ಬೆಳ್ತಂಗಡಿ: 5 ಜಾನುವಾರುಗಳ ಕೈ ಕಾಲು ಕಟ್ಟಿ ಹಿಂಸಾತ್ಮಕವಾಗಿ ಓಮ್ನಿ ಕಾರಿನಲ್ಲಿ ಸಾಗಾಟ
ಐವರ ಬಂಧನ

ಬೆಳ್ತಂಗಡಿ: ಓಮ್ನಿ ಕಾರಿನಲ್ಲಿ ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ಐವರನ್ನು ವಶಕ್ಕೆ ಬೆಳ್ತಂಗಡಿ ತಾಲೂಕು ಬಡಗಕಾರಂದೂರು ಗ್ರಾಮದ ನಡಾಯಿ ನಮನ ಡಾಬಾ ಬಳಿ ನಡೆದಿದೆ.

ಆರೋಪಿಗಳನ್ನು ಕರಾಯ ಜನತಾ ಕಾಲೋನಿ ನಿವಾಸಿ ತೌಸೀಫ್ (32), ಪುತ್ತಿಲ ಮಣಿಲ ನಿವಾಸಿ ಉಸ್ಮಾನ್ (55), ವಳಾಲು ಬಜತ್ತೂರು ನಿವಾಸಿ ಇಟ್ಬಾಲ್ (34 ), ಕರಾಯ ಜನತಾ ಕಾಲೋನಿ ನಿವಾಸಿ ಇರ್ಫಾನ್ (25), ಕರಾಯ ಜನತಾ ಕಾಲೋನಿ ಅನಾಸ್ (23) ಎಂದು ಗುರುತಿಸಲಾಗಿದೆ.

ವೇಣೂರು ಪೊಲೀಸ್ ಠಾಣಾ ಉಪನಿರೀಕ್ಷಕರಾದ ಸೌಮ್ಯ ಜೆ. ಮತ್ತು ಸಿಬ್ಬಂದಿಗಳು ರಾತ್ರಿ ಕರ್ತವ್ಯದಲ್ಲಿದ್ದ ವೇಳೆ ಬೆಳ್ತಂಗಡಿ ತಾಲೂಕು ಬಡಗಕಾರಂದೂರು ಗ್ರಾಮದ ನಡಾಯಿ ನಮನ ಡಾಬಾ ಸಮೀಪ ನಾರಾವಿ- ಗುರುವಾಯನಕೆರೆ ರಸ್ತೆಯಲ್ಲಿ ನಾರಾವಿ ಕಡೆಯಿಂದ ಬರುತ್ತಿದ್ದ ದ್ವಿಚಕ್ರ ವಾಹನವನ್ನು ತಡೆದು ನಿಲ್ಲಿಸಿ ಪರಿಶೀಲನೆ ನಡೆಸಿದಾಗ ಮಾರುತಿ ಓಮ್ಮಿ ಕಾರಿನಲ್ಲಿ ಅಕ್ರಮ ಗೋ ಸಾಗಾಟ ನಡೆಸುತ್ತಿದ್ದು, ಈ ಹಿನ್ನೆಲೆ ಬೆಂಗಾವಲಾಗಿ ಹೋಗುತ್ತಿರುವುದಾಗಿ ವಾಹನದಲ್ಲಿದ್ದ ಇಬ್ಬರು ತಿಳಿಸಿದ್ದಾರೆ.

ಓಮ್ನಿ ಕಾರನ್ನು ತಡೆದು ನಿಲ್ಲಿಸಿ ಪರಿಶೀಲನೆ ನಡೆಸಿದಾಗ ಕಾರಿನಲ್ಲಿ ಚಾಲಕ ಹಾಗೂ ಇತರ ಇಬ್ಬರು ಇದ್ದು, 5 ಜಾನುವಾರುಗಳನ್ನು ಕೈಕಾಲು ