ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್ (ರಿ) ಮಂಗಳೂರು ವತಿಯಿಂದ ಭಕ್ತಿ ಧರ್ಮದ ನಡೆ ಬೃಹತ್ ಪಾದಯಾತ್ರೆಗೆ ಚಾಲನೆ
ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್ (ರಿ) ಮಂಗಳೂರು ವತಿಯಿಂದ ಭಕ್ತಿ ಧರ್ಮದ ನಡೆ ಬೃಹತ್ ಪಾದಯಾತ್ರೆಗೆ ಚಾಲನೆ

ಮಂಗಳೂರು: ಮಂಗಳೂರು: ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್ (ರಿ) ಮಂಗಳೂರು ವತಿಯಿಂದ ೫ನೇ ವರ್ಷದ ಭಕ್ತಿ ಧರ್ಮದ ನಡೆ ಬೃಹತ್ ಪಾದಾಯಾತ್ರೆಗೆ ಗಣ್ಯಾತಿಗಣ್ಯರು ಚಾಲನೆ ನೀಡಿದರು. ಪರಮ ಪಾದದಿಂದ ಮೂಲ ಪಾದದೆಡೆಗೆ, ಸುಭಿಜ್ಞಾ ಸಮಾಜದ ಜನರೊಂದಿಗೆ ಭಕ್ತ ಜನರ ಪಾದಯಾತ್ರೆಯು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಚಿತ್ರಾಪುರದಿಂದ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸಾಗಲಿದೆ.

ಚಿತ್ರಾಪುರ ಮಠದ ಶ್ರೀಶ್ರೀಶ್ರೀ ವಿದ್ಯೇಂದ್ರ ತೀರ್ಥ ಶ್ರೀ ಪಾದರ ದಿವ್ಯಹಸ್ತದಿಂದ, ಮತ್ತು ಗುರುಪುರ ವಜ್ರದೇಹಿ ಮಠದ ಶ್ರೀಶ್ರೀಶ್ರೀ ರಾಜಶೇಖರಾನಂದ ಸ್ವಾಮೀಜಿ ಶುಭಾಶೀರ್ವದದೊಂದಿಗೆ ಚಾಲನೆ ನೀಡಿದರು. ವಿಶ್ವ ಹಿಂದೂ ಪರಿಷದ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್, ಬಿಜೆಪಿ ಶಾಸಕ ಡಾ. ವೈ ಭರತ್ ಶೆಟ್ಟಿ, ಮಂಗಳೂರು ಯಾಂತ್ರಿಕ ಮೀನುಗಾರಿಕಾ ಸಹಕಾರ ಸಂಘ(ನಿ) ಮಂಗಳೂರು ಇದರ ಅಧ್ಯಕ್ಷ ಉಮೇಶ್ ಟಿ. ಕರ್ಕೇರ, ಹಿಂದೂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪೆರ್ಮುದೆ ಕೋಡಿಕೆರೆ ಸಂಚಾಲಕರು ರಮೇಶ್ ರಾವ್, ಕಾಟಿಪಳ್ಳ ಕೊರಗಜ್ಜ ಸಾನಿಧ್ಯದ ಆರಾಧಕರಾದ ತಿಲಕ್ ರಾಜ್ ಕಾಟಿಪಳ್ಳ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಚಿತ್ರಾಪುರ ಇಲ್ಲಿನ ಪ್ರಧಾನ ಅರ್ಚಕರು ಶ್ರೀ ಕಾರ್ತಿಕ್ ಭಟ್, ಬಿಜೆಪಿ ಜಿಲ್ಲಾ ಪ್ರಮುಖರಾದ ಗಣೇಶ್ ಹೊಸಬೆಟ್ಟು ಹಾಗೂ ಮಂಜಣ್ಣ ಸೇವಾ ಬ್ರಿಗೇಡ್ ಇದರ ಪದಾಧಿಕಾರಿಗಳು ಸೇರಿದಂತೆ ಎಲ್ಲಾ ಸದಸ್ಯರು ಉಪಸ್ಥರಿದ್ದರು.

ಐದನೇ ವರ್ಷದ ಭಕ್ತಿ ಧರ್ಮದ ನಡೆ

ಐದನೇ ವರ್ಷದ ಭಕ್ತಿ ಧರ್ಮದ ನಡೆ

ಪ್ರತಿ ವರ್ಷ ಲೋಕ ಕಲ್ಯಾಣಾರ್ಥವಾಗಿ ಶ್ರೀ ಚಿತ್ರಾಪುರ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ಶ್ರಿ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನದವರೆಗೆ ಭಕ್ತಿ ಧರ್ಮದ ನಡೆ ಬೃಹತ್ ಪಾದಯಾತ್ರೆಯು ನಡೆಯುತ್ತಿದೆ. ದಾರಿಯುದ್ದಕ್ಕೂ ಚೆಂಡೆ, ಕುಣಿತಾ ಭಜನಾ ತಂಡಗಳು ಭಾಗಿಯಾಗುತ್ತದೆ. ವಿವಿಧ ಸಂಘ ಸಂಸ್ಥೆಗಳು ಈ ಪುಣ್ಯ ಕಾರ್ಯದಲ್ಲಿ ಭಾಗಿಯಾಗಿ ಕಾರ್ಯಕ್ರಮದ ಯಶಸ್ವಿಗೆ ಕಾರಣೀಕರ್ತರಾಗುತ್ತಾರೆ. 

 

ದಾರಿ ಅಲ್ಲಲ್ಲಿ ವಿವಿಧ ಸಂಘಟನೆಗಳು ಪಾನೀಯ ವ್ಯವಸ್ಥೆಗಳನ್ನು ಮಾಡುತ್ತಾರೆ. ಮುಂಜಾನೆ ಆರಂಭಗೊಳ್ಳುವ ಪಾದಯಾತ್ರೆಯಲ್ಲಿ ಸಹಸ್ರ ಮಂದಿ ಕಾಲ್ನಡಿಗೆ ಮೂಲಕ ದಿವ್ಯ ಸನ್ನಿಧಾನಕ್ಕೆ ತೆರಳುತ್ತಾರೆ. ಈ ಪುಣ್ಯಕಾರ್ಯದ ನಂತರ ಹತ್ತಾರು ಕುಟುಂಬಗಳಿಗೆ ಸಹಾಯ ಧನ ಹಸ್ತಾಂತರ ಮಾಡಲಾಗುತ್ತದೆ. ಈ ಪ್ರತಿ ವರ್ಷದಂತೆ ಈ ಬಾರಿಯೂ ಅಶಕ್ತ ಹಿಂದೂ ಕುಟುಂಬದ ಕಣ್ಣೀರೊರೆಸುವ ಕಾರ್ಯ ಮಾಡಲಾಗುತ್ತದೆ.

 


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!