ಮಂಗಳೂರು: ಇನ್ನೂ ಮುಕ್ತಿ ಸಿಗದೇ ಪರದಾಡುತ್ತಿರುವ "ಸ್ಟೇಟ್ ಬ್ಯಾಂಕ್ ಬಸ್ ಸ್ಟ್ಯಾಂಡ್".!?
ಅಧಿಕಾರಿಗಳ ಮೌನಕ್ಕೆ ಜನರ ಪರದಾಟ - ಅವ್ಯವಸ್ಥೆಯ ಆಗರ

ಮಂಗಳೂರು : ಇದು ನಿಜಕ್ಕೂ ಮಂಗಳೂರಿಗೆ ಕಪ್ಪು ಚುಕ್ಕೆ.. ಇದರ ಬಗ್ಗೆ ಎಷ್ಟು ಧ್ವನಿ ಎತ್ತಿದರು.. ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಿಲ್ಲ .. ಅಧಿಕಾರಿಗಳ ಮೌನಕ್ಕೆ ಜನರು ಪರದಾಡುತ್ತಿದ್ದು, ಈ ಸಮಸ್ಯೆಗೆ ಇನ್ನೂ ಮುಕ್ತಿ ಸಿಕ್ಕಿಲ್ಲ..!? ವರ್ಷಗಳೂ ಕಳೆದರೂ ಅಧಿಕಾರಿಗಳಿಗೆ ಎಚ್ಚರವಾಗಿಲ್ಲ.


ಹೌದು ನಾವು ಹೇಳುತ್ತಿರುವುದು ಸ್ಟೇಟ್ ಬ್ಯಾಂಕ್ ಬಸ್ ನಿಲ್ದಾಣದ ದೊಡ್ಡ ಸಮಸ್ಯೆ. ಸದ್ಯದ ಸ್ಟೇಟ್ ಬ್ಯಾಂಕ್ ಬಸ್ ಸ್ಟ್ಯಾಂಡ್ ಪರಿಸ್ಥಿತಿ ನೋಡಿದರೆ ಯಾವುದೋ ಆರ್ಥಿಕ ದಿವಾಳಿಯಾಗಿರುವ ನಗರದಲ್ಲಿದ್ದೇವೆ ಎನ್ನುವ ಭಾವನೆ. ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಇದ್ದದ್ದನ್ನು ಕಿತ್ತು ಹಾಕಿ ಸದ್ಯದ ಪರಿಸ್ಥಿತಿಯನ್ನು ಹೇಳೋರು.. ಕೇಳೋರು ಯಾರೂ ಇಲ್ಲ.


ಜನರಿಗೆ, ಪ್ರಾಯಾಣಿಕರಿಗೆ ನಿಲ್ಲಲು ಸೂರಿನ ವ್ಯವಸ್ಥೆಯೇ ಇಲ್ಲ. ಸರಕಾರ ತೋರುತ್ತಿರುವ ಅನಾದರಕ್ಕೆ, ಸ್ಟೇಟ್ ಬ್ಯಾಂಕ್ ಬಸ್ ಸ್ಟ್ಯಾಂಡ್ ಅವ್ಯವಸ್ಥೆಯ ಆಗರಕ್ಕೆ ಕನ್ನಡಿ ಹಿಡಿದಿದೆ. ನಿಲ್ಲಲು ಜಾಗವಿಲ್ಲದೆ ಪ್ರಯಾಣಿಕರು ಪರದಾಡುತ್ತಿರುವ ಬಗ್ಗೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಪರಿಸ್ಥಿತಿ ಎದುರಾಗಿ ಎರಡೂ. ಮೂರು ವರ್ಷಗಳೇ ಕಳೆದುಹೋಯಿತು. ಮಳೆ, ಬಿಸಿಲಿಗೆ ಬಳಲುವ ಜನರ ಸ್ಥಿತಿ ಎನ್ನೂ ಎಷ್ಟು ವರ್ಷ ಮುಂದುವರಿಯಲಿದೆಯೋ ಗೊತ್ತಿಲ್ಲ.  


