ಕೃಷ್ಣಾಪುರ: ಗಡುಪಾಡು ಶ್ರೀ ಕೊಡಮಣಿತ್ತಾಯ ಮತ್ತು ಶ್ರೀ ಬ್ರಹ್ಮ ಬೈದರ್ಕಳ ನೇಮೋತ್ಸವ
ಮಳೆಯಿಂದ ಪ್ರಸಾದ ಮಣ್ಣನ್ನು ರಕ್ಷಿಸಿದ ಪುಣ್ಯ ಸ್ಥಳ.!

ಶ್ರೀ ಬ್ರಹ್ಮ ಬೈದರ್ಕಳ ಸೇವಾ ಸಮಿತಿ ಗೋಳಿಚಾವಡಿ, ಕುಕ್ಕಿಕಟ್ಟೆ 9ನೇ ಬ್ಲಾಕ್, ಗುರುನಗರ, ಕೃಷ್ಣಾಪುರ, ಮಧ್ಯ ಇಲ್ಲಿ ಗಡುಪಾಡು ಶ್ರೀ ಕೊಡಮಣಿತ್ತಾಯ ಮತ್ತು ಶ್ರೀ ಬ್ರಹ್ಮ ಬೈದರ್ಕಳ ನೇಮೋತ್ಸವವು ದಿನಾಂಕ 6-4-2024ರ ಶನಿವಾರ ನಡೆಯಲಿದೆ. 

ಸಂಜೆ ಗಂಟೆ 6ರಿಂದ ಜೈ ಭಜರಂಗಿ ವ್ಯಾಯಾಮಶಾಲೆ, ಕುಕ್ಕಿಕಟ್ಟೆ ಇವರ ತಾಲೀಮು ಪ್ರದರ್ಶನದೊಂದಿಗೆ ಕೊಡಿಪಾಡಿ ಬಾಳಿಕೆಯಿಂದ ಶೋಭಾಯಾತ್ರೆಯಲ್ಲಿ ಗಡುಪಾಡು ಸ್ಥಳಕ್ಕೆ ದೈವಗಳ ಭಂಡಾರ ಆಗಮನವಾಗಿದೆ. ರಾತ್ರಿ ಗಂಟೆ 8-00ಕ್ಕೆ ಅನ್ನಸಂತರ್ಪಣೆ ನಡೆದು ಬಳಿಕ ರಾತ್ರಿ 9-00ಕ್ಕೆ ದೈವಗಳ ನೇಮೋತ್ಸವ ಜರಗಲಿದೆ.

ದೈವಸ್ಥಾನದ ಹಿನ್ನಲೆ

ಸರಿ ಸುಮಾರು 55 ವರ್ಷಗಳ ಹಿಂದೆ ಕೊಡಿಪಾಡಿ ಬಾಳಿಕೆ ಮನೆ ಕುಟುಂಬಸ್ಥರು ಶ್ರೀ ಕೊಡಮಣಿತ್ತಾಯ ಮತ್ತು ಉಳ್ಳಾಯ ಬ್ರಹ್ಮ ಬೈದರ್ಕಳ ದೈವಗಳ ಸ್ಥಳಸಾನಿಧ್ಯ ಗರೋಡಿ ಸ್ಥಾಪನೆಗಾಗಿ ನಿದ್ದೋಡಿ ಗ್ರಾಮದ ಪ್ರಸಾದ ಮಣ್ಣನ್ನು ಕೊಡಿಪಾಡಿ ಗ್ರಾಮಕ್ಕೆ ತರುವ ಸಂದರ್ಭದಲ್ಲಿ ಸುರಿಯುತ್ತಿರುವ ಮಳೆಯಿಂದ ಪ್ರಸಾದ ಮಣ್ಣನ್ನು ರಕ್ಷಿಸುವುದಕ್ಕಾಗಿ ಆಶ್ರಯ ಪಡೆದ ಸ್ಥಳವೇ ಕೃಷ್ಣಾಪುರ ಗ್ರಾಮದ ಕುಕ್ಕಟ್ಟೆ ಗೋಳಿಚಾವಡಿ ಮೈದಾನ. ಇಲ್ಲಿ ವಿಶಾಲವಾದ ಆಲದಮರವು ಇದ್ದು ಮರದ ಬುಡದಲ್ಲಿ ಪ್ರಸಾದ ಮಣ್ಣು ಕರಗಿರುವುದರಿಂದ ಈ ಕ್ಷೇತ್ರವು ದೈವಗಳ ಗಡುಪಾಡು ಸ್ಥಳವಾಯಿತು. 

ಕೊಡಿಪಾಡಿ ಬಾಳಿಕೆಯಲ್ಲಿ ಗರಡಿ ನಿರ್ಮಾಣವಾಗಿ ದೈವಗಳ ನೇಮೋತ್ಸವ ನಡೆಯಿತಾದರು ತನ್ನ ಭಂಡಾರ ಗಡುಪಾಡು ಸ್ಥಳಕ್ಕೆ ಹೊರಟು ಅಲ್ಲಿಯೂ ನಮಗೆ ನೇಮೋತ್ಸವ ನಡೆಯಬೇಕೆಂದು ದೈವಗಳ ಅಭಯವಾಯಿತು.

