ಹಿರಿಯರ ಸಮ್ಮಾನವು ಮುಂದಿನ ಪೀಳಿಗೆಗೆ ದಾರಿದೀಪವಾಗಲಿದೆ: ನೀಲಾವರ ಸುರೇಂದ್ರ ಅಡಿಗ
ಹಿರಿಯರೆಡೆಗೆ ನಮ್ಮ ನಡಿಗೆಯ ಮೂಲಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಿರಿಯರನ್ನು ಗೌರವಿಸುವ ಕಾರ್ಯಕ್ರಮವು ನಮ್ಮ ಮುಂದಿನ ಪೀಳಿಗೆಗೆ ದಾರಿದೀಪವಾಗಬೇಕೆಂಬ ಆಶಯವನ್ನು ಸಾಹಿತ್ಯ ಪರಿಷತ್ ಇರಿಸಿಕೊಂಡಿದೆ. ಈ ನಿಟ್ಟಿನಲ್ಲಿ ಬಹುಮುಖ ಪ್ರತಿಭೆ, ಎಲ್ಲಾ ಕ್ಷೇತ್ರಗಳಲ್ಲೂ ಕೈಯಾಡಿಸಿರುವ ಪಡುಬಿದ್ರಿಯ ಹಿರಿಯ ಜನಪದ ಸಾಹಿತಿ ಪಿ. ಕೆ. ಸದಾನಂದ, ಶಾರದಾ ಸದಾನಂದ ದಂಪತಿಯನ್ನು ಗೌರವಿಸಿದ್ದೇವೆ ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಳಿದರು.

ಅವರು  ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಗೀತಾನಂದ ಫೌಂಡೇಶನ್ ಮಣೂರು, ಕಾಪು ತಾ| ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಪಡುಬಿದ್ರಿಯ ಪಿ. ಕೆ. ಸದಾನಂದ ಅವರನ್ನು ಜಿಲ್ಲಾ ಸಾಹಿತ್ಯ ಪರಿಷತ್‌ನ ಸಂಪದ - ೨೦೨೨ರ ತಿಂಗಳ ಸಡಗರ ಕಾರ್ಯಕ್ರಮದಲ್ಲಿ ಅವರ ಮನೆಯಲ್ಲೇ ಗೌರವಿಸಿ ಮಾತನಾಡಿದರು.

ಹಿರಿಯ ಜನಪದ ಸಾಹಿತಿ ಪಿ. ಕೆ. ಸದಾನಂದ ಮಾತನಾಡಿ, ಸಾಹಿತ್ಯ, ಯಕ್ಷಗಾನ, ರಂಗ ಕರ್ಮಿಗಳ ಒಲವು ಮುಂದೆ ಸಂಘಟನೆಗಳತ್ತಲೂ ಕೈಯಾಡಿಸಲು ತನ್ನನ್ನು ಪ್ರೇರೇಪಿಸಿತು. ಸಾಹಿತ್ಯ ಪರಿಷತ್ ಗೌರವವು ತನಗೆ ಹೆಮ್ಮೆ ತಂದಿದೆ ಎಂದರು.

ಇದೇ ಸಂದರ್ಭ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ರಾಮಚಂದ್ರ ಆಚಾರ್ಯರನ್ನು ವೇದಿಕೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಗೌರವಿಸಿದರು.

ಸಮಾರಂಭದಲ್ಲಿ ಕಾಪು ತಾ| ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುರೇಶ್ ಎರ್ಮಾಳ್, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಪದಾಧಿಕಾರಿ ನರಸಿಂಹ ಮೂರ್ತಿ, ಕಾಪು ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡರೀಕ ಮರಾಠೆ ಕಾರ್ಯದರ್ಶಿ ವಿದ್ಯಾಧರ್ ಪುರಾಣಿಕ್, ಕಾಪು ತಾ| ಸಾಹಿತ್ಯ ಪರಿಷತ್ ಪದಾಧಿಕಾರಿಗಳಾದ ದೀಪಕ್ ಬೀರ, ಕೆ. ಆರ್. ಪಾಟ್ಕರ್, ಸದಸ್ಯರಾದ ರಮಾಕಾಂತ ರಾವ್, ರಾಜೇಶ್ ಶೇರಿಗಾರ್, ಸುಂದರ್ ಕೆ., ಮಧುಕರ್ ಎಸ್. ಯು., ಪಡುಬಿದ್ರಿ ಗ್ರಾ. ಪಂ. ಅಧ್ಯಕ್ಷ ರವಿ ಶೆಟ್ಟಿ ಪಾದೆಬೆಟ್ಟು, ಗ್ರಾ. ಪಂ. ಸದಸ್ಯೆ ವಿದ್ಯಾಶ್ರೀ, ಗುತ್ತಿನಾರ್ ವಿಶುಕುಮಾರ್ ಶೆಟ್ಟಿಬಾಲ್, ಗುರುರಾಜ್ ಪೂಜಾರಿ, ಕೇಶವ ಅಮೀನ್, ಭಾಸ್ಕರ ಕೆ., ನವೀನ್, ಪ್ರಾಣೇಶ್ ಹೆಜಮಾಡಿ ಮತ್ತಿತರರಿದ್ದರು.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!