ಮಂಗಳೂರು: ಹಿಂದೂ ಸಮಾಜದ ಕಣ್ಮನಿಗಳ ಪುಣ್ಯಸ್ಮರಣೆ - ಬಾಲಸಂರಕ್ಷಣ ಕೇಂದ್ರ ಕುತ್ತಾರ್ ಪದವಿನ ಆಶ್ರಯದ ಮಕ್ಕಳಿಗೆ ವಿಶೇಷ ಭೋಜನ
ಮಂಗಳೂರು: ಹಿಂದೂ ಸಮಾಜದ ಕಣ್ಮನಿಗಳ ಪುಣ್ಯಸ್ಮರಣೆ - ಬಾಲಸಂರಕ್ಷಣ ಕೇಂದ್ರ ಕುತ್ತಾರ್ ಪದವಿನ ಆಶ್ರಯದ ಮಕ್ಕಳಿಗೆ ವಿಶೇಷ ಭೋಜನ

ಮಂಗಳೂರು: ಮಂಜುನಾಥ್ ಮಂಗಳೂರು, ಸಂತೋಷ್ ಪೊಳಲಿ, ಜ್ಯೋತಿಷಿ ಕುಮಾರ್ ಇವರ ಪುಣ್ಯತಿಥಿಯ ಪ್ರಯುಕ್ತ ಕುತ್ತಾರ್ ಪದವು ಬಾಲಸಂರಕ್ಷಣಾ ಕೇಂದ್ರದಲ್ಲಿ ವಿಶೇಷ ಭೋಜನ ಕೂಟ ಆಯೋಜಿಸಲಾಯಿತು. 

ಸಾಮಾಜಿಕ ಕಳಕಳಿಯ ಒಟ್ಟಿಗೆ ಹಿಂದೂ ಧರ್ಮದ ಜಾಗೃತಿ , ರಕ್ಷಣೆಯ ಜವಾಬ್ದಾರಿಯನ್ನು ಮುಂದಿನ ಪೀಳಿಗಿಗೆ ತೋರಿಸಿ ಅವರ ಆದರ್ಶದ ಜೀವನಕ್ಕೆ ಚುಕ್ಕಿಇಟ್ಟು ಇದೇ ಫೆಬ್ರವರಿ ಹದಿಮೂರನೇ ತಾರೀಕಿಗೆ ಬರೋಬರಿ ಹದಿನೈದು ವರುಷಗಳು ಸಂದಿದೆ. 

ಆ ಆದರ್ಶದ ಹಿಂದೂ ಕಣ್ಮಣಿ ಮಂಜುನಾಥ್ ಮಂಗಳೂರು ಅವರ ಸವಿ ನೆನಪಿಗಾಗಿ ಹುಟ್ಟಿಕೊಂಡತಹ ಸಂಸ್ಥೆಯೇ ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್ ರಿ ಮಂಗಳೂರು.


ಹಿಂದುತ್ವವೆಂಬ ಗರಡಿಯ ಧರ್ಮ ಯಜ್ಞದಲ್ಲಿ ರಾಷ್ಟ್ರ ದೇವಿಗೆ ತನ್ನನ್ನು ತಾನು ಸಮರ್ಪಿಸಿಕೊಂಡ ಹಿಂದೂ ಯುವ ಕಣ್ಮಣಿ ಸಂತೋಷ್ ಪೊಳಲಿ (ಕ್ಯಾಂಡಲ್ ಸಂತು) . ಅದೇ ರೀತಿ ರಾಷ್ಟ್ರೀಯತೆಯ ಕೊಂಡಿ ಜಗತ್ತಿನ ಬಂಧವನ್ನು ಕಳೆದುಕೊಂಡು ಎದೆಯೊಳಗಿನ ನೋವನ್ನು ಹೊರಗೆಳೆಯಲಾಗದೆ ನೊಂದ ಜೀವ ತಾಯಿ ಭಾರತೀಯ ಪದತಲದಲ್ಲಿ ಲೀನನಾದ ಅಪ್ಪಟ್ಟ ಹಿಂದೂ ಯುವ ಸಾಮ್ರಾಟ್ ಕಾಸರಗೋಡು ಜ್ಯೋತಿಷ್ ಕುಮಾರ್

ಇವರ ಪುಣ್ಯ ತಿಥಿಯ ಪ್ರಯುಕ್ತ ಬಾಲಸಂರಕ್ಷಣಾ ಕೇಂದ್ರ ಕುತ್ತಾರ್ ಪದವು ಇಲ್ಲಿಯ ಆಶ್ರಮದ ಮಕ್ಕಳಿಗೆ ಮಧ್ಯಾಹ್ನದ ವಿಶೇಷ ಭೋಜನದ ವ್ಯವಸ್ಥೆಯನ್ನು ಕಲ್ಪಿಸಲಾಯಿತು.


 ಗೆಳೆಯರ ಬಳಗ ಸುರತ್ಕಲ್, ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್ ಮಂಗಳೂರು ಇದರ ಸರ್ವ ಸದಸ್ಯರು, ಅಭಿಮಾನಿ ಬಳಗ, ಹಿಂದೂ ಕಾರ್ಯಕರ್ತರು ಸೇರಿದ್ದರು. 

ಈ ವೇಳೆ ಮಂಜುನಾಥ್ ಮಂಗಳೂರು, ಸಂತೋಷ್ ಪೊಳಲಿ, ಜ್ಯೋತಿಷಿ ಕುಮಾರ್ ಇವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಒಂದು ನಿಮಿಷದ ಮೌನ ಪ್ರಾರ್ಥನೆ ಮಾಡಲಾಯಿತು. ಈ ವೇಳೆ ಬಿಜೆಪಿ ಮಂಗಳೂರು ಮಂಡಲದ ಅಧ್ಯಕ್ಷರಾದ ಜಗದೀಶ್ ಆಳ್ವ ಕುವತ್ತಬೈಲ್, ಪ್ರವೀಣ್ ಆಳ್ವ ಕುವತ್ತಬೈಲ್, ಕರುಣಾಕರ ಶೆಟ್ಟಿ ಮುಡಿಪು, ಸಂದೀಪ್ ಶೆಟ್ಟಿ ಅಂಬ್ಲಮೊಗರು, ಸುರೇಶ್ ಶೆಟ್ಟಿ ಅಂಬ್ಲಮೊಗರು, ಲತೀಶ್ ರೈ ಅಂಬ್ಲಮೊಗರು, ಪ್ರವೀಣ್ ಅಂಬ್ಲಮೊಗರು ಹಾಗೂ ರಾಜೇಶ್ ಕುತ್ತಾರ್ ಸೇರಿದಂತೆ ಹಲವು ಮಂದಿ ಗಣ್ಯರು ಸೇರಿದ್ದರು. ದೀಕ್ಷಿತ್ ಶೆಟ್ಟಿ ತೋಕೂರು ನೆರವೇರಿಸಿದರು.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!