ಸುಳ್ಯ: (ಮಾ.5,6,7) ಪ್ರಸಿದ್ಧ ಮೇನಾಲ "ಶ್ರೀವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ"
ವಿಜೃಂಭಣೆಯಿ0ದ ನಡೆಯಲಿರುವ
ಶ್ರೀ ವಯನಾಟ್ ಕುಲವನ್ ದೈವಕಟ್ಟು ಮಹೋತ್ಸವ

ಸುಳ್ಯದ ಮೇನಾಲದಲ್ಲಿ ಎತ್ತರದ ಗಿರಿಶಿಖರದ ಮೇಲೆ ನೆಲೆನಿಂತಿರುವ ಬಹುಕಾರಣಿಕ ಪ್ರಸಿದ್ಧ ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವಕ್ಕೆ ಇಡೀ ಮೇನಾಲ ಕುಟುಂಬಸ್ಥರು ಮತ್ತು ಊರ ಪರವೂರ ಭಕ್ತಾದಿಗಳು ಮಾಡಿದ ಸಂಕಲ್ಪ ಕೂಡಿ ಬಂದಿದ್ದು, ಮೇನಾಲ ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಮಾರ್ಚ್ 5,6,7ರಂದು ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ ನಡೆಯಲಿದೆ.

ಸುಳ್ಯ ತಾಲೂಕಿನ ಸೀಮೆ ದೇವರಾದ ತೊಡಿಕಾನ ಶ್ರೀ ಮಲ್ಲಿಕಾರ್ಜುನ, ಗ್ರಾಮ ದೇವರಾದ ಕರ್ಲಪ್ಪಾಡಿ ಶ್ರೀ ಶಾಸ್ತಾವು ದೇವಸ್ಥಾನದ ವ್ಯಾಪ್ತಿಯ ಕುತ್ತಿಕೋಲ್ ಶ್ರೀ ತಂಬೂರಾಟಿ ಭಗವತಿ ಕ್ಷೇತ್ರದ ಪರಿಧಿಯಲ್ಲಿರುವ ಸುಳ್ಯ ಪ್ರಾದೇಶಿಕ ಸಮಿತಿಯ ಮೇನಾಲ ಶ್ರೀ ವಯನಾಟ್ ಕುಲವನ್ ದೈವಸ್ಥಾನಕ್ಕೆ ಐತಿಹಾಸಿಕ ಪ್ರಸಿದ್ಧಿಯಿದೆ. ಇಲ್ಲಿ ವರ್ಷಾವದಿ ಪರ್ವವು ನಡೆಯುತ್ತಾ ಬಂದಿರುವ0ತೆ ದಿನಾಂಕ: 05-03-2024ರಿಂದ 07-03-2024ರವರೆಗೆ ಬಹು ವಿಜೃಂಭಣೆಯಿ0ದ ನಡೆಯಲಿದೆ.

ಮಾರ್ಚ್ 6ರಂದು ನಡೆಯಲಿರುವ ಶ್ರೀ ಕೋರಚ್ಚನ್ ದೈವದ ವೆಳ್ಳಾಟಂ, ಶ್ರೀ ಕಂಡನಾರ್ ಕೇಳನ್ ದೈವದ ವೆಳ್ಳಾಟಂ, ಶ್ರೀ ವಿಷ್ಣುಮೂರ್ತಿ ದೈವದ ತಿಡಂಙಲ್, ಶ್ರೀ ವಯನಾಟ್ ಕುಲವನ್ ದೈವದ ವೆಳ್ಳಾಟಂ ಮಹೋತ್ಸವದ ನೇರಪ್ರಸಾರದ ವ್ಯವಸ್ಥೆಯಿದ್ದು, ದಕ್ಷ ನ್ಯೂಸ್(DAKSHA NEWS) ಯೂ ಟುಬ್ ಚಾನಲ್ ನಲ್ಲಿ ನೇರಪ್ರಸಾರಗೊಳ್ಳಲಿದೆ. 

