ಮಂಗಳೂರು ಮೆರುಗಿಗೆ ಮತ್ತೆರಡು ವೃತ್ತಗಳು..!
ಮಂಗಳೂರು ಮೆರುಗಿಗೆ ಮತ್ತೆರಡು ವೃತ್ತಗಳು: ದಸರೆಗೆ ಲೋಕಾರ್ಪಣೆ...

ಮಂಗಳೂರು ; ಮಂಗಳಾದೇವಿ ಸರ್ಕಲ್‌ನಲ್ಲಿ ದೇವಿಯ ವಾಹನವಾದ ಸಿಂಹದ ಕಲಾಕೃತಿಯನ್ನು ರಚಿಸಿದರೆ, ನಾರಾಯಣಗುರು ಸರ್ಕಲ್‌ನಲ್ಲಿ ಗುರುಗಳ ಕಂಚಿನ ಮೂರ್ತಿಯನ್ನು ಇರಿಸಲು ನಿರ್ಧರಿಸಲಾಗಿದೆ. ಸುಮಾರು 48 ಲಕ್ಷ ರೂ. ವೆಚ್ಚದಲ್ಲಿ ಹೂವಿನ ಆಕಾರದಲ್ಲಿ ಈ ವೃತ್ತ ನಿರ್ಮಾಣವಾಗುತ್ತಿದೆ. ಸರ್ಕಲ್‌ನ ಮೂರು ದಿಕ್ಕಿನಲ್ಲಿ 6 ಕಾರಂಜಿ ಬರಲಿದ್ದು, ಒಂದು ದಿಕ್ಕಿನಲ್ಲಿ ನಾರಾಯಣಗುರು ಪ್ರತಿಮೆಗೆ ಮಾಲಾರ್ಪಣೆಗೆ ಅನುಕೂಲವಾಗುವಂತೆ ಮೆಟ್ಟಿಲುಗಳ ವ್ಯವಸ್ಥೆ ಮಾಡಲಾಗುತ್ತಿದೆ. ಮಂಗಳಾದೇವಿ ಸರ್ಕಲ್‌ನ್ನು 40 ಲಕ್ಷ ರೂ. ವೆಚ್ಚದಲ್ಲಿ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ಅನುದಾನದಡಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.

 

 ನಗರದ ಪ್ರಮುಖ ವೃತ್ತಗಳನ್ನು ಸ್ಮಾರ್ಟ್‌ ಸಿಟಿ, ಮುಡಾ, ಮಹಾನಗರಪಾಲಿಕೆ ಅನುದಾನದಡಿ ಹೊಸ ಸ್ವರೂಪದೊಂದಿಗೆ ಅಭಿವೃದ್ಧಿಪಡಿಸಲಾಗುತ್ತಿದೆ. ಇವುಗಳಲ್ಲಿ ನಗರ ಪ್ರವೇಶಿಸುವ ಹೆಬ್ಬಾಗಿಲು ಎಂದೆನಿಸಿಕೊಂಡ ಮಂಗಳಾದೇವಿ ಮತ್ತು ಲೇಡಿಹಿಲ್‌ ನಾರಾಯಣಗುರು ಸರ್ಕಲ್‌ ನಿರ್ಮಾಣ ಕಾಮಗಾರಿಗಳು ಸಮರೋಪಾದಿಯಲ್ಲಿ ನಡೆಯುತ್ತಿದ್ದು, ದಸರಾ ಸಂದರ್ಭ ಲೋಕಾರ್ಪಣೆಗೊಳ್ಳಲಿವೆ.

 

ಮಂಗಳಾದೇವಿ ಸರ್ಕಲ್‌ನಲ್ಲಿ ದೇವಿಯ ವಾಹನವಾದ ಸಿಂಹದ ಕಲಾಕೃತಿಯನ್ನು ರಚಿಸಿದರೆ, ನಾರಾಯಣಗುರು ಸರ್ಕಲ್‌ನಲ್ಲಿ ಗುರುಗಳ ಕಂಚಿನ ಮೂರ್ತಿಯನ್ನು ಇರಿಸಲು ನಿರ್ಧರಿಸಲಾಗಿದೆ

.ಸುರಕ್ಷತೆ ದೃಷ್ಟಿಯಿಂದ ಸರ್ಕಲ್‌ನ ಸುತ್ತ ರೇಲಿಂಗ್‌ ಹಾಕಲಾಗುತ್ತಿದ್ದು, ಮಂಗಳೂರು ಹವಾಮಾನಕ್ಕೆ ಹೊಂದುವಂತಹ ಪ್ಲಾಂಟೇಶನ್‌ ನಿರ್ಮಾಣ ಉದ್ದೇಶ ಹೊಂದಲಾಗಿದೆ. ವೃತ್ತದ ಮಧ್ಯಭಾಗದಲ್ಲಿ 5 ಅಡಿ ಎತ್ತರದ ಮಂಟಪ, 4 ಅಡಿ ಉದ್ದದ ನಾರಾಯಣಗುರುಗಳ ಕಂಚಿನ ಮೂರ್ತಿ ಇರಿಸಲಾಗುವುದು. ಕಾರಂಜಿ ಸೊಬಗಿಗೆ ತಕ್ಕಂತೆ ಲೈಟಿಂಗ್‌ ವ್ಯವಸ್ಥೆ ಮಾಡುವಂತೆ ಯೋಜನೆ ರೂಪಿಸಲಾಗಿದೆ 

ಮಂಗಳಾದೇವಿ ಸರ್ಕಲ್‌: ಮಂಗಳಾದೇವಿ ಸರ್ಕಲ್‌ನ್ನು 40 ಲಕ್ಷ ರೂ. ವೆಚ್ಚದಲ್ಲಿ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ಅನುದಾನದಡಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ದೇವಿಯ ವಾಹನವೆಂದೇ ಜನಜನಿತವಾದ ಸಿಂಹದ ಕಲಾಕೃತಿಯೊಂದಿಗೆ ಈ ಸರ್ಕಲ್‌ ಗಮನಸೆಳೆಯಲಿದೆ.

ಮೂರು ದಿಕ್ಕಿನಲ್ಲಿಅಳವಡಿಸಿದ ಸಿಂಹದ ಬಾಯಿಯಿಂದಲೇ ನೀರು ಹರಿಯುವ ದೃಶ್ಯ, ನಡುವಿನಲ್ಲಿ ದೀಪಜ್ಯೋತಿ, ಸುತ್ತ ಪ್ಲಾಂಟೇಶನ್‌, ಹಣತೆ ಮಾದರಿಯಲ್ಲಿ ಬೆಳಕಿನ ವ್ಯವಸ್ಥೆಯನ್ನು ಅಳವಡಿಸುವ ಯೋಜನೆ ರೂಪಿಸಲಾಗಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!