಗಳಿಗೆ ವ್ಯಾಪಾರಕ್ಕೆ ಅವಕಾಶ ಕೊಡಿ ಎಂದಿದ್ದಾರೆ.

ಈ ಹಿಂದೆ ಅನ್ಯಮತೀಯರಿಗೆ ವ್ಯಾಪಾರಕ್ಕೆ ಅವಕಾಶ ನಿರಾಕರಿಸಿದ ಸಂದರ್ಭ, ಬೀದಿ ಬದಿ ವ್ಯಾಪಾರಸ್ಥರ ಸಮನ್ವಯ ಸಮಿತಿ ದೇವಸ್ಥಾನದ ಎರಡು ಬದಿಯ ರಸ್ತೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರಿದ್ದು, ಇಲ್ಲಿ ಯಾರು ಬೇಕಾದರೂ ವ್ಯಾಪಾರ ನಡೆಸಬಹುದು ಎಂದಿತ್ತು, ಮಹಾನಗರ ಪಾಲಿಕೆ ಅಸ್ತಿತ್ವಕ್ಕೆ ಬರುವ ನೂರಾರು ವರ್ಷಗಳ ಮುನ್ನವೇ ಈ ಜಾಗದಲ್ಲಿ ದೇವಸ್ಥಾನವಿತ್ತು, ಇದೇ ರಸ್ತೆಯಲ್ಲಿ ದೇವರ ರಥ ಓಡಾಡುತ್ತೆ,ಮೊದಲು ಇದು ದೇವಸ್ಥಾನದ ಜಾಗ ಆಮೇಲೆ ಮಹಾನಗರ ಪಾಲಿಕೆ ಅಸ್ತಿತ್ವಕ್ಕೆ ಬಂದಿದ್ದು, ಎಲ್ಲೆಲ್ಲಿ ದೇವಸ್ಥಾನದ ವಠಾರವಿದೆ ಅಲ್ಲಿ ಹಿಂದುಗಳೇ ವ್ಯಾಪಾರ ಮಾಡಬೇಕು, ಎಂದಿದ್ದಾರೆ. ಹಿಂದೂ ಶಬ್ದದ ಮೇಲೇನೆ ನಂಬಿಕೆ ಇಲ್ಲದವರು,ಮೂರ್ತಿ ಪೂಜೆಯನ್ನ ನಂಬದವರು ನಮ್ಮ ಧರ್ಮವನ್ನ ಪ್ರಶ್ನೆ ಮಾಡುವವರು,ಸನಾತನ ಧರ್ಮದ ಬಗ್ಗೆನೇ ವಿರೋಧ ವ್ಯಕ್ತ ಪಡಿಸುವವರು ಹಿಂದೂ ದೇವಸ್ಥಾನಗಳಲ್ಲಿ ವ್ಯಾಪಾರಕ್ಕೆ ಅವಕಾಶ ಕೊಡಿ ಎಂದರೆ ಅದು ಅರ್ಥವಿಲ್ಲದ ಹೇಳಿಕೆ ಎಂದು ಕಿಡಿಕಾರಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!