ಗುರುಪುರ ಶ್ರೀ ವಜ್ರದೇಹಿ ಮಠದ "ವಜ್ರದೇಹಿ ಜಾತ್ರೆ" ನಾಳೆಯಿಂದ ಪ್ರಾರಂಭ
"ವಜ್ರದೇಹಿ ಜಾತ್ರೆ"
3 ದಿನಗಳ ಕಾಲ ನಡೆಯಲಿದೆ ವಿವಿಧ ಸಾಂಸ್ಕೃತಿಕ, ಧಾರ್ಮಿಕ ಹಾಗೂ ದೈವಗಳ ನೇಮೋತ್ಸವ

ಮಂಗಳೂರು : ಗುರುಪುರ ಶ್ರೀ ವಜ್ರದೇಹಿ ಮಠದ "ವಜ್ರದೇಹಿ ಜಾತ್ರೆ" ಯು ಜನವರಿ ೦3ರಿಂದ ಜನವರಿ 05ರ ವರೆಗೆ ನಡೆಯಲಿದ್ದು, ಧಾರ್ಮಿಕ ಪೂಜಾ ಕಾರ್ಯಕ್ರಮವು ಶ್ರೀ ರಾಜಶೇಖರಾನಂದ ಸ್ವಾಮೀಜಿ ಉಪಸ್ಥಿತಿ ಹಾಗೂ ಬ್ರಹ್ಮಶ್ರೀ ಅರುಣ್ ಭಟ್ ಖಂಡಿಗೆ ಅವರ ಆಧ್ವರ್ಯುತನದಲ್ಲಿ ಅದ್ಧೂರಿಯಿಂದ ನಡೆಯಲಿದೆ.

ಶ್ರೀ ಗುರು ರಾಮಾಂಜನೇಯ ದೇವರ ಸನ್ನಿಧಿಯಲ್ಲಿ ವಜ್ರದೇಹಿ ಜಾತ್ರೆಯು ಬಹು ವಿಜೃಂಭಣೆಯಿಂದ ಜರಗಲಿದ್ದು, ಆ ಪ್ರಯುಕ್ತ ನಡೆಯಲಿರುವ ಧಾರ್ಮಿಕ, ಸತ್ಸಂಗಾದಿ ಭಗವತ್ ಸೇವೆಯ ಎಲ್ಲಾ ಪುಣ್ಯ ಕಾರ್ಯದಲ್ಲಿ ಭಕ್ತಾದಿಗಳು ಪಾಲ್ಗೊಂಡು ದೇವರ ಹಾಗೂ ಶ್ರೀ ಗುರುವರ್ಯರ ಪರಮಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಜನವರಿ 03ರಿಂದ ಜನವರಿ 05ರ ತನಕ ವಿವಿಧ ಸಾಂಸ್ಕೃತಿಕ, ಧಾರ್ಮಿಕ ಹಾಗೂ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಜನವರಿ 05ರಂದು ಮೈಸಂದಾಯ, ರಕೇಶ್ವರಿ ಮತ್ತು ಅಣ್ಣಪ್ಪ ಧರ್ಮ ದೈವಗಳ ನೇಮೋತ್ಸವ ಜರುಗಲಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!