"ದೇವಸ್ಥಾನಗಳು ಸುಸ್ಥಿತಿಯಲ್ಲಿದ್ದರೆ ಗ್ರಾಮ ಸುಭಿಕ್ಷೆ" - ಶಾಸಕ ಸುರೇಶ್ ಶೆಟ್ಟಿ ಗುರ್ಮೆ
ಎರ್ಮಾಳು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಹಗಲು ರಥೋತ್ಸವ
ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಭೇಟಿ

ಪಡುಬಿದ್ರೆ: ಗ್ರಾಮದಲ್ಲಿ ದೈವ ದೇವಸ್ಥಾನಗಳು ಸುಸ್ಥಿತಿಯಲ್ಲಿ ಇದ್ದಾಗ ಆ ಗ್ರಾಮ ಸುಭಿಕ್ಷೆಯಾಗಿರಲು ಸಾಧ್ಯ ಎಂಬುದಾಗಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದ್ದಾರೆ.

ಅವರು ತುಳುನಾಡ ದೇವಸ್ಥಾನಗಳ ಪೈಕಿ ಆರಂಭಿಕವಾಗಿ ಧ್ವಜವೇರಿ ಜಾತ್ರೆ ನಡೆಯುವ ಎರ್ಮಾಳು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಹಗಲು ರಥೋತ್ಸವಕ್ಕೆ ಆಗಮಿಸಿ ಮಾತನಾಡಿದರು, ಎರ್ಮಾಳು ಜಪ್ಪು ಕಂಡೇವು ಅಡೆಪು ಎಂಬ ತುಳುನಾಡ ಆಡು ಬಾಷೆಯಂತೆ ಎರ್ಮಾಳು ದೇವಳದ ಜಾತ್ರೆಯೊಂದಿಗೆ ಆರಂಭಗೊAಡು ಕಂಡೇವು ದೇವಸ್ಥಾನ ಜಾತ್ರೆಯೊಂದಿಗೆ ಆ ವರ್ಷ ಜಾತ್ರೆಗಳು ಕೊನೆಗೊಳ್ಳುವುದು ಅನಾದಿ ಕಾಲಗಳಿಂದಲೂ ನಡೆದು ಬಂದ ಪದ್ಧತಿ. ಸಹಸ್ರಾರು ಭಕ್ತಾಧಿಗಳು ದೇವರ ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡಿದ್ದು ಅವರ ಇಷ್ಟಾರ್ಥಗಳು ನೆರವೇರಿ ಗ್ರಾಮ ಸುಭಿಕ್ಷೆಯಾಗಲೆಂದರು.

ಈ ಸಂದರ್ಭ ಅವರೊಂದಿಗೆ ಶಿವಪ್ರಸಾದ್  ಶೆಟ್ಟಿ ಎಲ್ಲದಡಿ,  ಎರ್ಮಾಳು ಹರೀಶ್ ಶೆಟ್ಟಿ ಕೃಷ್ಣಿ ವಿಠಲ, ಉದಯ ಶೆಟ್ಟಿ ಎರ್ಮಾಳು ಅಳಿವೆಕೋಡಿ, ಕೇಶವ ಮೊಯಿಲಿ ಮುಂತಾದವರಿದ್ದರು. 


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!