ಮಂಗಳೂರಿನಲ್ಲಿ ಅಪರೂಪಕ್ಕೆ ಸಾಕ್ಷಿಯಾದ ಪುರಸಭೆ ಚುನಾವಣೆ.!!
ತಂಗಿ ವಿರುದ್ಧ ಅಕ್ಕ ಸೋಲು - ಪತ್ನಿಗೆ ಗೆಲುವು, ಸೋತ ಪತಿ

ಮಂಗಳೂರು: ಸೋಮೇಶ್ವರ ಗ್ರಾಮ ಪಂಚಾಯಿತಿಯನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸಿದ ಬಳಿಕ ಇದೆ ಮೊದಲ ಬಾರಿಗೆ ಚುನಾವಣೆ  ನಡೆದಿದೆ. ಡಿಸೆಂಬರ್ 27 ರಂದು ಚುನಾವಣೆ ನಡೆದಿದ್ದು, ಇಂದು (ಡಿ.30) ಫಲಿತಾಂಶ ಪ್ರಕಟವಾಗಿದೆ. ಈ ಚುನಾವಣೆಯಲ್ಲಿ ಎರಡು ಅಚ್ಚರಿಯ ಸಂಗತಿ ನಡೆದಿವೆ. ಒಂದು ಕಡೆ ಅಕ್ಕ, ತಂಗಿ ನೇರಾ-ನೇರಾ ಸ್ಪರ್ಧೆ ಹಾಗೂ ಪ್ರತ್ಯೇಕ ವಾರ್ಡ್ಗಳಲ್ಲಿ ಗಂಡ-ಹೆ0ಡತಿ ಸ್ಪರ್ಧಿಸಿ ಅಪರೂಪದ ಘಟನೆಗೆ ಸಾಕ್ಷಿಯಾಗಿದೆ.

ಸೋಮವೇಶ್ವರ ಪುರಸಭೆ ಚುನಾವಣೆಯಲ್ಲಿ ಅಕ್ಕ-ತಂಗಿಯರು ಸ್ಪರ್ಧಿಸಿದ್ದರು. ಪುರಸಭೆಯ ಮೂರನೇ ವಾರ್ಡ್ ಲಕ್ಷ್ಮಿಗುಡ್ಡೆ ಪ್ರಕಾಶ್ ನಗರದಲ್ಲಿ ಸಹೋದರಿಯರ ನಡುವೆ ಪೈಪೋಟಿ ಏರ್ಪಟ್ಟಿತ್ತು. ತಂಗಿ, ಬಿಜೆಪಿ ಅಭ್ಯರ್ಥಿ ಸ್ವಪ್ನ ಶೆಟ್ಟಿ ಅವರು ಅಕ್ಕ, ಕಾಂಗ್ರೆಸ್ ಬೆಂಬಲಿತ ಸಿಪಿಐಎಂ ಅಭ್ಯರ್ಥಿ ಸೌಮ್ಯ ಎಸ್ ಪಿಲಾರ್ ವಿಜಯಶಾಲಿಯಾಗಿದ್ದಾರೆ. ಬಿಜೆಪಿಯ ಸ್ವಪ್ನ ಶೆಟ್ಟಿ ಅವರಿಗೆ 340 ಮತಗಳು ಬಿದ್ದಿವೆ. ಇನ್ನು ಸಿಪಿಐಎಂ ಅಭ್ಯರ್ಥಿ ಸೌಮ್ಯಾ ಅವರು 153 ಮತಗಳನ್ನು ಸಂಪಾದಿಸಿಕೊ0ಡಿದ್ದಾರೆ.

ದಂಪತಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾಗಿ ಎರಡು ವಾರ್ಡ್ಗಳಲ್ಲಿ ಸ್ಪರ್ಧಿಸಿದ್ದರು. ಇದೀಗ ಹೊರಬಿದ್ದ ಫಲಿತಾಂಶದಲ್ಲಿ ಒಂದು ವಾಡ್ ನಲ್ಲಿ ಪತ್ನಿ ಗೆಲುವು ಸಾಧಿಸಿದ್ದರೇ, ಮತ್ತೊಂದು ವಾರ್ಡ್ನಲ್ಲಿ ಪತಿ ಸೋತಿದ್ದಾರೆ. ಪತ್ನಿ ಅಮೀನಾ ಬಶೀರ್ ವಿಜಯಪತಾಕೆ ಹಾರಿಸಿದ್ದು, ಪತಿ ಬಶೀರ್ ಮುಂಡೋಳಿ ಒಂದು ಮತದ ಅಂತರದಿ0ದ ಸೋತಿದ್ದಾರೆ.

 

ಸೋಮೇಶ್ವರ ಪುರಸಭೆ ಚುನಾವಣೆಯಲ್ಲಿ ಒಟ್ಟು 23 ಸ್ಥಾನಗಳಿಗೆ 50 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಪುರಸಭೆಯ ಎಲ್ಲಾ 23 ಸ್ಥಾನಗಳಿಗೆ ಸ್ಪರ್ಧಿಸಿದ್ದ ಬಿಜೆಪಿಯ 16 ಅಭ್ಯರ್ಥಿಗಳು ಜಯಗಳಿಸಿದ್ದು, 22 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದ್ದ ಕಾಂಗ್ರೆಸ್ ನ ಏಳು ಅರ್ಭ್ಯರ್ಥಿಗಳು ವಿಜಯಶಾಲಿಯಾಗಿದ್ದಾರೆ. 18 ಕಡೆಗಳಲ್ಲಿ ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳ ನಡುವೆ ನೇರಾ-ನೇರಾ ಸ್ಪರ್ಧೆಯಿತ್ತು.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!