ಮಂಗಳೂರಿನ ಮೂರು "ದೇವಾಲಯ" ಸ್ಪೋಟಿಸಲು "ಶಾರೀಖ್ ಸ್ಕೆಚ್"
ದಾಳಿ ಕದ್ರಿ ದೇವಸ್ಥಾನಕ್ಕೆ; ಗುರಿ ತಲುಪುವ ಮೊದಲೇ ಬಾಂಬ್‌ ಸ್ಫೋಟ

ಮಂಗಳೂರು ಬಾಂಬ್ ಸ್ಫೋಟ ಉಗ್ರ ಕೃತ್ಯ ಎಂದು ದೃಢಪಟ್ಟರೂ ಶಾರೀಕ್‌ಹಿಂದೆ ಯಾರಿದ್ದಾರೆ ಎನ್ನುವುದು ತಿಳಿದು ಬಂದಿರಲಿಲ್ಲ. ಆದರೆ ಈಗ 'ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್' ಹೆಸರಿನ ಸಂಘಟನೆಯೊಂದು ಈ ಕೃತ್ಯದ ಹೊಣೆಯನ್ನು ಹೊತ್ತುಕೊಂಡಿದೆ. ಸಾಮಾಜಿಕ ಜಾಲತಾಣದಲ್ಲಿ ಸಂಘಟನೆ ಅರೆಬಿಕ್ ಭಾಷೆಯಲ್ಲಿ ಪೋಸ್ಟ್ ಹಂಚಿಕೊಂಡಿದೆ. ನಮ್ಮ ದಾಳಿ ಕದ್ರಿ ದೇವಸ್ಥಾನ ಆಗಿತ್ತು. ಆದರೆ ಉದ್ದೇಶಿತ ಗುರಿಯನ್ನು ತಲುಪುವ ಮೊದಲೇ ಬಾಂಬ್ ಸ್ಫೋಟಗೊಂಡಿದೆ ಸಂಘಟನೆ ಹೇಳಿಕೊಂಡಿದೆ. 'ಹಿಂದೂ' ದೇವಾಲಯಗಳ ಸ್ಪೋಟಕ್ಕೆ ಉಗ್ರರು ಸ್ಕೆಚ್ ಹಾಕಿದ್ದರು ಎಂಬುದು ಬಯಲಾಗಿದೆ.. ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯ , ಮಂಗಳಾದೇವಿ ದೇವಾಲಯ, ಮಂಜುನಾಥ ಸ್ವಾಮಿ ದೇವಾಲಯಕ್ಕೂ ಉಗ್ರರು ಸ್ಕೆಚ್ ಹಾಕಿದ್ದರು ಎಂಬ ಮಾಹಿತಿ ಬಯಲಾಗಿದೆ..

