ಕುಡುಂಬೂರು ಗುತ್ತು ಧರ್ಮನೇಮೋತ್ಸವದ ಪೂರ್ವಭಾವಿಯಾಗಿ ಚಪ್ಪರ ಮುಹೂರ್ತ
ಜನವರಿ 19ರಂದು ಕುಡುಂಬೂರು ಗುತ್ತು ಧರ್ಮನೇಮೋತ್ಸವ
ನೆರವೇರಿದ ಚಪ್ಪರ ಮುಹೂರ್ತ

ಸುರತ್ಕಲ್ : ಕುಡುಂಬೂರು ಗುತ್ತು ಶ್ರೀ ಪಿಲಿಚಾಮುಂಡಿ, ಧೂಮಾವತಿ, ಜಾರಂದಾಯ ಬಂಟ ಪಂಚಶಕ್ತಿಗಳ ಧರ್ಮನೇಮೋತ್ಸವ ಜನವರಿ 19ರಂದು ಕುಡು0ಬೂರು ಗುತ್ತು ದೈವ ಚಾವಡಿಯಲ್ಲಿ ನಡೆಯಲಿದ್ದು, ಧರ್ಮನೆಮೋತ್ಸವದ ಪೂರ್ವಭಾವಿ ಅಂಗವಾಗಿ ಚಪ್ಪರ ಮುಹೂರ್ತವು ಇಂದು ಸಕಲ ವಿಧಿವಿಧಾನದೊಂದಿಗೆ ನಡೆಯಿತು.

ಈ ಸಂದರ್ಭದಲ್ಲಿ ವೇದಮೂರ್ತಿ ಶ್ರೀ ರಂಗ ಐತಾಲ್ ಕದ್ರಿ, ಭಾಗ್ಯ ಚಂದ್ರ ಭಟ್ ತೋಕೂರು, ಗುತ್ತಿನಾರ್ ಜಯರಾಮ್ ಶೆಟ್ಟಿ ಅನುವಂಶಿಕ ಆಡಳಿತ ಮುಕ್ತೆಸರರು ಕುಡುಂಬುರು ಗುತ್ತು, ಗುತ್ತಿನಾರ್ ಗುರುರಾಜ್ ಮಾಡ ಬೊಳ್ಳಿಲ್‌ಮಾರ ಗುತ್ತು, ಹೊಸಬೆಟ್ಟು ಗುತ್ತಿನಾರ್ ಬಾಲಕೃಷ್ಣ ಶೆಟ್ಟಿ, ಚಿನ್ನಯ್ಯ ಮಾಡ ಕಟ್ಲ ಬೀಡು, ರೋಹಿತಾಕ್ಷ ರೈ ಕುಳಾಯಿ ಗುತ್ತು, ರಮೇಶ್ ಶೆಟ್ಟಿ ಚಿಕ್ಕಪರಾರಿ, ಉಮೇಶ್ ಶೆಟ್ಟಿ ಪಂಜ ಗುತ್ತು, ಭಾಸ್ಕರ್ ಶೆಟ್ಟಿ ಮೂಡಾಡ್ಯರ ಗುತ್ತು, ಮುಕ್ತನಂದ ಮೆಲಾಂಟ, ಶರತ್ ಕುಮಾರ್ ಭಂಡಾರಿ ನಡಿಕಾಲ, ಸೀತಾರಾಮ ಶೆಟ್ಟಿ, ಸುಧಾಮ ಶೆಟ್ಟಿ, ಅರುಣ್ ಚೌಟ ಬಾಳದ ಗುತ್ತು, ಜಾರಪ್ಪ ಪೂಜಾರಿ, ಗಣಪ ಪೂಜಾರಿ, ಜಯಂತ್ ಸಾಲ್ಯಾನ್, ಮಾಧವ ಸುವರ್ಣ ಸೇರಿದಂತೆ ಕುಡುಂಬೂರು ಗುತ್ತು ಕುಟುಂಬಸ್ತರು, ಊರಿನ ಹತ್ತು ಸಮಸ್ತರು ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. 

