ಮಲ್ಪೆ- ಹೆಬ್ರಿ ಚತುಷ್ಪಥದಲ್ಲಿ ಟೋಲ್ ಸಂಗ್ರಹಣೆ ಇಲ್ಲ..!
ಮಲ್ಪೆ- ಹೆಬ್ರಿ ಚತುಷ್ಪಥದಲ್ಲಿ ಟೋಲ್ ಸಂಗ್ರಹಣೆ ಇಲ್ಲ: ಸಚಿವೆ ಶೋಭಾ ಕರಂದ್ಲಾಜೆ

ಉಡುಪಿ ಜಿಲ್ಲೆಯ ಮಲ್ಪೆ ಹೆಬ್ರಿ ನಡುವಿನ ರಾಷ್ಟ್ರೀಯ ಚತುಷ್ಪದ ರಸ್ತೆ ಪೂರ್ಣಗೊಂಡ ಬಳಿಕ ಯಾವುದೇ ಟೋಲ್ ಅಥವಾ ಬಳಕೆದಾರದ ಶುಲ್ಕವನ್ನು ಸಂಗ್ರಹಿಸಲಾಗುವುದಿಲ್ಲ  ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆಯಾದ ಶೋಭಾ ಕರಂದ್ಲಾಜೆಯವರು ಶುಕ್ರವಾರ ಹೇಳಿದರು

ಪೆರ್ಡೂರು ರಾಹೆ-169ಎ ವಿಭಾಗದ ಚತುಷ್ಪದ ರಾಷ್ಟ್ರಿಯ ಹೆದ್ದಾರಿ ಕಾಮಗಾರಿ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿ ಮಾತನಾಡಿದ ಸಚಿವೆ ಮಲ್ಪೆಯಿಂದ ಹೆಬ್ರಿಯವರೆಗಿನ ವಿಸ್ತರಣೆಯು ಉಡುಪಿ ಜಿಲ್ಲೆಯಲ್ಲಿ ಅಭಿವೃದ್ಧಿ ಮತ್ತು ಅವಕಾಶಗಳ ಹೊಸ ಅಲೆಯನ್ನು ಅನಾವರಣಗೊಳಿಸಲಿದೆ. ಈ ಸಂಪರ್ಕವನ್ನು ನವಿಕರಿಸಲು ಮೋದಿ ಸರ್ಕಾರವು ಹೆಚ್ಚಿನ ಉತ್ತೇಜನವನ್ನು ನೀಡಿದೆ ಮಲ್ಪೆ- ಕರಾವಳಿ ಜಂಕ್ಷನ್- ಪರ್ಕಳ- ಹೆಬ್ರಿಯನ್ನು  ಸಂಪರ್ಕಿಸುವ ರಸ್ತೆಯ ಅಭಿವೃದ್ಧಿ ಜಿಲ್ಲೆಯ ಬೆಳವಣಿಗೆ ಮತ್ತು ಸಮೃದ್ಧಿಯನ್ನು ಉತ್ತೇಜಿಸುವ ದೂರದೃಷ್ಟಿಯ ನಿದರ್ಶನವಾಗಿದೆ ಎಂದರು

ಅಂದಾಜು 355.72 ಕೋಟಿ ವೆಚ್ಚದಲ್ಲಿ ಯೋಜನೆಯನ್ನು ಎರಡು ಪೂರ್ಣ ಗೊಳಿಸಿ ವ್ಯವಸ್ಥಿತವಾಗಿ ಯೋಜನೆಯನ್ನು ಕೈಗೆತ್ತಿಕೊಳ್ಳುವಂತೆ  ಯೋಜನೆಯ ಗುತ್ತಿಗೆದಾರರನ್ನು ಕೋರಿದರು..

ಭಾರತೀಯ ಜನತಾ ಪಾರ್ಟಿ ಅಧ್ಯಕ್ಷ ರಾದ ಶ್ರೀ ಸುಧಾಕರ ಶೆಟ್ಟಿ.ಪಂಚಾಯತ್ ಅಧ್ಯಕ್ಷ ರಾದ ಶ್ರೀ ದೇವು ಪೂಜಾರಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಕೆ ತುಕಾರಾಮ ನಾಯಕ್.ಮುಂತಾದ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು..

ಮತ್ತು ಗ್ರಾಮ ಪಂಚಾಯತ್ ಸದಸ್ಯರು ಹಾಜರಿದ್ದರು...


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!