ಸೌದಿಯಲ್ಲಿ ಭೀಕರ ಅಪಘಾತ: ಹಳೆಯಂಗಡಿ ಮೂಲದ ನಾಲ್ವರ ದುರ್ಮರಣ.!!
ಸೌದಿ ಅರೇಬಿಯಾದ ತಾಯಿಫ್ ಬಳಿ ಕಾರು ಅಪಘಾತ
ಹಳೆಯಂಗಡಿ ಮೂಲದ ನಾಲ್ವರ ದುರ್ಮರಣ

ಸೌದಿ ಅರೇಬಿಯಾದ ತಾಯಿಫ್ ಬಳಿ ನಡೆದ ಭೀಕರ ಕಾರು ಅಪಘಾತದಲ್ಲಿ ಹಳೆಯಂಗಡಿ ಮೂಲದ ನಾಲ್ವರು ಮೃತಪಟ್ಟ ಘಟನೆ ನಡೆದಿದೆ.  

ಕತಾರ್ ನಿಂದ ಸೌದಿ ಅರೇಬಿಯಾಕ್ಕೆ ಉಮ್ರಾ ನಿರ್ವಹಿಸಲು ಕಾರಿನಲ್ಲಿ ತೆರಳುತ್ತಿದ್ದ ಹಳೆಯಂಗಡಿ ಮೂಲದ ದಂಪತಿ, 40 ದಿನದ ಹಸುಗೂಸು ಸೇರಿದಂತೆ ನಾಲ್ಕು ಮಂದಿ ಸ್ಥಳದಲ್ಲೇ ದುರ್ಮರಣಗೀಡಾಗಿದ್ದಾರೆ. ಕಾರಿನಲ್ಲಿದ್ದ ಇನ್ನೊಂದು ಮಗು ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. 

ಕತಾರ್‌ನಿಂದ ಸೌದಿ ಅರೇಬಿಯಕ್ಕೆ ಉಮ್ರಾ ನಿರ್ವಹಿಸಲು ಕಾರಿನಲ್ಲಿ ಮಗುವಿನೊಂದಿಗೆ ದಂಪತಿ ತೆರಳುತ್ತಿದ್ದಾಗ ಗುರುವಾರ ಮುಂಜಾನೆ ಸುಮಾರು ನಾಲ್ಕು ಗಂಟೆ ಹೊತ್ತಿಗೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ದುರ್ಘಟನೆಯ ಮಹಿತಿ ಸಿಕ್ಕಿದ ಕೂಡಲೇ ಸ್ಥಳೀಯ ಅಧಿಕಾರಿಗಳು ಘಟನನಾ ಸ್ಥಳಕ್ಕೆ ಧಾವಿಸಿ ಪರಿಹಾರ ಕಾರ್ಯಗಳನ್ನ ಕೈಗೊಂಡಿದ್ದಾರೆ. ಅಫಘಾತ ತಾಯಿಫ್ ನಿಂದ ಸುಮಾರು 160 ಕಿಲೋ ಮೀಟರ್ ದೂರಲ್ಲಿ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹಳೆಯಂಗಡಿ ತೋಕೂರು ಸರಕಾರಿ ಶಾಲೆಯ ಪಕ್ಕದ ಕುಟುಂಬದ ಮೂಲ ಮನೆಯಲ್ಲಿ ಇದೀಗ ನೀರವ ಮೌನ ಆವರಿಸಿದೆ. ಅಪಘಾತಕ್ಕೆ ನಿಖರ ಕಾರಣಗಳು ತಿಳಿದು ಬಂದಿಲ್ಲ. ಆದ್ರೆ ಇತ್ತೀಚೆಗಿನ ವರ್ಷಗಳಲ್ಲಿ ಸೌದಿಯಲ್ಲಿ ರಸ್ತೆ ಅಪಘಾತಗಳು ಹೆಚ್ಚುತ್ತಿದ್ದು ಈ ಬಗ್ಗೆ ಅಲ್ಲಿನ ರಸ್ತೆ ಸುರಕ್ಷಾ ಪ್ರಾಧಿಕಾರ ಕೂಡ ಕಳವಳ ವ್ಯಕ್ತಪಡಿಸಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!