ಆತ್ಮಹತ್ಯೆ ಎಂದು ನಂಬಿಸಿದ ಪ್ರಕರಣದಲ್ಲಿ ಕೊಲೆಗಾರನ ಬಂಧನ...!
ಆತ್ಮಹತ್ಯೆ ಎಂದು ನಂಬಿಸಿದ ಪ್ರಕರಣದಲ್ಲಿ ಕೊಲೆಗಾರನ ಬಂಧನ...

ದಿನಾಂಕ 14/09/2022 ರಂದು ಉಡುಪಿ ಜಿಲ್ಲೆಯ ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಕುಕ್ಕೆಹಳ್ಳಿಯ ಹಾಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಕುಕ್ಕೆಹಳ್ಳಿ ನಿವಾಸಿ ಕೃತಿಕ್ ಜೆ. ಸಾಲಿಯಾನ್ (22 ವರ್ಷ) ಎಂಬಾತನ ಮೃತದೇಹ ಪತ್ತೆಯಾಗಿತ್ತು... ಈ ಬಗ್ಗೆ ಮೃತ ಕೃತಿಕ್ ನ ಅತ್ತೆ ಶೈಲಜಾ ಕರ್ಕೇರಾ ಅವರು ನೀಡಿದ ದೂರಿನಂತೆ ಅಸ್ವಾಭಾವಿಕ ಮರಣ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದರು...

ಈ ವೇಳೆ ಕೃತಿಕ್ ನ ಸಂಭಂದಿಕರು ಆತನ ಬ್ಯಾಂಕ್ ನಲ್ಲಿದ್ದ ಲಕ್ಷಾಂತರ ಹಣ ಸಂಪೂರ್ಣ ಡ್ರಾ ಆಗಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು...  ಈ ಬಗ್ಗೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ  ಶ್ರೀ ಅಕ್ಷಯ್ ಮಚೀಂದ್ರ ಹಾಕೆ, ಐ.ಪಿ.ಎಸ್‌ ರವರು  ಬ್ರಹ್ಮಾವರ ವೃತ್ತ ನಿರೀಕ್ಷಕರಾದ ಅನಂತ ಪದ್ಮನಾಭ, ಹಿರಿಯಡ್ಕ ಪಿ.ಎಸ್.ಐ ಅನಿಲ್ ಬಿ ಎಮ್‌ ಹಾಗೂ ಅವರ ತಂಡದವರಿಗೆ ಕೂಲಂಕುಷವಾಗಿ ಮಾಹಿತಿಯನ್ನು ಕಲೆ ಹಾಕುವಂತೆ ನಿರ್ದೇಶನ ನೀಡಿದ್ದು, ಅದರಂತೆ ಮೃತನ ಬ್ಯಾಂಕ ಖಾತೆಯ ಮಾಹಿತಿ, ಬ್ಯಾಂಕಿನ ಸಿ.ಸಿ.ಟಿ.ವಿ, ಸ್ಥಳೀಯ ಮಾಹಿತಿ, ತಾಂತ್ರಿಕ ಮಾಹಿತಿ ಹಾಗೂ ಮೊಬೈಲ್‌ ಪೋನ್‌‌‌ ಮಾಹಿತಿಗಳನ್ನು ಸಂಗ್ರಹಿಸಿ ಆತನ ಗೆಳೆಯರ ಬಗ್ಗೆ ಪೊಲೀಸರು ವಿಚಾರಿಸಿದ್ದರು...

ಈ ವಿಚಾರಣೆಯಲ್ಲಿ ಆತನ ಸಂಬಂಧಿ ದಿನೇಶ್ ಸಫಲಿಗನ ಬಗ್ಗೆ ಪೊಲೀಸರು ಕಳೆದ  15 ದಿನಗಳಿಂದ  ಹಗಲು-ರಾತ್ರಿ ಆತನ ಚಲನವಲನಗಳ ಬಗ್ಗೆ, ಮೃತನು  ದಿನೇಶ ಸಫಲಿಗನೊಂದಿಗೆ ಒಡನಾಟ ಹೊಂದಿದ ಬಗ್ಗೆ ಮಾಹಿತಿಯನ್ನು ಕಲೆ ಹಾಕಿದ್ದು ಅಲ್ಲದೇ ಅವರೊಳಗೆ ಹಣದ ವ್ಯವಹಾರ ನಡೆದಿರುವ ಮಾಹಿತಿಯನ್ನು ಕಲೆಹಾಕಿರುತ್ತಾರೆ...

ಈ ಕೇಸ್ ವಿಚಾರದಲ್ಲಿ ದಿನೇಶ್ ಸಫಲಿಗ ಎಂಬಾತನನ್ನು ಬಂಧಿಸಿ ತನಿಖೆಗೆ ಒಳಪಡಿಸಿದಾಗ ಇದು ಪೂರ್ವನಿಯೋಜಿತ ಕೊಲೆ ಎಂದು ತಿಳಿದುಬಂದಿದೆ...

