ಪಿಎಫ್ಐಗೆ ದೇಶವ್ಯಾಪಿ ನಿಷೇಧ..!
ಪಿಎಫ್ಐಗೆ ದೇಶವ್ಯಾಪಿ ನಿಷೇಧ.

ಮಂಗಳೂರು : ಉಗ್ರವಾದಿ ಸಂಘಟನೆಗಳೊಂದಿಗೆ ಚಟುವಟಿಕೆಯಲ್ಲಿ ತೊಡಗಿರುವ ಬಗ್ಗೆ ಸಾಕಷ್ಟು ಪುರಾವೆಗಳು ಸಿಕ್ಕಿರುವ ಹಿನ್ನೆಲೆಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ) ಸಂಘಟನೆಯನ್ನು ಐದು ವರ್ಷದ ಅವಧಿಗೆ ಕೇಂದ್ರ ಸರ್ಕಾರ ದೇಶಾದ್ಯಂತ ನಿಷೇಧಿಸಿದೆ.

 

ಇಡೀ ಭಾರತ ದೇಶದ ದೇಶವ್ಯಾಪಿ ಕಾರ್ಯಾಚರಣೆ ಬಳಿಕ ಇದೀಗ ಕೇಂದ್ರ ಸರಕಾರ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹಾಗೂ ಅದಕ್ಕೆ ಸಂಬಂಧಪಟ್ಟ ಇತರ ಸಂಘಟನೆಗಳನ್ನು 5 ವರ್ಷಗಳ ಅವಧಿಗೆ ಬ್ಯಾನ್ ಮಾಡುವ ಮೂಲಕ NIA ತಂಡದ ಕಾರ್ಯಾಚರಣೆ ಮಹತ್ವದ ಘಟ್ಟ ತಲುಪಿದೆ...

 

ದೇಶದಾದ್ಯಂತ NIA ಹಾಗೂ ಪೊಲೀಸ್ ಕಾರ್ಯಾಚರಣೆಯ ಬಳಿಕ ಗೃಹಸಚಿವ ಅಮಿತ್ ಷಾ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮಹತ್ವದ ಸಭೆ ನಡೆಸಿ PFI ನಿಷೇಧದ ಆಜ್ಞೆ ಹೊರಡಿಸಿದ್ದಾರೆ...


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!