"ಶ್ರೀರಾಮನಿಗಾಗಿ ಪಾದಯಾತ್ರೆ ಅಯೋಧ್ಯೆಗೆ ಹೊರಟ ಮುಸ್ಲಿಂ ಯುವತಿ"
ಮುಂಬೈನಿಂದ ಅಯೋಧ್ಯೆಗೆ ಪಾದಯಾತ್ರೆ ಹೊರಟ ಮುಸ್ಲಿಂ ಯುವತಿ

ಕೈಯಲ್ಲಿ ಕೇಸರಿ ಧ್ವಜ, ಬಾಯಲ್ಲಿ ರಾಮ ನಾಮ, ರಾಮ ಭಕ್ತೆ ಶಬನಮ್‌ ಶೇಖ್‌

ಮನಸ್ಸಿನಿಂದ ದೇವರ ಹುಡುಕುವವನಿಗೆ ಜಾತಿ, ಧರ್ಮ ಅಡ್ಡಿಯಾಗದು ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಇದು ಇತಿಹಾಸಿದಲ್ಲೂ ರುಜುವಾತಾಗಿದೆ. ಮತ್ತೆ ಇಂತಹದ್ದೆ ವಿಚಾರ ಎಲ್ಲರ ಗಮನ ಸೆಳೆಯುತ್ತಿದೆ. ಇನ್ನೇನು ಕೆಲ ದಿನಗಳಲ್ಲೇ ಅಯೋಧ್ಯೆಯ ರಾಮಮಂದಿರ ಉದ್ಘಾಟನೆಯಾಗುತ್ತಿದೆ. ಇತ್ತ ರಾಮನ ಭಕ್ತಿಯಲ್ಲಿ ಮುಳುಗಿದ ಮುಸ್ಲಿಂ ಯುವತಿ ಶಬನಮ್‌ ಶೇಖ್‌ ಇದೀಗ ಎಲ್ಲರ ಗಮನ ಸೆಳೆಯುತ್ತಿದ್ದಾಳೆ.

ರಾಮನ ಭಕ್ತಿಯಲ್ಲಿ ಮುಳುಗಿರುವ ಶಬನಮ್‌ ಶೇಖ್‌ ಭುಜದ ಮೇಲೆ ಕೇಸರಿ ಧ್ವಜ, ಬೆನ್ನಿನಲ್ಲಿ ರಾಮ ಮಂದಿರದ ಫೋಟೋ ಮತ್ತು ತಲೆ ಮೇಲೆ ಹಿಜಾಬ್ ಧರಿಸಿರುವ ಯುವತಿ. ಮುಂಬೈನಿಂದ ತನ್ನ ಇಬ್ಬರು ಸ್ನೇಹಿತರೊಂದಿಗೆ ಸುಮಾರು 1,500 ಕಿ.ಮೀ ದೂರ ಕ್ರಮಿಸಿ ಅಯೋಧ್ಯೆ  ಶ್ರೀರಾಮನ ದರ್ಶನ ಪಡೆಯಲಿದ್ದಾರೆ. ಇಲ್ಲಿಯವರೆಗೆ ಶಬನಮ್‌ ಇನ್ನೂರೈವತ್ತು ಕಿಲೋಮೀಟರ್ ಕ್ರಮಿಸಿ ನಾಸಿಕ್ ತಲುಪಿದ್ದಾಳೆ. ಅಕಾಶ ಸಿಕ್ಕರೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡುವುದಾಗಿ ಶಬನಂ ಹೇಳಿದ್ದಾರೆ.

