ಕಾರ್ಗಿಲ್ ಗಡಿಯಲ್ಲಿ ಯೋಧರ ಜೊತೆ  ಪ್ರಧಾನಿ ಮೋದಿ ದೀಪಾವಳಿ ಸಂಭ್ರಮ
ಕಾರ್ಗಿಲ್ ಗಡಿಯಲ್ಲಿ ಯೋಧರ ಜೊತೆ
ಪ್ರಧಾನಿ ಮೋದಿ ದೀಪಾವಳಿ ಸಂಭ್ರಮ.

ದೆಹಲಿ: ಪ್ರತಿವರ್ಷವೂ ದೇಶದ ಯೋಧರ ಜೊತೆ ಗಡಿಭಾಗದಲ್ಲಿ ದೀಪಾವಳಿ ಹಬ್ಬ ಆಚರಿಸುವ ಪ್ರಧಾನಿ ನರೇಂದ್ರ ಮೋದಿಯವರು ಈ ಸಲ ಕಾರ್ಗಿಲ್ ಗಡಿಯಲ್ಲಿ ಭಾರತೀಯ ಯೋಧರ ಜೊತೆ ದೀಪಾವಳಿ ಆಚರಿಸಿದ್ದಾರೆ.

 ಕಾರ್ಗಿಲ್‌ನಲ್ಲಿ ಯೋಧರು ಹಾಗೂ ಅವರ ಕುಟುಂಬ ಸದಸ್ಯರ ಜೊತೆ ದೀಪಾವಳಿ ಆಚರಿಸಿದ ಬಳಿಕ ಮಾತನಾಡಿದ ಮೋದಿಯವರು, ದೇಶದ ಗಡಿ ಸುರಕ್ಷಿತವಾಗಿದ್ದರೆ ಮಾತ್ರ ದೇಶದ ಆರ್ಥಿಕತೆ ಸದೃಢವಾಗಿರುತ್ತದೆ. ಜೊತೆಗೆ ಸಮಾಜವೂ ಆತ್ಮವಿಶ್ವಾಸದಿಂದ ಮುನ್ನುಗ್ಗುತ್ತದೆ. ಸೇನೆಗೆ ಮಹಿಳೆಯರನ್ನು ಸೇರ್ಪಡೆ ಮಾಡಿಕೊಂಡ ಬಳಿಕ ಸೇನೆಯ ಬಲವರ್ಧನೆಯಾಗಿದೆ ಎಂದು ಹೇಳಿದರು.

 ಭಾರತವು ದೇಶದ ಒಳಗೆ ಹಾಗೂ ಹೊರಗೆ ವೈರಿಗಳನ್ನು ನಿಗ್ರಹಿಸುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಜಾಗತಿಕವಾಗಿ ಭಾರತದ ಹಿರಿಮೆ ಹೆಚ್ಚಿದೆ. ಭಾರತದ ಶಕ್ತಿ ಹೆಚ್ಚಾದಷ್ಟೂ ಜಾಗತಿಕವಾಗಿ ಶಾಂತಿ ಹಾಗೂ ಸಮೃದ್ಧಿ ಹೆಚ್ಚುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.

 ಸೇನೆಯ ಸುಧಾರಣೆಗೆ ಈ ಹಿಂದೆಲ್ಲ ದೀರ್ಘಕಾಲದ ತನಕ ಕಾಯಬೇಕಾಗುತ್ತಿತ್ತು. ಆದರೆ ಈಗ ಎಲ್ಲವೂ ವೇಗವಾಗಿ ಜಾರಿಯಾಗುತ್ತಿದೆ. ದೇಶ ಆತ್ಮ ನಿರ್ಭರವಾಗುತ್ತಿದೆ. ದೇಶದ ಭದ್ರತೆ ವಿಚಾರದಲ್ಲೂ ನಾವು ವಿದೇಶದ ಶಸ್ತ್ರಾಸ್ತ್ರಗಳ ಮೇಲೆ ಹೊಂದಿದ್ದ ಅವಲಂಬನೆ ಕಡಿಮೆಯಾಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.

 ಮೊಳಗಿದ ಭಾರತ್ ಮಾತಾ ಕೀ ಜೈ

 ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾದ ಮೇಲೆ ಪ್ರತಿ ವರ್ಷದೀಪಾವಳಿ ವೇಳೆ ದೇಶದ ಉದ್ದಲಗಕ್ಕೂ ಇರುವ ಗಡಿ ಪ್ರದೇಶದಲ್ಲಿ ಭಾರತೀಯ ಯೋಧರ ಜೊತೆ ದೀಪಾವಳಿ ಆಚರಿಸುವ ಸಂಪ್ರದಾಯ ಪಾಲಿಸಿಕೊಂಡು ಬರುತ್ತಿದ್ದಾರೆ. ತಮ್ಮ ಕುಟುಂಬಸ್ಥರಿಂದ ದೂರವಿದ್ದು ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾಗಲು ಸಾಧ್ಯವಿಲ್ಲದೆ ಗಡಿಯಲ್ಲಿ ದೇಶ ಕಾಯುವ ಯೋಧರ ಜೊತೆ ನಿಂತು ಹಬ್ಬದ ಸಂಭ್ರಮ ತರಲು ಪ್ರಧಾನಿ ಮೋದಿ ಈ ಸಂಪ್ರದಾಯ ಪಾಲನೆ ಮಾಡುತ್ತಿದ್ದಾರೆ. ಭಾನುವಾರವಷ್ಟೇ ಪ್ರಧಾನಿ ಮೋದಿ ಅಯೋಧ್ಯೆಯಲ್ಲಿ ಇದ್ದರು. ದೀಪಾವಳಿ ಮುನ್ನಾ ದಿನ ನಡೆಯುವ ದೀಪೋತ್ಸವಕ್ಕೆ ಚಾಲನೆ ನೀಡಿದ್ದರು.

 ಮೋದಿ ಪ್ರಧಾನಿ ಆದ ಮೇಲೆ ಆಚರಿಸಿದ ದೀಪಾವಳಿ

 2014: ಸಿಯಾಚಿನ್

 2015: ಅಮೃತಸರ

 2016: ಲಾಹೌಲ್ -ಸ್ಪಿಟಿ

 2017: ಗುರೆಜ್

 2018: ಚಮೋಲಿ

 2019: ರಾಜೌರಿ

 2020: ಜೈಸಲ್ಮೇರ್

 2021: ನೌಶೆರಾ

 2022: ಕಾರ್ಗಿಲ್


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!