ಕಾಪು ತಾಲೂಕು ಕ್ರೀಡಾಂಗಣದಲ್ಲಿ ಉದ್ಘಾಟನೆಗೊಳ್ಳದೆ ತುಕ್ಕು ಹಿಡಿಯುತ್ತಿದೆ ವ್ಯಾಯಾಮ ಸಾಮಾಗ್ರಿಗಳು
ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ವಿರುದ್ಧ ಜನರ ಆಕ್ರೋಶ

ವರದಿ: ಸುರೇಶ್ ಎರ್ಮಾಳ್

ಕಾಪು : ಕಳೆದ ಮೂರು ವರ್ಷಗಳಿಂದ ಕಾಪು ತಾಲೂಕು ಕ್ರೀಡಾಂಗಣದ ಕೋಣೆಯಲ್ಲಿ ಲೋಕಾರ್ಪಣೆಗೊಳ್ಳದೆ ಬಂಧಿಯಾಗಿರುವ ಲಕ್ಷಾಂತರ ಮೌಲ್ಯದ ವ್ಯಾಯಾಮ ಸಲಕರಣೆಗಳು ತುಕ್ಕು ಹಿಡಿಯುತ್ತಿದ್ದು, ಸರ್ಕಾರಿ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯದ ವಿರುದ್ಧ ಜನ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ದಲಿತ ಮುಖಂಡ ಶೇಖರ್ ಹೆಜಮಾಡಿ, ಗ್ರಾಮದ ಯುವಕರ ಬಲು ಬೇಡಿಕೆಯ ವ್ಯಾಯಾಮ ಸಲಕರಣೆಗಳು ಕಳೆದ ಮೂರು ವರ್ಷಗಳ ಹಿಂದೆ ತಾಲೂಕು ಕ್ರೀಡಾಂಗಣದ ಕೋಣೆಯೊಳಗೆ ಬಂಧಿಯಾಗಿತ್ತು. ಇದನ್ನು ಉದ್ಘಾಟನೆಗೊಳಿಸಿ ಜನರ ಉಪಯೋಗಕ್ಕೆ ನೀಡ ಬೇಕಾಗಿದ್ದ ಸ್ಥಳೀಯ ರಾಜಕೀಯ ಮಂದಿ ಅದನ್ನು ಮರೆತಂತ್ತಿದೆ, ಅದನ್ನು ನೆನಪಿಸಿ ಉದ್ಘಾಟನೆಗೊಳಿಸಿ ಅದರ ಸದುಪಯೋಗ ಪಡಿಸ ಬೇಕಾಗಿದ್ದ ಕ್ರೀಡಾ ಇಲಾಖಾ ಅಧಿಕಾರಿಗ ಜಾಣ ಮೌನ, ಸರ್ಕಾರದ ಲಕ್ಷಾಂತರ ಮೌಲ್ಯದ ಸಲಕರಣೆಗಳು ತುಕ್ಕು ಹಿಡಿಯುವಂತ್ತಾಗಿದೆ.

ಅದಲ್ಲದೆ ರಾಜ್ಯ- ರಾಷ್ಟ್ರೀಯ ಮಟ್ಟದ ಕ್ರೀಡಾ ಉತ್ಸವವನ್ನು ಆಚರಿಸಿದ ಹೆಜಮಾಡಿ ರಾಜೀವಗಾಂಧಿ ಕ್ರೀಡಾಂಗಣ ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿ ಕಾಣದೆ ಯಾವುದೇ ಮಟ್ಟದ ಕ್ರೀಡಾಕೂಟವನ್ನು ಆಯೋಜಿಸದ ಸ್ಥಿತಿಗೆ ಬಂದಿದ್ದು, ಈ ಬಗ್ಗೆ ತಕ್ಷವೇ ಅಧಿಕಾರಿಗಳು ಸಹಿತ ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿ ಅರಿತು ವ್ಯವಹರಿಸುವ ಮೂಲಕ ಜನರ ತೆರಿಗೆ ಹಣವನ್ನು ಉಳಿಸುವ ಪ್ರಯತ್ನವಾಗ ಬೇಕಾಗಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!