ಶಬನಮ್‌ಗೆ ರಾಮನನ್ನು ನೋಡುವ ಆಸೆ. ಶಬನಮ್‌ಗೆ ಬಾಲ್ಯದಿಂದಲೂ ರಾಮಾಯಣದ ಅಭಿರುಚಿ ಇತ್ತು. ಅವರು ಸಂಪೂರ್ಣ ಮಹಾಭಾರತ ಧಾರಾವಾಹಿಯನ್ನು ವೀಕ್ಷಿಸಿದ್ದಾರೆ. ರಾಮಾಯಣ ಮತ್ತು ಮಹಾಭಾರತಗಳು ಅವಳ ಜೀವನದ ಮೇಲೆ ಬಹಳ ಪ್ರಭಾವ ಬೀರಿದವು. ಅವಳು ಶ್ರೀರಾಮನನ್ನು ತನ್ನ ರೋಲ್ ಮಾಡೆಲ್ ಎಂದು ಪರಿಗಣಿಸುತ್ತಾಳೆ. ಆಕೆಯ ಕುಟುಂಬಸ್ಥರೂ ಆಕೆಯನ್ನು ಅಯೋಧ್ಯೆಗೆ ಹೋಗುವಂತೆ ಪ್ರೋತ್ಸಾಹಿಸಿದರು. ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ನಂತರ ಅಯೋಧ್ಯೆಯ ಧನಿಪುರದಲ್ಲಿ ನಿರ್ಮಾಣ ಹಂತದಲ್ಲಿರುವ ಮಸೀದಿಗೆ ತೆರಳಲಿದ್ದಾರೆ. ಈ ಮೂಲಕ ತನಗೆ ಎರಡೂ ಧರ್ಮಗಳಲ್ಲಿ ಆಸಕ್ತಿ ಇದೆ ಎಂಬ ಸಂದೇಶವನ್ನು ಸಾರಲು ಹೊರಟಿದ್ದಾಳೆ. ಆಕೆಯ ಭದ್ರತೆಗಾಗಿ ಮಹಾರಾಷ್ಟ್ರ ಸರ್ಕಾರ ಮೂವರು ಮಹಿಳಾ ಪೊಲೀಸರನ್ನು ನಿಯೋಜಿಸಿದೆ.

ರಾಮಮಂದಿರ ಟ್ರಸ್ಟ್‌ನಿಂದ ಸಾವಿರಾರು ಗಣ್ಯರಿಗೆ ಆಹ್ವಾನ ಬಂದಿದ್ದು, ಸಿದ್ಧತೆಗಳು ಭರದಿಂದ ಸಾಗಿವೆ. ಈ ಉತ್ಸಾಹದ ನಡುವೆ, ಮುಂಬೈನಿಂದ ಬಂದ ಮುಸ್ಲಿಂ ಯುವತಿ ಶಬನಮ್‌ ಶೇಖ್, ಭಗವಾನ್ ರಾಮನ ದರ್ಶನಕ್ಕಾಗಿ ಹಂಬಲಿಸುತ್ತಾ ಅಯೋಧ್ಯೆಗೆ ಯಾತ್ರೆ ಆರಂಭಿಸಿರುವುದು ಭಾರೀ ಸದ್ದು ಮಾಡ್ತಿದೆ. ಇದು ಧರ್ಮಗಳ ಆಚೆಗಿನ ಭಕ್ತಿಯ ಸಾರವಾಗಿದೆ. ಆಕೆ ರಾಮನ ಭಕ್ತೆಯಾಗಿದ್ದು, ಬರೋಬ್ಬರಿ 1,425 ಕಿ.ಮೀ ದೂರ ಸಾಗಿ ರಾಮನ ದರ್ಶನ ಪಡೆಯಲು ಮುಂದಾಗಿದ್ದಾಳೆ. ರಾಮನ ಕಟ್ಟಾ ಭಕ್ತೆ ಮತ್ತು ಸ್ವಯಂ ಘೋಷಿತ ಸನಾತನಿ ಶಬನಮ್‌ ಶೇಖ್ ಅವರು ಮುಂಬೈನಿಂದ ಅಯೋಧ್ಯೆಗೆ ಪಾದಯಾತ್ರೆಯನ್ನು ಪ್ರಾರಂಭಿಸಿದ್ದಾರೆ.

ಶ್ರೀರಾಮನ ಬ್ಯಾನರ್ ಹಿಡಿದು ನೂರು ಕಿಲೋಮೀಟರ್ ದಾಟಿದ್ದಾಳೆ. ದಾರಿಯುದ್ದಕ್ಕೂ ಶ್ರೀರಾಮನ ಭಕ್ತರೊಂದಿಗೆ ಆಕೆ ಮುಖಾಮುಖಿ ಮಾತುಕತೆ ಹಾಗೂ ದಾರಿಯುದ್ಧಕ್ಕೂ ಆಕೆಯ ಜೈಶ್ರೀರಾಮ್ ಘೋಷಣೆಯ ವಿಡಿಯೋಗಳು ಈಗ ವೈರಲ್ ಆಗ್ತಿವೆ. ಈ ಎಲ್ಲಾ ವಿಡಿಯೋಗಳನ್ನು ಹಾಗೂ ಆಕೆ ಭೇಟಿಯಾದ ಭಕ್ತರ ಕುರಿತಾದ ವಿಚಾರಗಳನ್ನು ತನ್ನ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಆಕೆ ಹಂಚಿಕೊಳ್ಳುತ್ತಾಳೆ. ಈ ವಿಡಿಯೋಗಳಿಗೆ ಸಿಕ್ಕಾಪಟ್ಟೆ ಮೆಚ್ಚುಗೆ ಕೇಳಿಬಂದಿದೆ.