ಆರೋಪಿ ದಿನೇಶ್ ಸಫಲಿಗ ಎಂಬಾತನು ಈ ಹಿಂದೆ 10 ವರ್ಷ ಮುಂಬೈನ ಮುಲಂಡದ ಅಪೂರ್ವ ಹೋಟೆಲ್ ನಲ್ಲಿ ಉದ್ಯಮಿಯಾಗಿದ್ದು, ನಂತರದ ದಿನಗಳಲ್ಲಿ ಹಣದ ಸಮಸ್ಯೆಯಿಂದ  ಊರಿನಲ್ಲೇ ವಾಸವಾಗಿರುತ್ತನೆ.. ಊರಿಗೆ ಬಂದ ದಿನಗಳ ನಂತರ ತನ್ನ ಸಂಬಂಧಿ ಮೃತ ಕೃತಿಕ್ ನ ಆತ್ಮೀಯತೆ ಬೆಳೆಸಿಕೊಂಡು 9 ಲಕ್ಷಕ್ಕೂ ಅಧಿಕ ಹಣವನ್ನು ಸಾಲ ಪಡೆದುಕೊಂಡ್ಡಿದ್ದಾನೆ... ತನ್ನ ಹಣವನ್ನು ಮರುಪಾವಿಸುವಂತೆ ಕೃತಿಕ್, ದಿನೇಶ್ ನ ಬಳಿ ಪದೇ ಪದೇ ಕೇಳಿದಾಗ, ವಂಚಿಸುವ ಉದ್ದೇಶದಿಂದ ಈತನಿಂದ ಹಣ ಕೊಡದೇ ಪಾರಾಗಲು ಪೂರ್ವಯೋಜನೆಯನ್ನು ಮಾಡಿದ್ದ ದಿನೇಶ ಸಫಲಿಗನು ಕೃತಿಕನ ಮನೋದೌರ್ಬಲ್ಯವನ್ನು ಉಪಯೋಗಿಸಿಕೊಂಡು “ಕೃತಿಕ ಪರಿಚಯವಿರುವ ಮಹಿಳೆಯ ಹೆಸರಿನಲ್ಲಿ  ಒಂದು ಡೆತ್‌‌‌‌ನೋಟ್‌ ಬರೆಯಿಸಿದ  ಆರೋಪಿಯು  ಆ ಮಹಿಳೆಗೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತ್ರ ಬರೆಯಿಸಿ ಆತ್ಮಹತ್ಯೆಯ ಅಣಕು ವಿಡಿಯೋವನ್ನು ಮಾಡಿ ಆ ಮಹಿಳೆಗೆ ಕಳುಹಿಸಿದರೆ ಆಕೆಯು ನಿನ್ನನ್ನು ಖಂಡಿತ ಒಪ್ಪಿಕೊಳ್ಳುತ್ತಾಳೆ” ಎಂದು ನಂಬಿಸಿ, ದಿನಾಂಕ 14/09/2022 ರಂದು ಮುಂಜಾನೆಯ ಸುಮಾರು 4:00 ಗಂಟೆ ಸಮಯಕ್ಕೆ ಮನೆಯ ಹತ್ತಿರದ ಹಾಡಿಗೆ ಬರ ಮಾಡಿಕೊಂಡು ದಿನೇಶ ಸಫಲಿಗನೇ ಕುಣಿಕೆ ಹಗ್ಗವನ್ನು ದೂಪದ ಮರದ ಕೊಂಬೆಗೆ ಕಟ್ಟಿ ಕುಣಿಕೆಯನ್ನು ಕೃತಿಕನ ಕುತ್ತಿಗೆಗೆ ಹಾಕಿಕೊಳ್ಳುವಂತೆ ತಿಳಿಸಿ ಶಿಲೆಕಲ್ಲನ್ನು ಇಟ್ಟು ಅದರ ಮೇಲೆ ಹತ್ತಿಸಿ, ಕೃತಿಕನನ್ನು ಎತ್ತಿ ಕುತ್ತಿಗೆಗೆ ಕುಣಿಕೆಯನ್ನು ಹಾಕಿಕೊಳ್ಳುವಂತೆ ಮಾಡಿ ಕೃತಿಕನನ್ನು ಎತ್ತಿದ ಕೈಯನ್ನು ತಾನು ಒಮ್ಮೆಲೆ ಬಿಟ್ಟಿರುತ್ತಾನೆ. ಅಲ್ಲದೇ ಕಾಲಿನ ಕೆಳಗೆ ಇದ್ದ ಕಲ್ಲನ್ನು ಜಾರಿಯಿಸಿದ ಪರಿಣಾಮವಾಗಿ ಕುತ್ತಿಗೆಗೆ ಕುಣಿಕೆಯ ಹಗ್ಗ ಬಿಗಿದು ಕೃತಿಕ್ ಮೃತಪಟ್ಟಿರುತ್ತಾನೆ. ನಂತರ  ಆರೋಪಿ ದಿನೇಶ ಸಫಲಿಗನು ಕೃತಿಕನ ಮೊಬೈಲ್ ಪೋನನ್ನು ಕೊಂಡು ಹೋಗಿರುತ್ತಾನೆ. ಆರೋಪಿಯು  ತಾನು ಪಡೆದ ಸಾಲವನ್ನು ತೀರಿಸಬಾರದೆಂದು ಎಂಬ ಕಾರಣಕ್ಕಾಗಿ ಕೃತಿಕನನ್ನು ಅತ್ಯಂತ ಉಪಾಯದಿಂದ ಪೂರ್ವಯೋಜನೆ ಮಾಡಿ ಕೊಲೆ ಮಾಡಿ, ಆತ್ಮಹತ್ಯೆ ಎಂದು ಬಿಂಬಿಸಿರುತ್ತಾನೆ.ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ  ಸಂಗೀತಾ ಸಾಲಿಯಾನ್‌ ಇವರು ನೀಡಿದ ದೂರಿನಲ್ಲಿ  ಕೊಲೆ ಪ್ರಕರಣ ದಾಖಲಾಗಿರುತ್ತದೆ.