ಪ್ರಯಾಣಿಕರ ಪಾಡು ನೋಡೋಕೆ ಸಾಧ್ಯವಿಲ್ಲ. ಬಿಸಿಲಿನ ಬೇಗೆಗೆ ನಿಲ್ಲಲು ಜಾಗವಿಲ್ಲ. ಜನರ ಬಗ್ಗೆ ಸ್ವಲ್ಪ ಕೂಡ ಯೋಚನೆ ಮಾಡದ ಅಧಿಕಾರಿಗಳು ಹಾಗೂ ಸಂಬ0ಧ ಪಟ್ಟ ಇಲಾಖೆ. ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಕೆಲಸ ಪ್ರಾರಂಭವಾಗಿ ಮೂರು ವರ್ಷ ಕಳೆದಿದೆ. ಯಾವ ಬೆಳವಣಿಗೆಯು ಇಲ್ಲ.. ಜನರಿಗೆ ನಿಲ್ಲುವ ವ್ಯವಸ್ಥೆಯನ್ನು ಒದಗಿಸಲಿಲ್ಲ. ಮೊದಲು ಇದ್ದ ನಿಲ್ದಾಣದಲ್ಲಿ ಆರಾಮವಾಗಿ ಪ್ರಯಾಣಿಕರು ನಿಲ್ಲುವ ವ್ಯವಸ್ಥೆಯಾದರೂ ಇತ್ತು. ಸದ್ಯ ಬಸಿಲು, ಮಳೆ, ಧೂಳು ಏನೇ ಇದ್ದರೂ ಪ್ರಯಾಣಿಕರು ತಡೆದು ನಿಲ್ಲುವ ಸ್ಥಿತಿ. 


ಸಂತೆ ಮೈದಾನದಂತಿರುವ ಬಸ್ ನಿಲ್ದಾಣದಲ್ಲಿ ಬಸ್ ಕಾಣದ ರೀತಿಯಲ್ಲಿ ಜನರನ್ನು ತುಂಬಿಸಿಕೊ0ಡು ಹೋಗುವ ಸಿಟಿ ಬಸ್‌ಗಳಿಗೇನು ಕಮ್ಮಿಯಿಲ್ಲ. ಆದರೆ ಬಿಸಿಲಿನ ಬೇಗೆ, ಧೂಳುಮಯ ವಾತಾವರಣಕ್ಕೆ ಜನರ ಪಾಡು ಅನುಭವಿಸಿದವರಿಗೆ ಮಾತ್ರ ಗೊತ್ತು. ಇದನ್ನು ಸಿರಿಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾದ ಪಾಲಿಕೆ ಯಾವುದೇ ಕ್ರಮವನ್ನೂ ತೆಗೆದುಕೊಂಡಿಲ್ಲ. ಬಸ್ ನಿಲ್ದಾಣಕ್ಕೆ ಈ ದುಸ್ಥಿತಿ ಬಂದಿದ್ದು ಇವತ್ತೇ ಅಲ್ಲ, ಮೊದಲಿಂದಲೂ ಹೀಗೆ ಇದೆ. ನಿಲ್ದಾಣದಲ್ಲಿ ಜನ ನಿಲ್ಲಲು ಒಂದು ಸೂರಿನ ವ್ಯವಸ್ಥೆಯು ಇಲ್ಲ. ವರ್ಷವೇ ಕಳೆದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.

ಇತ0ಹ ಪರಿಸ್ಥಿತಿ, ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ನಿಜಕ್ಕೂ ಯೋಚಿಸಬೇಕು. ಆದರೆ ಗಮನಕ್ಕೆ ಬಂದರು ಸಾರಿಗೆ ಇಲಾಖೆ ಅಧಿಕಾರಿಗಳಾಗಲಿ ಇನ್ನೂ ಕೂಡ ಎಚ್ಚೆತ್ತುಕೊಂಡಿಲ್ಲ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!