"ಜೈ ಶ್ರೀ ರಾಮ್. ಶ್ರೀರಾಮನಿಗೆ ಸಾಕ್ಷಿಯಾಗುವುದು ನನ್ನ ಜೀವನದ ಉದ್ದೇಶವಾಗಿದೆ, ಹಾಗಾಗಿ ಅಯೋಧ್ಯೆಗೆ ನನ್ನ ಪ್ರಯಾಣ" ಎಂದು ಶಬನಮ್‌ ಶೇಖ್ ಹರ್ಷ ವ್ಯಕ್ತಪಡಿಸಿದ್ದಾರೆ. ಆಕೆಯ ಪ್ರಯತ್ನವು ಸ್ನೇಹಿತರು, ಹಿಂದೂಗಳು ಮತ್ತು ಹಿಂದೂ ಸಂಘಟನೆಗಳ ಸದಸ್ಯರಿಂದ ಅಪಾರ ಬೆಂಬಲವನ್ನು ಪಡೆಯುತ್ತಿದೆ. ಸಾಮಾಜಿಕ ಮಾಧ್ಯಮದಲ್ಲಿ ನಕಾರಾತ್ಮಕ ಕಾಮೆಂಟ್‌ಗಳನ್ನು ಎದುರಿಸುತ್ತಿದ್ದರೂ, ಶಬ್ನಮ್ ತನ್ನ ಆಧ್ಯಾತ್ಮಿಕ ಗುರಿ ತಲುಪಲು ದೃಢನಿಶ್ಚಯ ಮಾಡಿದ್ದಾಳೆ. ಕೈಯಲ್ಲಿ ಕೇಸರಿ ಧ್ವಜವನ್ನು ಹಿಡಿದುಕೊಂಡು ಮುಂದೆ ಸಾಗುತ್ತಿರುವ ಶಬ್ನಮ್ ಒಗ್ಗಟ್ಟಿನ ಮಂತ್ರ ಜಪಿಸಿದ್ದಾಳೆ. ಆಕೆ ಹೋದಲೆಲ್ಲಾ ಮುಸ್ಲಿಮರು ಸೇರಿದಂತೆ ಜನರು ಅವಳನ್ನು ಉತ್ಸಾಹದಿಂದ 'ಜೈ ಶ್ರೀ ರಾಮ್' ಎಂದು ಸ್ವಾಗತಿಸುತ್ತಾರೆ.

ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರದ ಮುಂಬರುವ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜನವರಿ 22 ರಂದು ದೇವಾಲಯವನ್ನು ಅನಾವರಣಗೊಳಿಸಲಿದ್ದು, ಅದರ ಪವಿತ್ರ ಗರ್ಭಗುಡಿಯಲ್ಲಿ ರಾಮಲಲ್ಲಾ ವಿಗ್ರಹವನ್ನು ಇರಿಸಲಾಗಿದೆ.

ರಾಮ ಮಂದಿರದ ಉದ್ಘಾಟನೆಯ ಸಮಯದಲ್ಲಿ, ಧಾರ್ಮಿಕ ಸಮಾರಂಭಗಳು ರಾಮ್ ಲಲ್ಲಾ ಪ್ರತಿಷ್ಠಾಪನೆಯ ಜೊತೆಗೆ ರಾಷ್ಟ್ರವ್ಯಾಪಿ 500,000 ದೇವಾಲಯಗಳನ್ನು ಅಲಂಕಾರಗೊಳ್ಳುತ್ತಿವೆ. ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ದೃಢೀಕರಿಸಿದಂತೆ ಆರ್‌ಎಸ್‌ಎಸ್ ಅಧಿಕಾರಿಗಳು ಈ ಕಾರ್ಯಕ್ರಮಗಳನ್ನು ಮೇಲ್ವಿಚಾರಣೆ ಮಾಡುತ್ತಾರೆ, ಸನಾತನ ಧರ್ಮದ ಅನುಯಾಯಿಗಳು ವಿಶ್ವದೆಲ್ಲೆಡೆ ಪ್ರತಿ ದೇವಾಲಯದಲ್ಲಿ ಧಾರ್ಮಿಕ ಕಾರ್ಯಗಳ ನಡೆಸಲಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!