ಕರಾವಳಿಯ ಹೆಮ್ಮೆಯ ಹುಲಿವೇಷಧಾರಿ ಆಶೋಕ್ ರಾಜ್ ನಿಧನ
ಕರಾವಳಿಯ ಹೆಮ್ಮೆಯ ಹುಲಿವೇಷಧಾರಿ ಆಶೋಕ್ ರಾಜ್ ನಿಧನ

ಸಾಂಪ್ರದಾಯಿಕ ಹುಲಿ ಕುಣಿತ ಹಾಗೂ ಹುಲಿ ವೇಷದಲ್ಲಿ ತನ್ನದೇ ಆದ ವಿಶೇಷ ಛಾಪನ್ನು ಮೂಡಿಸಿದ್ದ ಅಪ್ರತಿಮ ಹುಲಿ ವೇಷದಾರಿ, ಉಡುಪಿ ಕಾಡುಬೆಟ್ಟಿನ ಅಶೋಕ್ ರಾಜ್ ನಿಧನ ಹೊಂದಿದ್ದಾರೆ.

 ಕಳೆದ 36 ವರ್ಷಗಳಿಂದ ಉಡುಪಿ ಶ್ರೀಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಉಡುಪಿಯಲ್ಲಿ ಸಾಂಪ್ರದಾಯಿಕ ಹುಲಿವೇಷ ಧರಿಸಿದ್ದ ಅಶೋಕ್ ರಾಜ್ ರವರು 28 ವರ್ಷಗಳಿಂದ ಹುಲಿವೇಷ ಕುಣಿತ ತಂಡವನ್ನು ರಚಿಸಿದ್ದರು.

 ಕರಾವಳಿಯ ಸುಪ್ರಸಿದ್ಧ ಹಾಗೂ ಶ್ರೀಮಂತ ಕಲೆಯಾದ ಹುಲಿವೇಷ ಕುಣಿತವನ್ನು ಸಂರಕ್ಷಿಸಿ, ಬೆಳೆಸಿ, ಅಸಂಖ್ಯಾತ ಕಲಾವಿದರನ್ನು ತರಬೇತಿಗೊಳಿಸಿ,‌ ಹುಲಿವೇಷ ನ್ರತ್ಯವನ್ನು ಮತ್ತಷ್ಟು ಶ್ರೀಮಂತಗೊಳಿಸುವಲ್ಲಿ ಗಣನೀಯ ಪ್ರಮಾಣದಲ್ಲಿ ಶ್ರಮಿಸಿ, ಉತ್ತಮ ಕೊಡುಗೆಯನ್ನು ನೀಡಿದ‌ ಉಡುಪಿಯ ಹೆಮ್ಮೆಯ ಕಲಾವಿದರಾಗಿದ್ದರು.‌

 

 ಕಳೆದ ಹಲವು ತಿಂಗಳುಗಳ ಹಿಂದೆ ಬೆಂಗಳೂರಿನಲ್ಲಿ ಹೃದಯಾಘಾತ ಸಂಭವಿಸಿ ಆಸ್ಪತ್ರೆಗೆ ದಾಖಲಾಗಿದ್ದರು‌. ನಂತರ ಆರೋಗ್ಯ ಸಂಪೂರ್ಣ ಕ್ಷೀಣಿಸಿತ್ತು. ಅಪಾರ ದಾನಿಗಳ ನೆರವಿನಿಂದ ಚಿಕಿತ್ಸಾ ವೆಚ್ಚ ಕೂಡ ಬರಿಸಲಾಗಿತ್ತು. ಆದರೆ ಅನಾರೋಗ್ಯದ ತೀವ್ರ ಕುಸಿತದಿಂದ ಇಹಲೋಕ ತ್ಯಜಿಸಿದ್ದಾರೆ. ಕುಟುಂಬಸ್ಥರು, ಅಪಾರ ಬಂಧು ಬಳಗ, ಹುಲಿವೇಷದ ಅಭಿಮಾನಿಗಳನ್ನು ದುಃಖ ತೃಪ್ತರನ್ನಾಗಿಸಿದೆ‌.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!