ಶಾರೀಕ್ ಪಂಪ್‌ವೆಲ್ ಬಳಿ ಬಾಂಬ್ ಸ್ಫೋಟ ನಡೆಸಲು ಸ್ಕ್ಯಾನ್ ನಡೆಸಿದ್ದ ಎಂಬ ಮಾಹಿತಿ ಆರಂಭದಲ್ಲಿ ಸಿಕ್ಕಿತ್ತು. ಆದರೆ ಈಗ ಕದ್ರಿ ದೇವಸ್ಥಾನ ಉಗ್ರರ ಟಾರ್ಗೆಟ್ ಆಗಿದ್ದರಿಂದ ಈ ಪ್ರಕರಣ ಈಗ ಮತ್ತೊಂದು ಮಹತ್ವದ ತಿರುವು ಪಡೆದುಕೊಂಡಿದೆ. ನ.23ರಂದು ಪ್ರಕಟಿಸಲಾದ ಅರೆಬಿಕ್ ಭಾಷೆಯಲ್ಲಿರುವ "Majlis Almuqawamat Al'islamia" ಪೋಸ್ಟ್‌ ಜೊತೆ ದಾಳಿಯಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾರೀಕ್ ಎರಡು ಹಳೆಯ ಫೋಟೋಗಳನ್ನು ಅಪ್ಲೋಡ್ ಮಾಡಲಾಗಿದೆ. ಅಷ್ಟೇ ಅಲ್ಲದೇ ಎಡಿಜಿಪಿ ಅಲೋಕ್ ಕುಮಾರ್ ಅವರಿಗೆ ಬೆದರಿಕೆ ಹಾಕಲಾಗಿದೆ. ನಿಮ್ಮ ಸಂತೋಷವು ಅಲ್ಪಕಾಲಿಕವಾಗಿರುತ್ತದೆ ಮತ್ತು ನಿಮ್ಮ ದಬ್ಬಾಳಿಕೆಯ ಫಲವನ್ನು ನೀವು ಅನುಭವಿಸುತ್ತೀರಿ ಎಂದು ಹೇಳಿದೆ.ರಾಜ್ಯದಲ್ಲಿ ಗುಂಪು ಹತ್ಯೆ, ದಬ್ಬಾಳಿಕೆಯ ಕಾನೂನುಗಳು ಮತ್ತು ಶಾಸನಗಳು ಮತ್ತು ಧರ್ಮದಲ್ಲಿ ಹಸ್ತಕ್ಷೇಪದ ನಡೆಯುವ ಮೂಲಕ ನಮ್ಮ ಮೇಲೆ ಯುದ್ಧ ಸಾರಲಾಗಿದೆ. ಈ ಯುದ್ಧಕ್ಕೆ ಪ್ರತಿಯಾಗಿ ದಾಳಿ ನಡೆಸಲಾಗುತ್ತಿದೆ ಎಂದು ಸಂಘಟನೆ ಹೇಳಿದೆ. 

ಈ ಸಂಘಟನೆ ಇದೆಯೋ ಇಲ್ಲವೋ ಎನ್ನುವುದು ತಿಳಿದು ಬಂದಿಲ್ಲ. ಕರ್ನಾಟಕ ಪೊಲೀಸ್ ಈ ಸಂಘಟನೆ ಅಸ್ತಿತ್ವದಲ್ಲಿದೆಯೇ ಇದೆಯೋ ಇಲ್ಲವೋ ಎಂಬುದನ್ನು ತಿಳಿಯಲು ಕೇಂದ್ರ ಗೃಹ ಇಲಾಖೆಯ ಸಹಾಯವನ್ನು ಕೇಳಿದೆ. ಕದ್ರಿಯಲ್ಲಿರುವ ಮಂಜುನಾಥ ದೇವಸ್ಥಾನ 10ನೇ ಶತಮಾನದಲ್ಲಿ ನಿರ್ಮಾಣವಾಗಿದ್ದು ಮಂಗಳೂರಿನ ಪ್ರಸಿದ್ಧ ದೇವಸ್ಥಾನವಾಗಿದೆ. ಮಂಗಳೂರು ಪಂಪ್‌ವೆಲ್‌ನಿಂದ 5 ಕಿ.ಮೀ ದೂರದಲ್ಲಿದ್ದರೆ ಸ್ಫೋಟ ನಡೆದ ಸ್ಥಳದಿಂದ 4.5 ಕಿ.ಮೀ ದೂರದಲ್ಲಿದೆ. 3 ಲೀಟರ್ ಕುಕ್ಕರ್ ಒಳಗಡೆ ಸ್ಪೋಟಕದ ಜೆಲ್ ಇದ್ದು, ಇದರ ಜೊತೆ ಡಿಟೋನೇಟರ್, ಪ್ಲಸ್ ಮತ್ತು ಮೈನಸ್ ಕನೆಕ್ಟಿಂಗ್ ಕೂಡ ಇತ್ತು. ಪ್ಲಸ್ ಮತ್ತು ಮೈನಸ್ ಕನೆಕ್ಟ್ ಆಗದೇ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ ಎನ್ನಲಾಗಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!