CRZ ಸರಳೀಕರಣದಿಂದ  ಉದ್ಯೋಗ ಸೃಷ್ಠಿ..!
CRZ ಸರಳೀಕರಣದಿಂದ ಉದ್ಯೋಗ ಸೃಷ್ಠಿಯಾಗಲಿದೆ ಮಾತ್ರವಲ್ಲ ಸ್ಥಳೀಯರಿಗೆ ಹೋಮ್ ಸ್ಟೇ ಸಹಿತ ವಿವಿಧ ಸ್ವ ಉದ್ಯೋಗಕ್ಕೆ ಅನುಕೂಲವಾಗಿದೆ.

ಸುರತ್ಕಲ್:

ತಣ್ಣೀರುಬಾವಿ ಬಳಿ ಇರುವ ನಾಯರ್ ಕುದ್ರು ಅಭಿವೃದ್ಧಿಗೆ 40 ಕೋ.ರೂ,  ತಣ್ಣೀರುಬಾವಿ ಬಳಿ ಬ್ಲೂ  ಫ್ಲ್ಯಾಗ್ ಮಾನ್ಯತೆಯ ಜತೆಗೆ ಇತರ ಮೂಲ ಸೌಕರ್ಯ ಮತ್ತು ನಮ್ಮ ಸಂಸ್ಕೃತಿಗಳ ವೈಭವ ಸಾರಲು ಹೆಚ್ಚುವರಿ 9.5 ಕೋ.ರೂ ಅನುದಾನವನ್ನು ಸ್ಮಾರ್ಟ್ ಸಿಟಿ ಅನುದಾನವನ್ನು ಸದ್ಬಳಕೆ ಮಾಡಿಕೊಂಡು ಒಎಟಿ ಥಿಯೇಟರ್ ಜತೆಗೆ ಮನರಂಜನೆ,ಮಾಹಿತಿ ಪ್ರಸಾರ  ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಗಮನ ಕೇಂದ್ರೀಕರಿಸಲಾಗಿದೆ ಎಂದು ಶಾಸಕರಾದ ಡಾ.ಭರತ್ ಶೆಟ್ಟಿ ವೈ ಹೇಳಿದರು*.

ದ.ಕ ಜಿಲ್ಲಾಡಳಿತ, ಮಂಗಳೂರು ಸ್ಮಾರ್ಟ್ ಸಿಟಿ, ಪರಿಸರ ಅರಣ್ಯ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ  ಮಂಗಳವಾರ ತಣ್ಣೀರುಬಾವಿ ಬೀಚ್‍ನಲ್ಲಿ ಆಯೋಜಿಸಿದ್ದ  ವಿಶ್ವ ಪ್ರವಾಸೋದ್ಯಮ ದಿನಾಚರಣೆ ಮತ್ತು ಬ್ಲೂ ಫ್ಲ್ಯಾಗ್ ಬೀಚ್‍ಗೆ ಶಂಕು ಸ್ಥಾಪನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಾಯರ್ ಕುದ್ರುವಿನಲ್ಲಿ ಉತ್ತಮ ಸಂಪರ್ಕ, ಕಲಾ ಕೇಂದ್ರ, ಸಂಸ್ಕೃತಿಗಳ ಅನಾವರಣಕ್ಕೆ ವೇದಿಕೆ, ಸಾಹಸ ಕ್ರೀಡಾ ಕೇಂದ್ರ, ಹೋಟೆಲ್,ಸಣ್ಣ ಮಳಿಗೆಗಳು ಇರಲಿವೆ.ಇದರ ಜತೆಗೆ  ತಣ್ಣೀರುಬಾವಿ ಬೀಚ್‍ಗೆ ಬ್ಲೂ ಫ್ಲ್ಯಾಗ್ ಮಾನ್ಯತೆ ಸಿಗುವಂತಾಗಲು ಎಲ್ಲಾ ಷರತ್ತುಗಳನ್ನು ಪಾಲಿಸಿ ಅಭಿವೃದ್ಧಿ ಪಡಿಸಲಾಗುವುದು ಎಂದರು.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!