ಸೌದಿ ಅರೇಬಿಯಾದಲ್ಲಿ ರಸ್ತೆ ಅಪಘಾತ -  ಸುರತ್ಕಲ್ ನ ಯುವಕ ಮೃತ್ಯು
ಸೌದಿ ಅರೇಬಿಯಾದಲ್ಲಿ ರಸ್ತೆ ಅಪಘಾತ - ಸುರತ್ಕಲ್ ನ ಯುವಕ ಮೃತ್ಯು

ಮಂಗಳೂರು: ಸುರತ್ಕಲ್ ತಡಂಬೈಲ್‌ನ ಯುವಕನೋರ್ವ ಸೌದಿ ಅರೇಬಿಯಾದಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ.

ತಡಂಬೈಲ್‌ ಫಾತಿಮಾ‌ ಸೂಪರ್‌‌ ಮಾರ್ಕೆಟ್ ನ ಅಬ್ದುಲ್ ಖಾದರ್ ಹಾಗೂ ಬೀ ಫಾತಿಮಾ ಎಂಬವರ‌ ಪುತ್ರ ಫಾಝಿಲ್ (29) ಮೃತಪಟ್ಟ ಯುವಕ.

ಸೌದಿ ಅರೆಬಿಯಾದ ಅಲ್ಅಸಾ ಎಂಬಲ್ಲಿ ಕಾರು ಮತ್ತು ಲಾರಿಯ ನಡುವೆ ಭೀಕರ ಅಪಘಾತ ಸಂಭವಿಸಿ ಅಪಘಾತದಿಂದ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಫಾಝಿಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಇನ್ನು ಫಾಝಿಲ್ ಅವರಿಗೆ ಕಳೆದ ಒಂದೂವರೆ ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದು, ಸಣ್ಣ ಮಗು ಇದ್ದು, ಫಾಝಿಲ್ ತನ್ನ ಪತ್ನಿ ಮಗುವಿನೊಂದಿಗೆ ಸೌದಿ ಅರೇಬಿಯಾದಲ್ಲೇ ವಾಸವಾಗಿದ್ದರು ಎಂದು ವರದಿ ತಿಳಿಸಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!