ಸುರತ್ಕಲ್ ನಲ್ಲಿ ಎಚ್ ಪಿ ಸಿ ಎಲ್ ನಿಂದ ಶುರುವಾಯ್ತು ದೇಶದಲ್ಲೇ ಮೊದಲ ಕಾರ್ಯಾರಂಭ...!!
ಇಡೀ ಭಾರತದಲ್ಲೇ ಪ್ರಥಮ ಕಾರ್ಯಾರಂಭ...!!

ದೇಶದಲ್ಲೇ ಮೊದಲ ಬಾರಿಗೆ ಹಿಂದೂಸ್ತಾನ್ ಪೆಟ್ರೋಲಿಯಂ (ಹೆಚ್ ಪಿಸಿಎಲ್) ಏಥರ್ ಕಂಪೆನಿಯ ಇಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ವ್ಯವಸ್ಥೆಯು ಶನಿವಾರದಿಂದ ತನ್ನ ಒಡೆತನದ ಪೆಟ್ರೋಲ್ ಪಂಪ್ ಆಗಿರುವ ಇಲ್ಲಿನ ವಿಜಯ ಫ್ಯೂಲ್ ಪಾರ್ಕ್ ನಲ್ಲಿ ಪ್ರಾರಂಭಿಸಿತು. ಮಂಗಳೂರು ಉತ್ತರ ಕ್ಷೇತ್ರದ ಶಾಸಕ ವೈ. ಭರತ್ ಶೆಟ್ಟಿ ಅವರು ಉದ್ಘಾಟನೆ ನೆರವೇರಿಸಿದರು.

ಬಳಿಕ ಮಾತಾಡಿದ ಅವರು, "ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನಂತೆ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಚಾರ್ಜಿಂಗ್ ವ್ಯವಸ್ಥೆಯನ್ನು ಆರಂಭಿಸಲಾಗುತ್ತಿದೆ. ದೇಶದಲ್ಲೇ ಮೊದಲ ಬಾರಿಗೆ ಏಥರ್ ಕಂಪೆನಿಯ ಸಹಭಾಗಿತ್ವದಲ್ಲಿ ದ್ವಿಚಕ್ರ ಚಾರ್ಜಿಂಗ್ ಸ್ಟೇಷನ್ ಅನ್ನು ಹೆಚ್ ಪಿಸಿಎಲ್ ಸುರತ್ಕಲ್ ನಲ್ಲಿ ಪ್ರಾರಂಭಿಸಿದ್ದು ಈ ಭಾಗದ ಜನರಿಗೆ ಅನುಕೂಲ ಕಲ್ಪಿಸಲಿದೆ. ಡಿಸೆಂಬರ್ ಅಂತ್ಯದವರೆಗೆ ಫ್ರೀ ಚಾರ್ಜಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತಾಗಲಿ" ಎಂದರು.

ಹೆಚ್ ಪಿಸಿ ಎಲ್ ರಿಟೇಲ್ ವಿಭಾಗದ ಡಿಜಿಎಂ ನವೀನ್ ಕುಮಾರ್ ಎಂ.ಜಿ. ಮಾತನಾಡಿ, "ಹಿಂದೂಸ್ತಾನ್ ಪೆಟ್ರೋಲಿಯಂ ದೇಶದಲ್ಲೇ ಮೊದಲ ವೆಹಿಕಲ್ ಚಾರ್ಜಿಂಗ್ ವ್ಯವಸ್ಥೆಯನ್ನು ಅಳವಡಿಸಿದ್ದು ಮುಂದಿನ ದಿನಗಳಲ್ಲಿ ಹಿಂದೂಸ್ತಾನ್ ಪೆಟ್ರೋಲಿಯಂ ಪಂಪ್ ನ ಆಯ್ದ ಪಂಪ್ ಗಳಲ್ಲಿ ಈ ವ್ಯವಸ್ಥೆ ಕಲ್ಪಿಸಲಾಗುವುದು.

ಸದ್ಯ ಒಂದು ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆಯಿದ್ದು ಉಳಿದಂತೆ ನಾರ್ಮಲ್ ಚಾರ್ಜಿಂಗ್ ವ್ಯವಸ್ಥೆ ಇರಲಿದೆ" ಎಂದು ಮಾಹಿತಿ ನೀಡಿದರು. 

ಹೆಚ್ ಪಿ ಸಿ ಎಲ್ ರಿಟೇಲ್ ವಿಭಾಗದ ಡಿಜಿಎಂ ನವೀನ್ ಕುಮಾರ್ ಎಂ.ಜಿ., ಮಂಗಳೂರು ಟರ್ಮಿನಲ್ ಇನ್ಸ್ಟಾ ಲೇಷನ್ ವಿಭಾಗದ ಡಿಜಿಎಂ ಬೊಪ್ಪೆ ಸೂರ್ಯಲಿಂಗಂ, ಏರಿಯಾ ಸೇಲ್ಸ್ ಮೆನೇಜರ್ ಕೆ. ಉದಯ್ ಶಂಕರ್ ಶೆಟ್ಟಿ, ರಿಟೇಲ್ ವಿಭಾಗದ ಸೀನಿಯರ್ ಮೆನೇಜರ್ ಪ್ರದೀಪ್ ಕುಮಾರ್, ಮೆನೇಜರ್ ವಸಂತ ಬಿ. ಶೆಟ್ಟಿ, ಸೀನಿಯರ್ ಮೆನೇಜರ್ ಪಿ. ಪ್ರಕಾಶ್, ರೆಂಜಿತ್ ರಾಜನ್, ಹೆಚ್ ಪಿಸಿಎಲ್ ಗುತ್ತಿಗೆದಾರ ಶಿವಪ್ರಸಾದ್ ಶೆಟ್ಟಿ, ಏಥರ್ ಸಂಸ್ಥೆಯ ಟೀಮ್ ಮೆನೇಜರ್ ಭರತ್ ಕುಮಾರ್, ವಿಜಯ ಫ್ಯೂಲ್ ಪಾರ್ಕ್ ಮಾಲಕ ಡಿ. ದಯಾನಂದ ಶೆಟ್ಟಿ, ಹರ್ಷಿಣಿ ಶೆಟ್ಟಿ, ಕಾರ್ಪೋರೇಟರ್ ಗಳಾದ ಶ್ವೇತಾ ಪೂಜಾರಿ, ನಯನ ಕೋಟ್ಯಾನ್,ಶೋಭಾ ರಾಜೇಶ್, ಮಂಗಳೂರು ಉತ್ತರ ಯುವಮೋರ್ಚಾ ಅಧ್ಯಕ್ಷ ಭರತ್ ರಾಜ್ ಕೃಷ್ಣಾಪುರ, ಪುಷ್ಪರಾಜ್ ಶೆಟ್ಟಿ ಕುಡುಂಬೂರು, ಪ್ರದೀಪ್, ಮೀರಾ ಶೆಟ್ಟಿ, ಪ್ರಶಾಂತ್ ಮುಡಾಯಿಕೋಡಿ ಉಪಸ್ಥಿತರಿದ್ದರು.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!