"ಮಂಗಳೂರಿಗೂ ಬಂತು ತೇಲುವ ಸೇತುವೆ"
ಪಣಂಬೂರು ಬೀಚ್‌ ನಲ್ಲಿ ತೇಲುವ ಸೇತುವೆ
ಬೃಹತ್ ಅಲೆಗಳ ಮೇಲೆ ನಡೆದಾಡಿ ಸಂಭ್ರಮಿಸಿದ ಪ್ರವಾಸಿಗರು

ಪಣಂಬೂರು: ಪಣಂಬೂರು ಬೀಚ್‌ನಲ್ಲಿ ತೇಲುವ ಸೇತುವೆ ಪ್ರವಾಸಿಗರಿಗೆ ಹೊಸ ಆಕರ್ಷಣೆಯಾಗಿದೆ. ಮಲ್ಪೆ ಬೀಚ್‌ ಬಳಿಕ ಇದೀಗ ದ.ಕ. ಬೀಚ್‌ನಲ್ಲಿ ಮೊದಲ ತೇಲುವ ಸೇತುವೆ ಇದಾಗಿದೆ. ವಿಧಾನಸಭಾ ಸ್ಪೀಕರ್‌ ಯು.ಟಿ ಖಾದರ್‌ ಬುಧವಾರ ಉದ್ಘಾಟಿಸಿದರು.

ಬೀಚ್‌ ಪ್ರವಾಸೋದ್ಯಮಕ್ಕೆ ಸರಕಾರವು ಎಲ್ಲ ರೀತಿಯ ಸಹಕಾರ ನೀಡುವ ಬಗ್ಗೆ ಪ್ರವಾಸೋದ್ಯಮ ಸಚಿವರಲ್ಲಿ ಮಾತುಕತೆ ನಡೆಸಲಾಗುವುದು ಎಂದು ಸ್ಪೀಕರ್‌ ಯು.ಟಿ ಖಾದರ್‌ ಹೇಳಿದರು. ಬೀಚ್‌ ನಿರ್ವಹಣ ಸಂಸ್ಥೆಯ ಪಾಲುದಾರರಾದ ಲಕ್ಷ್ಮೀಶ ಭಂಡಾರಿ, ರಾಜೇಶ್‌ ಹುಕ್ಕೇರಿ ಉಪಸ್ಥಿತರಿದ್ದರು.

ಸುಮಾರು 150 ಮೀಟರ್‌ ಉದ್ದವಿದ್ದು 50ಕ್ಕೂ ಮಿಕ್ಕಿ ಪ್ರವಾಸಿ ಗರು ಏಕಕಾಲಕ್ಕೆ ಸೇತುವೆಯ ತುದಿಯಲ್ಲಿ ನಿಂತು ಸೂರ್ಯಾಸ್ತಮಾನ ನೋಡಬಹುದು. 150 ಮೀಟರ್ ಉದ್ದದ ತೇಲುವ ಸೇತುವೆ ವಿಹಾರಕ್ಕೆ 150 ರೂ ಪಾವತಿಸಬೇಕು.

ಬೃಹತ್‌ ಅಲೆಯ ನಡುವೆ ಸೇತುವೆಯಲ್ಲಿ ಪ್ರವಾಸಿಗರು ನಡೆದಾಡಿ ಸಂಭ್ರಮಿಸಿದರು. ತೇಲುವ ಸೇತುವೆಯ ಉದ್ದಕ್ಕೂ ಒಟ್ಟು 12 ಮಂದಿ ಲೈಫ್‌ ಗಾರ್ಡ್ಸ್‌ ಪ್ರವಾಸಿಗರ ಸುರಕ್ಷತೆಗೆ ನೇಮಿಸಲಾಗಿದೆ. ಲೈಫ್‌ ಜಾಕೆಟ್‌ ಕಡ್ಡಾಯ ಮಾಡಲಾಗಿದೆ. ಬೀಚ್‌ ನ್ನು ಸರಕಾರ ಮತ್ತು ಖಾಸಗೀ ಸಹಭಾಗಿತ್ವದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ.

ಮಲ್ಪೆ ಬೀಚ್‌ ಬಳಿಕ ಇದೀಗ ದ.ಕ. ಬೀಚ್‌‍ನಲ್ಲಿ ಮೊದಲ ತೇಲುವ ಸೇತುವೆ ಇದಾಗಿದೆ. 150 ಮೀ. ಉದ್ದವಿರುವ ತೇಲುವ ಸೇತುವೆಯು 50ಕ್ಕೂ ಮಿಕ್ಕ ಪ್ರವಾಸಿಗರು ಏಕಕಾಲಕ್ಕೆ ಸೇತುವೆಯ ತುದಿಯಲ್ಲಿ ನಿಂತು ಸೂರ್ಯಾಸ್ತಮಾನ ನೋಡಬಹುದು. ಪ್ರವಾಸಿಗರ ಸುರಕ್ಷೆಗಾಗಿ ತೇಲು ಸೇತುವೆಯ ಉದ್ದಕ್ಕೂ ಒಟ್ಟು 12 ಮಂದಿ ಜೀವರಕ್ಷಕರನ್ನು ನಿಯೋಜಿಸಲಾಗಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!