ಶ್ರೀ ಅಕ್ಷಯ್ ಮಚೀಂದ್ರ ಹಾಕೆ ಐ.ಪಿ.ಎಸ್‌, ಪೊಲೀಸ್ ಅಧೀಕ್ಷಕರು, ಉಡುಪಿ ಜಿಲ್ಲೆ,  ಶ್ರೀ ಸಿದ್ದಲಿಂಗಪ್ಪ ಕೆ.ಎಸ್.ಪಿ.ಎಸ್. ಹೆಚ್ಚುವರಿ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಸುಧಾಕರ ನಾಯ್ಕ್, ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕರಾದ ಶ್ರೀ ಅನಂತ ಪದ್ಮನಾಭರವರ ನೇತೃತ್ವದಲ್ಲಿ ಹಿರಿಯಡ್ಕ ಪೊಲೀಸ್ ಠಾಣಾ ಪಿ.ಎಸ್‌.ಐ ಶ್ರೀ ಅನಿಲ್ ಬಿ ಎಮ್, ಕೋಟ ಠಾಣಾ ಪ್ರೊಬೆಷನರಿ ಪಿ.ಎಸ್.ಐ ನೂತನ್‌, ಬ್ರಹ್ಮಾವರ ವೃತ್ತ ಕಛೇರಿಯ ಸಿಬ್ಬಂದಿಯವರಾದ ಎ.ಎಸ್.ಐ ಕೃಷ್ಣಪ್ಪ, ಹೆಡ್‌ಕಾನ್ಸ್‌‌ಟೇಬಲ್‌ಗಳಾದ  ವಾಸುದೇವ ಪಿ, ಪ್ರದೀಪ ನಾಯಕ, ಕಾನ್ಸ್‌‌ಟೇಬಲ್‌ಗಳಾದ ರವೀಂದ್ರ ಹೆಚ್‌‌, ಕೃಷ್ಣ ಶೇರೆಗಾರ, ಶೇಖರ್‌, ಹಿರಿಯಡ್ಕ ಠಾಣಾ ಎ.ಎಸ್.ಐ ರವರಾದ ಸುಂದರ, ಜಯಂತ್, ಪರಮೇಶ್ವರ ಹೆಡ್ಕಾನ್‌ಸ್ಟೇಬಲ್‌ಗಳಾದ ರಾಜೇಶ್ ಡಿ ಗಾರ್‌, ಉದಯ ಕುಮಾರ್, ರಘು ಮೊಗವೀರ, ರಾಘವೇಂದ್ರ.ಕೆ, ದಯಾನಂದ ಪ್ರಭು, ಜ್ಯೋತಿ, ಸುರೇಖಾ,  ಕಾನ್‌ಸ್ಟೇಬಲ್ಗಳಾದ  ಆದರ್ಶ ನಾಯ್ಕ, ಭೀಮಪ್ಪ ಹಡಪದ, ಬಸವರಾಜ್‌ ಬಶೆಟ್ಟಿ, ನಿತಿನ್, ನಬಿ ರಸೂಲ್‌ ಕಡಣಿ, ಕಾರ್ತಿಕ್, ಸಂತೋಷ್, ಶಿವರಾಜ್, ಮಾರುತಿ, ಉಮೇಶ, ದರ್ಶನ್‌‌, ಅಶೋಕ್‌‌, ಸುಮಲತಾ, ಜಯಲಕ್ಷ್ಮಿ, ರಾಜೇಶ್ವರಿ, ರಾಜೇಶ್ ಮೇಸ್ತರವರು ಕಾರ್ಯಾಚರಣೆಯಲ್ಲಿ ಭಾಗವಹಿಸಿರುತ್ತಾರೆ.

 


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!