ಮಳಲಿ ಮಸೀದಿ ವಿವಾದ: ನ್ಯಾಯಾಲಯ ತೀರ್ಪು ಸ್ವಾಗತಾರ್ಹ ಎಂದ ಡಾ.ಭರತ್ ಶೆಟ್ಟಿ ವೈ
ನ್ಯಾಯಲಯದ ತೀರ್ಪಿಗೆ ಪ್ರತಿಕ್ರಿಯೆ ನೀಡಿದ ಡಾ.ಭರತ್ ಶೆಟ್ಟಿ ವೈ

ಮಂಗಳೂರು: ಮಳಲಿ ಮಸೀದಿ ಒಳಭಾಗದಲ್ಲಿ ಹಿಂದೂ ಧರ್ಮದ ಕುರುಹುಗಳಿರುವ ಕಟ್ಟಡದ  ಕುರಿತ ವಿಚಾರಣೆ ಅಧಿಕಾರ ಸಿವಿಲ್ ನ್ಯಾಯಾಲಯಕ್ಕೆ ಇದೆ ಎಂದು  ಕೋರ್ಟ್ ಹೇಳಿರುವುದು ಸ್ವಾಗತಾರ್ಹವಾಗಿದೆ .ಈ ಬಗ್ಗೆ ಸಮಗ್ರ ತನಿಖೆಯಾಗಿ ಸತ್ಯ ವಿಚಾರ ಜನತೆಗೆ ತಿಳಿಯುವಂತಾಗಬೇಕು ಎಂದು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ವೈ ಹೇಳಿದ್ದಾರೆ.

ನ್ಯಾಯಲಯದ ತೀರ್ಪಿಗೆ ಪ್ರತಿಕ್ರಿಯೆ ನೀಡಿರುವ ಅವರು ಈ ವಿವಾದದ ಕುರಿತ ಇತರ ಅರ್ಜಿಗಳ ವಿಚಾರಣೆಗೆ ಜನವರಿ 8ಕ್ಕೆ ದಿನಾಂಕ ನಿಗದಿ ನ್ಯಾಯಾಲಯ ನಿಗದಿ ಮಾಡಿದೆ.

ಮಳಲಿ ಮಸೀದಿ ಜಾಗ ವಕ್ಫ್ ಆಸ್ತಿ ಆಗಿರುವುದರಿಂದ ಸಿವಿಲ್ ನ್ಯಾಯಾಲಯಕ್ಕೆ ವಿಚಾರಣೆ ಅಧಿಕಾರವಿಲ್ಲ ಎಂದು ಅರ್ಜಿ ಸಲ್ಲಿಸಿದ್ದ ಮಸೀದಿ ಪರ ವಕೀಲರ ವಾದಕ್ಕೆ ಮನ್ನಣೆ ದೊರೆತಿಲ್ಲ. ವಕ್ಫ್ ಬೋರ್ಡ್ ಕೂಡ ನಮ್ಮ ಸರಕಾರದ ಅಂಗವಾಗಿರುವುದರಿಂದ ಅದಕ್ಕೆ ಬೇರೆ ನ್ಯಾಯಲಯ, ಕಾನೂನು ಎಂಬ ಭಾವನೆ ಬೇಡ.ನ್ಯಾಯಾಲಯವು ವಿಚಾರಣೆ ನಡೆಸಿ ಸೂಕ್ತ ತೀರ್ಪು ಹೊರಬರುವ ವಿಶ್ವಾಸವನ್ನು ಹೊಂದಿದ್ದೇವೆ ಎಂದು ತಿಳಿಸಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!