2022ರಲ್ಲಿ ನೂರು ಕೋಟಿ ಕ್ಲಬ್ ಸೇರಿದ 29 ಸಿನಿಮಾಗಳು.! ಶತಕ ಬಾರಿಸಿದ ಚಿತ್ರಗಳ ಪಟ್ಟಿ ಇಲ್ಲಿದೆ
ನೂರು ಕೋಟಿ ಕಲೆಕ್ಷನ್ ಮಾಡಿರುವ ಚಿತ್ರಗಳ ಕುರಿತು ಮಾಹಿತಿ

ಸದ್ಯ 2022ರ ಹನ್ನೊಂದನೇ ತಿಂಗಳು ನಡೆಯುತ್ತಿದ್ದು ಇಲ್ಲಿಯವರೆಗೆ ಬಿಡುಗಡೆಯಾದ ಭಾರತದ ಚಿತ್ರಗಳ ಪೈಕಿ ನೂರು ಕೋಟಿ ಕ್ಲಬ್ ಸೇರಿದ ಚಿತ್ರಗಳ ಸಂಖ್ಯೆ ಇಂದು ( ನವೆಂಬರ್ 8 ) 29ಕ್ಕೇರಿದೆ. ಹೌದು, ಈ ವರ್ಷ ಸ್ಯಾಂಡಲ್‌ವುಡ್, ಟಾಲಿವುಡ್, ಕಾಲಿವುಡ್, ಮಾಲಿವುಡ್ ಹಾಗೂ ಬಾಲಿವುಡ್ ಈ ಐದೂ ಚಿತ್ರರಂಗಗಳ ಚಿತ್ರಗಳೂ ಸಹ ನೂರು ಕೋಟಿ ಕ್ಲಬ್ ಚಿತ್ರಗಳನ್ನು ನೀಡಿವೆ. 2022 ಸಿನಿಮಾ ಕ್ಷೇತ್ರಕ್ಕೆ ಒಂದೊಳ್ಳೆ ವರ್ಷ ಎಂದೇ ಹೇಳಬಹುದು. ಏಕೆಂದರೆ ಕೊರೊನಾ ಲಾಕ್‌ಡೌನ್ ನಂತರ ಭಾರತ ಚಿತ್ರರಂಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು ಈ ವರ್ಷವೇ. ಅದರಲ್ಲಿಯೂ ವಿಶೇಷವಾಗಿ ದಕ್ಷಿಣ ಭಾರತದ ಪ್ರತಿಯೊಂದು ಚಿತ್ರರಂಗಗಳೂ ಸಹ ದೊಡ್ಡಮಟ್ಟದ ಯಶಸ್ಸು ಸಾಧಿಸಿವೆ. ವಿಶೇಷವಾಗಿ ಕನ್ನಡ ಚಿತ್ರರಂಗದ ಚಿತ್ರಗಳು ಈ ಬಾರಿ ಹೆಚ್ಚಾಗಿ ಅಬ್ಬರಿಸಿವೆ.

2022ರಲ್ಲಿ ನೂರು ಕೋಟಿ ಕಲೆಕ್ಷನ್ ಮಾಡಿರುವ ಎಲ್ಲಾ 29 ಚಿತ್ರಗಳು ಯಾವುವು ಎಂಬುದರ ಕುರಿತಾದ ಮಾಹಿತಿ ಇಲ್ಲಿದೆ

