ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಅಪ್ಪದ ಪೂಜೆ; ಹೂವಿನ ಅಲಂಕಾರದಿಂದ ಶೃಂಗಾರಗೊಂಡ ದೇವಸ್ಥಾನ
ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಅಪ್ಪದ ಪೂಜೆ

ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದಲ್ಲಿ ಕಾರ್ತಿಕ ಮಾಸದ ವಿಶೇಷ ಅಪ್ಪದ ಪೂಜೆ ಇಂದು ನಡೆಯಲಿರುವುದರಿಂದ ದೇವಸ್ಥಾನವು ಹೂವಿನ ಅಲಂಕಾರದಿಂದ ನೋಡುಗರ ಗಮನ ಸೆಳೆದಿದೆ. ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದಲ್ಲಿ ಬಹಳ ವಿಶೇಷವಾಗಿ ನಡೆಯುವ ಅಪ್ಪ ಸೇವೆಗೆ ಬಹಳ ಮಹತ್ವವಿದೆ. ನೂರಾರು ಭಕ್ತರ ಸಮ್ಮುಖದಲ್ಲಿ ನಡಎಯುವ ಈ ಸೇವೆ ಇಂದು ದೇವಸ್ಥಾನದಲ್ಲಿ ನಡೆಯಲಿದ್ದು, ಈ ಹೂವಿನ ಅಲಂಕಾರದಿಂದ ಶೃಂಗಾರಗೊಂಡು ದೇವಳಯವು ಬಹಳ ಸುಂದರವಾಗಿ ಕಂಗೊಳಿಸುತ್ತಿದೆ.

ಅಪ್ಪದ ಪೂಜೆಯ ವಿಶೇಷತೆ:

ಹಿಂದಿನ ಕಾಲದಲ್ಲಿ ಬರಗಾಲದಲ್ಲಿ ಕೃಷಿ ಚಟುವಟಿಕೆ ಗಳು ನಡೆಯದಿದ್ದಾಗ ಊರವರು, ಗುತ್ತಿನವರು ಅರ್ಚಕರು ಸೇರಿ ಶ್ರೀದೇವಿಯಲ್ಲಿ ಪ್ರಾರ್ಥಿಸಿ ಕೃಷಿ, ಭತ್ತ ಬೆಳೆ ಸರಿಯಾಗಿ ಬಂದರೆ ಬೆಳೆಯಲ್ಲಿ ಒಂದಂಶವನ್ನು ದೇವರಿಗೆ ಅಪ್ಪ ಮಾಡಿ ಅರ್ಪಿಸುತ್ತೇವೆ ಎಂದು ಪ್ರಾರ್ಥನೆ ಸಲ್ಲಿಸುತ್ತಿದ್ದರು. ನಂತರ ಈ ಭಾಗದ ಕೃಷಿಕರು ಜಮೀನಿನಲ್ಲಿ ಭತ್ತದ ಬೆಳೆ ಬೆಳೆಸುತ್ತಿದ್ದರು. ಕೃಷಿ ಚೆನ್ನಾಗಿ ಬೆಳೆದು ಬಂದ ಭತ್ತದಿಂದ ಸಾವಿರ ಸೀಮೆಯ ಭಕ್ತರು ನೀಡಿದ ದೇಣಿಗೆಯಿಂದ ಅಪ್ಪದ ಪೂಜೆ ಮಾಡಲಾಗುತ್ತಿರುವುದು ಅಪ್ಪದ ಸೇವೆಯ ವಿಶೇಷ. ಪೊಳಲಿ ಕ್ಷೇತ್ರದ ಸಾವಿರ ಸೀಮೆಯ ಭಕ್ತರ ಸಮಕ್ಷಮದಲ್ಲಿ ಅಪ್ಪದ ಸೇವೆ ನಡೆಯತ್ತ ಬಂದಿದ್ದು, ಇಲ್ಲಿಯ ಅಪ್ಪದ ಸೇವೆಯು ಬಹಳ ಮಹತ್ವನ್ನು ಪಡೆಯುತ್ತದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!