ದೈವಸ್ಥಾನದ ಇತಿಹಾಸ

ಪರಶಿವನ ಅಂಶಾವತಾರವಾದ ಶ್ರೀ ವಯನಾಟ್ ಕುಲವನ್ ಪುಣ್ಯ ಭೂಮಿಯಲ್ಲಿ ಅವತರಿಸಿ ವಯನಾಡಿನಲ್ಲಿ ನೆಲೆಸಿ, ವಯನಾಡಿನ ರಕ್ಷಕನಾಗಿ, ಬೇಟೆಗಾರ ದೈವವಾಗಿ ಮಧುಮಾಂಸ ಪ್ರಿಯನಾಗಿ ಶ್ರೀ ತೊಂಡೆಚ್ಚನ್ ಎಂದು ಕರೆಯಲ್ಪಡುವನು. ಧರ್ಮಸ್ಥಾಪನೆಗಾಗಿ ಭೂಲೋಕದಲ್ಲಿ ಸಂಚರಿಸಿ, ತುಳುನಾಡಿನಲ್ಲಿ ಅಲ್ಲಲ್ಲಿ ನೆಲೆನಿಂತ ಐತಿಹ್ಯವಿದೆ. ಮನುಕುಲದ ಉದ್ಧಾರಕ್ಕಾಗಿ ಒಂದು ಕುಲದಲ್ಲಿ ಅವತಾರ ಪುರುಷನಾಗಿ ಭೂಮಿಗೆ ಇಳಿದ ಈಶ್ವರ ರೂಪಿ ಮಾನವರಂತೆ ಜನಿಸಿ ತೀಯ ಸಮುದಾಯದ ಆದಿ ದಿವ್ಯನಾಗಿ ಧರ್ಮರಕ್ಷಕನಾಗಿ ದೇವತಾ ಶಕ್ತಿಯಾಗಿ ಸ್ಥಾನಮಾನ ಸ್ವೀಕರಿಸಿ ನೆಲೆನಿಂತು ಆರಾಧನೆಗೊಂಡ ದೈವ ಈ ವಯನಾಟ್ ಕುಲವನ್. ಶ್ರೀ ವಯನಾಟ್ ಕುಲವನ್ ನೆಲೆನಿಂತ ಪುಣ್ಯನೆಲೆ ಮೇನಾಲದಲ್ಲಿ 300 ವರ್ಷಗಳಿಂದ ಆರಾಧನೆ ಮಾಡುತ್ತಿದ್ದು. ವರ್ಷಾವದಿ ಪರ್ವಗಳನ್ನು ಮೇನಾಲ ಕುಟುಂಬಸ್ಥರು ಊರ ಪರವೂರ ಭಕ್ತಾಧಿಗಳು ಬಹಳ ಭಯ ಭಕ್ತಿಯಿಂದ ನಿಯಮ ನಿಷ್ಠೆಯಿಂದ ನಡೆಸುತ್ತಾ ಬರುತ್ತಿದ್ದಾರೆ. ದೈವಸಂಕಲ್ಪದ0ತೆ ಇದೀಗ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ ನಡೆಸಲು ತೀರ್ಮಾನಿಸಿದ್ದು, ಗುರುಹಿರಿಯರ ದೈವ ದೇವರುಗಳ ಅನುಗ್ರಹದೊಂದಿಗೆ ಕುತ್ತಿಕೋಲ್ ಶ್ರೀ ತಂಬುರಾಟಿ ಭಗವತಿ ಕ್ಷೇತ್ರದ ಪೂಜ್ಯ ಸ್ಥಾನಕರು ಮತ್ತು ಆಡಳಿತ ಮಂಡಳಿಯ ಮಾರ್ಗದರ್ಶನ ಊರ ಪರವೂರ ಭಕ್ತಾಧಿಗಳ ಸಂಪೂರ್ಣ ಸಹಕಾರ ಮೇನಾಲ ಕುಟುಂಬಸ್ಥರ ಸೇರುವಿಕೆಯಿಂದ ದೈವಗಳ ಮಹೋತ್ಸವ ಅತ್ಯಂತ ವಿಜೃಂಭಣೆಯಿ0ದ ನಡೆಯಲಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!