ಪುತ್ತೂರು: ತೋಟಕ್ಕೆ ನುಗ್ಗಿ ಒಂಟಿ ಸಲಗ ದಾಂಧಲೆ
ಪುತ್ತೂರು: ತೋಟಕ್ಕೆ ನುಗ್ಗಿ ಒಂಟಿ ಸಲಗ ದಾಂಧಲೆ

ಪುತ್ತೂರು: ಕಾಡಾನೆಯೊಂದು ತೋಟಕ್ಕೆ ನುಗ್ಗಿ ಅಪಾರ ಕೃಷಿ ಹಾನಿ ಮಾಡಿದ ಘಟನೆ ಜ.3 ರಂದು ಬುಧವಾರ ಮುಂಜಾನೆ ಕುಮಾರ್ ಪರ‍್ನಾಜೆ ಎಂಬವರ ತೋಟದಲ್ಲಿ ನಡೆದಿದೆ.

ಪುತ್ತೂರು-ಸುಳ್ಯ-ಕೇರಳ ಗಡಿಭಾಗದ ಆನೆಗುಂಡಿ ರಕ್ಷಿತಾರಣ್ಯದಿಂದ ಬಂದಿರುವ ಒಂಟಿ ಸಲಗ ಎಂದು ಹೇಳಲಾಗಿದೆ.

ಮಂಡೆಕೋಲು, ಮೂರೂರು, ಬೆಳ್ಳಿಪ್ಪಾಡಿ ಹಾಗೂ ಪಂಜಿಕಲ್ಲು ಪರಿಸರದಲ್ಲಿರುವ ಕೃಷಿ ತೋಟಗಳಿಗೆ ದಾಳಿ ನಡೆಸಿದ ಒಂಟಿ ಸಲಗ ಗುಂಪಿನಿಂದ ಬರ‍್ಪಟ್ಟು ಕನಕಮಜಲು ಮುಗೇರಿನಿಂದ ಪರ‍್ನಾಜೆಗೆ ಬಂದು ಹಾನಿಗೊಳಿಸಿ ಪುನಃ ಮುಗೇರಿನ ಕಡೆಗೆ ತೆರಳಿದೆ ಎನ್ನಲಾಗಿದೆ.

ತೋಟಕ್ಕೆ ನುಗ್ಗಿದ ಕಾಡಾನೆ ಬಾಳೆ ಗಿಡ, ಹಲಸು ಮರ ಹೀಗೆ ಅಪಾರ ಕೃಷಿ ನಾಶವಾಗಿದೆ. ಹೀಗಾಗಿ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಎದುರಾಗಿದ್ದು, ಕೃಷಿಕರು ರಾತ್ರಿ ತೋಟಕ್ಕೆ ಹೋಗದಂತೆ ಅರಣ್ಯ ಇಲಾಖೆಯವರು ಸೂಚನೆ ನೀಡಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!