ಅದೇ ರೀತಿ ಸುಮಾರು ವರ್ಷಗಳಿಂದ ಗಡುಪಾಡು ಸ್ಥಳದಲ್ಲಿ ನೇಮೋತ್ಸವ ಅನ್ನದಾನ ಅಭಯದಾನ ಭಜನೆ ಸಾರ್ವಜನಿಕ ಸತ್ಯನಾರಾಯಣ ಪೂಜೆಯು ನಡೆಯುತ್ತಾ ಬಂದಿರುತ್ತದೆ. ಕೊಡಿಪಾಡಿ ಬಾಳಿಕೆಮನೆ ಕುಟುಂಬಸ್ಥರು ಮತ್ತು ಗಡಿಪ್ರಧಾನರಾದ ಶ್ರೀ ಜಗನ್ನಾಥ್ ಅತ್ತಾರ್ ಇವರ ಮಾರ್ಗದರ್ಶನದಂತೆ ಕಾಲಂಪ್ರತಿ ಮಧ್ಯ ಚೇಳ್ಯಾರು ಮುಂಚೂರು ಗುರುನಗರ ಪಡುಪದವು ಕೃಷ್ಣಾಪುರ ಎಲ್ಲಾ ಗ್ರಾಮಗಳ ಭಕ್ತಾದಿಗಳ ಸಹಕಾರದಲ್ಲಿ ಶ್ರೀ ಬ್ರಹ್ಮ ಬೈದರ್ಕಳ ಸೇವಾ ಸಮಿತಿ (ರಿ.) ಸ್ಥಾಪನೆಗೊಂಡು ಈ ಎಲ್ಲಾ ಕಾರ್ಯಕ್ರಮಗಳನ್ನು ನಿರ್ಮಿಹಿಸುತ್ತ ಬಂದಿದೆ.

ಸ್ಥಳ ಸಾನಿಧ್ಯದಲ್ಲಿ ತಾಂಬೂಲ ಪ್ರಶ್ನೆ ಇಟ್ಟಾಗ ಶ್ರೀ ಬ್ರಹ್ಮಮುಗೇರ ಪರಿವಾರ ದೈವಗಳು ಕೂಡ ಇದೆ ಎಂದು ತಿಳಿದು ಬಂದಿರುತ್ತವೆ. ಪ್ರಸ್ತುತ ಹಳೆಕಾಲದಿಂದಲೂ ಹಿಂದು ಮುಸ್ಲಿಂ ಕುಟುಂಬಸ್ಥರು ಪರಿಸರದಲ್ಲಿ ಬಾಂದವ್ಯದಿಂದ ಕೂಡಿದ್ದು ಕೆಲವೇ ಮತೀಯ ಕೋಮು ಭಾವನೆಗಳನ್ನು ಕೆಡಿಸುವ ವ್ಯಕ್ತಿಗಳು ಈ ಕ್ಷೇತ್ರದ ಅಭಿವೃದ್ಧಿಯನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಾ ಇದೀಗ ನ್ಯಾಯಾಲಯದಲ್ಲಿ ಕೇಸನ್ನು ಹೂಡಿ ನಮ್ಮ ಧಾರ್ಮಿಕ ಅಭಿವೃದ್ಧಿಯನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ನ್ಯಾಯಲದಲ್ಲಿ ಜಾಗದ ಬಗ್ಗೆ ವಿಚರಣೆ ನಡೆಯುತ್ತಿದೆ.

ನಮ್ಮ ತುಳುನಾಡಿನ ದೈವಗಳ ಈ ಪಾವಿತ್ರ್ಯತೆಯನ್ನು ಧಾರ್ಮಿಕ ವಿಧಿ ವಿಧಾನಗಳನ್ನು ನಮ್ಮ ಗಡುಪಾಡು ಭೂಮಿಯನ್ನು ಉಳಿಸಿಕೊಳ್ಳುವುದು ಧಾರ್ಮಿಕ ಉತ್ಸಾವ ಇತ್ಯಾದಿಗಳನ್ನು ವೈಭವಗೊಳಿಸುವುದು ಗ್ರಾಮದ ಪ್ರತಿ ಮನೆಯ ಕುಟುಂಬದ ಜವಾಬ್ದಾರಿಯಾಗಿದೆ. ಮುಂದೆಯು ಕ್ಷೇತ್ರಕ್ಕೆ ಸಂಬಂದ ಪಟ್ಟ 1.75 ಸೆಂಟ್ಸ್ ಭೂಮಿಯಲ್ಲಿ ಗ್ರಾಮದ ಹಿತರಕ್ಷಣೆಗಾಗಿ ಆರ್ಯುವೇದಿಕ ಗಿಡಗಳನ್ನು ನಡುವುದು ದೈವಗಳ ಕೆಲಸಕ್ಕೆ ಬಾವಿಯ ನಿರ್ಮಾಣ ಉತ್ತಮ ಆರೋಗ್ಯಕ್ಕಾಗಿ ಯೋಗ ಅಭ್ಯಾಸಕ್ಕೆ ಅನುಕೂಲ ಕಲ್ಪಿಸುವುದು, ಭಜನಾ ಮಂದಿರ ನಿರ್ಮಾಣ, ಗೋಶಾಲಾ ನಿರ್ಮಾಣ, ಪರಿವಾರ ದೈವಗಳ ಪೀಠಗಳು, ತಾಲೀಮು ಶಾಲೆ (ಗೋದಾ) ಇನ್ನಿತರ ಯೋಜನೆಗಳು ಇವೆ. ಈ ಎಲ್ಲಾ ಯೋಜನೆಗಳು ಈಡೆರಬೇಕಾದರೆ ತಾವುಗಳು ಈ ಸತ್ಕಾಯದಲ್ಲಿ ತೊಡಗಿಸಿಕೊಂಡು ದೈವಗಳ ಕೃಪೆಗೆ ಪಾತ್ರಾರಾಗಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!