ಬಂಟ್ವಾಳ:  ರಾತ್ರಿ ಮೊಬೈಲ್ ನೋಡುತ್ತಾ ಮಹಡಿಯಿಂದ ಕೆಳಗೆ ಬಿದ್ದು ಬಾಲಕ ಸಾವು.!!
ಮನೆ ಮಹಡಿಯಿಂದ ಕೆಳಗೆ ಬಿದ್ದ ಬಾಲಕ ಮೃತ್ಯು

ಬಂಟ್ವಾಳ : ಮನೆಯ ಮಹಡಿಯ ಮೇಲಿಂದ ಕೆಳಗೆ ಬಿದ್ದು ಬಾಲಕ ಮೃತಪಟ್ಟ ಘಟನೆ ಸೋಮವಾರ ಮುಂಜಾನೆ ಜಕ್ರಿ ಬೆಟ್ಟಿನಲ್ಲಿ ನಡೆದಿದೆ. 

ಬಂಟ್ವಾಳ ಜಕ್ರಿ ಬೆಟ್ಟು ನಿವಾಸಿ ದಿನೇಶ್ ಪೂಜಾರಿ ಅವರ ಪುತ್ರ ಆದಿಶ್ (15) ಮೃತ ಬಾಲಕ.

ಆತ ಮನೆಯಲ್ಲಿ ದೊಡ್ಡಮ್ಮನ ಜತೆ ಮಲಗಿದ್ದು, ರಾತ್ರಿ ವೇಳೆ ಮೊಬೈಲ್ ನೋಡುತ್ತ ಹೋಗುವಾಗ ಆಯತಪ್ಪಿ ಮನೆಯ ಮಹಡಿಯ ಮೇಲಿಂದ ಕೆಳಗೆ ಬಿದ್ದಿರುವುದು ಬೆಳಕಿಗೆ ಬಂದಿದೆ. ತಕ್ಷಣ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಕರೆತಂದರೂ ಅದಾಗಲೇ ಆತ ಮೃತಪಟ್ಟಿದ್ದ ಎನ್ನಲಾಗಿದೆ. ಘಟನೆಯಲ್ಲಿ ಬಾಲಕನ ತಲೆಗೆ ಗಂಭೀರ ಗಾಯವಾಗಿದ್ದು, ತೀವ್ರ ರಕ್ತಸ್ರಾವವಾಗಿತ್ತು. ಬಾಲಕನ ತಂದೆ ಬೆಳಗ್ಗೆ ಎದ್ದು ಹೊರಗೆ ಬಂದಾಗ ಆತ ಕೆಳಗೆ ಬಿದ್ದಿರುವುದು ಗಮನಕ್ಕೆ ಬಂದಿದೆ. ಮನೆ ಮೇಲಿಂದ ಬಟ್ಟೆ ತೊಳೆಯುವ ಕಲ್ಲಿನ ಮೇಲೆ ಬಾಲಕ ಬಿದ್ದಿರುವುದು ಕಂಡುಬಂದಿದೆ. ಬಂಟ್ವಾಳ ನಗರ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ.

ಬಾಲಕನಿಗೆ ರಾತ್ರಿ ವೇಳೆಯೂ ಮೊಬೈಲ್ ಬಳಕೆ ಹಾಗೂ ಟಿವಿ ನೋಡುವ ಅಭ್ಯಾಸ ಇತ್ತು. ಮನೆ ತಗ್ಗು ಪ್ರದೇಶದಲ್ಲಿರುವ ಕಾರಣಕ್ಕೆ ಪಿಲ್ಲ‌ರ್ ಹಾಕಿ ಮೇಲೆ ಮನೆ ನಿರ್ಮಿಸಿದ್ದರು. ಬಾಲಕನ ತಂದೆ ದಿನೇಶ್ ಹೋಟೆಲ್ ನಡೆಸುತ್ತಿದ್ದು, ಅವರ ಪತ್ನಿ ಬೆಳಗ್ಗೆ ಹೋಟೆಲ್ನಲ್ಲಿ ಕೆಲಸವಿದೆ ಎಂದು ಅಲ್ಲೇ ಮಲಗಿದ್ದರು. ಬಾಲ್ಯದಿಂದಲೂ ಒಬ್ಬನೇ ಮಲಗುವ ಅಭ್ಯಾಸವಿದ್ದ ಬಾಲಕ, ಬಂಟ್ವಾಳ ಖಾಸಗಿ ಶಾಲೆಯಲ್ಲಿ 9ನೇ ತರಗತಿ ವಿದ್ಯಾರ್ಥಿಯಾಗಿದ್ದ. 

 


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!