800 ವರ್ಷಗಳ ಇತಿಹಾಸ ಪರಂಪರೆಯಿ0ದ ಆರಾಧನೆ ಮಾಡಿಕೊಂಡು ಬರುತ್ತಿರುವ ಪಿಲಿಚಾಮುಂಡಿ, ಧೂಮಾವತಿ, ಜಾರಂದಾಯ ಮತ್ತು ಮೂಲ ಮೈಸಂದಾಯ ಆದಿ ಪಂಚ ಶಕ್ತಿಗಳ ಸಾನಿಧ್ಯದಲ್ಲಿ ಧರ್ಮ ದೈವಗಳ ಅಪ್ಪಣೆಯಂತೆ ಕುಡುಂಬೂರು ಗುತ್ತಿನ ಗ್ರಾಮ ದೈವಗಳಿಗೆ ಧರ್ಮನೇಮವನ್ನು ಕೊಡುವುದೆಂದು ಕುಟುಂಬದ ಗುರು ಹಿರಿಯರು ನಿಶ್ಚಯಿಸಿದ್ದು, ಆ ಪ್ರಯುಕ್ತ ನಡೆಯುವ ಈ ಎಲ್ಲಾ ಧರ್ಮ ಕಾರ್ಯಗಳಿಗೆ ಕುಟುಂಬಿಕರು ಹಾಗೂ ಕ್ಷೇತ್ರದ ಭಕ್ತರು ಆಗಮಿಸಿ ಧರ್ಮ ಬೂಳ್ಯವನ್ನು ಸ್ವೀಕರಿಸಿ ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ ಕುಡುಂಬೂರು ಗುತ್ತು ಕುಟುಂಬಸ್ಥರು ವಿನಂತಿಸಿಕೊ0ಡಿದ್ದಾರೆ.

ಕುಡು0ಬೂರು ಗುತ್ತು ಪಿಲಿಚಾಮುಂಡಿ, ಧೂಮಾವತಿ, ಜಾರಂದಾಯ ಮತ್ತು ಪರಿವಾರ ದೈವಗಳಿಗೆ ಧರ್ಮನೇಮೋತ್ಸವವು ಜನವರಿ 19ರಂದು ನಡೆಯಲಿದೆ. 10ಗಂಟೆಗೆ ಧರ್ಮ ದೈವಗಳ ಭಂಡಾರ ಏರಿಸಿವುದು. 1 ಗಂಟೆಗೆ ಮಂಡ್ಯ ಮಧುಸೂದನ್ ದಾಸ್ ಮತ್ತು ಬಳಗದವರಿಂದ ಹರಿಕಥೆ "ಶ್ರೀ ಕೃಷ್ಣ ಗಾರುಡಿ" ನಡೆಯಲಿದೆ. ಸಾಯಂಕಾಲ 4 ಗಂಟೆಗೆ ಮೂಲ ಮೈಸಂದಾಯ ದೈವದ ಧರ್ಮನೇಮ. ಸಂಜೆ 6:30ಕ್ಕೆ ಕಾಂತೇರಿ ಧೂಮಾವತಿ ಬಂಟ, ಜಾರಂದಾಯ ಬಂಟ, ಸರಳ ಧೂಮಾವತಿ ಬಂಟ ಮತ್ತು ಬಬ್ಬರ್ಯ ದೈವಗಳಿಗೆ ಧರ್ಮನೇಮ. ರಾತ್ರಿ 10 ಗಂಟೆಗೆ ಪಿಲಿಚಾಮುಂಡಿ ದೈವದ ಎಣ್ಣೆ ಬೂಳ್ಯ ಮತ್ತು ಧರ್ಮನೇಮ. ರಾತ್ರಿ ನಿರಂತರ ಮಹಾ ಅನ್ನಸಂತರ್ಪಣೆ ನಡೆಯಲಿದೆ. ದಿನಾಂಕ: 21.01.2024 ಆದಿತ್ಯವಾರ ರಾತ್ರಿ 8 ಗಂಟೆಗೆ ಕುಟುಂಬದ ಪಂಜುರ್ಲಿ ದೈವದ ನೇಮೋತ್ಸವ ಜರಗಲಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!