ನೂರು ಕೋಟಿಗಿಂತ ಅಧಿಕ ಕಲೆಹಾಕಿದ ಎಲ್ಲಾ ಚಿತ್ರಗಳ ಪಟ್ಟಿ

1. ಕೆಜಿಎಫ್ ಚಾಪ್ಟರ್ 2 - 1250 ಕೋಟಿ

2. ಆರ್‌ಆರ್‌ಆರ್ - 1175 ಕೋಟಿ

3. ವಿಕ್ರಮ್ - 500 ಕೋಟಿ

4. ಪೊನ್ನಿಯಿನ್ ಸೆಲ್ವನ್ 1 - 482 ಕೋಟಿ 

5. ಬ್ರಹ್ಮಾಸ್ತ್ರ - 431 ಕೋಟಿ

6. ದಿ ಕಾಶ್ಮೀರ್ ಫೈಲ್ಸ್ - 340.1 ಕೋಟಿ

7. ಕಾಂತಾರ - 340 ಕೋಟಿ

8. ಭೂಲ್ ಬುಲಯ್ಯಾ 2 - 266 ಕೋಟಿ

9. ಬೀಸ್ಟ್ - 243.5 ಕೋಟಿ

10. ಗಂಗೂಬಾಯಿ ಖಾತಿಯಾವಾಡಿ - 209.2 ಕೋಟಿ

11. ಸರ್ಕಾರು ವಾರಿ ಪಾಟ - 205 ಕೋಟಿ

12. ವಾಲಿಮೈ - 194.5 ಕೋಟಿ

13. ವಿಕ್ರಾಂತ್ ರೋಣ - 184.5 ಕೋಟಿ

14. ಭೀಮ್ಲಾ ನಾಯಕ್ - 180.5 ಕೋಟಿ

15. ರಾಧೆ ಶ್ಯಾಮ್ - 177.5 ಕೋಟಿ

16. ಜೇಮ್ಸ್ - 150.7 ಕೋಟಿ

17. ವಿಕ್ರಾಂತ್ ರೋಣ - 135.4 ಕೋಟಿ

18. ಜುಗ್ ಜುಗ್ ಜೀಯೋ - 135.2 ಕೋಟಿ

19. ಫನ್ ಅಂಡ್ ಫ್ರಸ್ರ್ಟೇಷನ್ 3 - 134 ಕೋಟಿ

20. ಲಾಲ್ ಸಿಂಗ್ ಛಡ್ಡಾ - 133.5 ಕೋಟಿ

21. ಕಾರ್ತಿಕೇಯ 2 - 118 ಕೋಟಿ

22. ಡಾನ್ - 117.7 ಕೋಟಿ

23. ತಿರುಚಿತ್ರಾಂಬಲಂ - 115 ಕೋಟಿ

24. ಈಟಿ - 110 ಕೋಟಿ

25. 777 ಚಾರ್ಲಿ - 105 ಕೋಟಿ

26. ಸೀತಾ ರಾಮಮ್ - 105 ಕೋಟಿ

27. ಗಾಡ್‌ಫಾದರ್ - 105 ಕೋಟಿ

28. ಭೀಷ್ಮ ಪರ್ವಮ್ - 100 ಕೋಟಿ

29. ಸರ್ದಾರ್ - 100 ಕೋಟಿ 

 

ನೂರು ಕೋಟಿ ಗಳಿಸಿದ್ರೂ ನಷ್ಟ ಅನುಭವಿಸಿದ ಚಿತ್ರಗಳು

* ಆಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಛಡ್ಡಾ ಚಿತ್ರ 133.5 ಕೋಟಿ ಗಳಿಸಿತಾದರೂ 180 ಕೋಟಿ ಬಜೆಟ್‌ನಲ್ಲಿ ತಯಾರಾಗಿದ್ದ ಕಾರಣ ನಷ್ಟ ಅನುಭವಿಸಿತು.

* ಹಿಂದಿಯ ವಿಕ್ರಮ್ ವೇದಾ ಚಿತ್ರ 135 ಕೋಟಿ ಗಳಿಸಿತಾದರೂ 150 ಬಜೆಟ್‌ನಲ್ಲಿ ತಯಾರಾಗಿದ್ದ ಕಾರಣ ನಷ್ಟ ಅನುಭವಿಸಿತು.

* ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಅಭಿನಯದ ರಾಧೆ ಶ್ಯಾಮ್ ಬಾಕ್ಸ್ ಆಫೀಸ್‌ನಲ್ಲಿ 177.5 ಕೋಟಿ ಗಳಿಸಿತಾದರೂ 300 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಕಾರಣ ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿತು.

ನೂರು ಕೋಟಿ ಗಳಿಸಿದ ಕನ್ನಡ ಚಿತ್ರಗಳು

 * ಕೆಜಿಎಫ್ ಚಾಪ್ಟರ್ 2 - 1250 ಕೋಟಿ

* ಕಾಂತಾರ - 340 ಕೋಟಿ

* ವಿಕ್ರಾಂತ್ ರೋಣ - 184.5 ಕೋಟಿ

* ಜೇಮ್ಸ್ - 150.7 ಕೋಟಿ

* 777 ಚಾರ್ಲಿ - 105 ಕೋಟಿ


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!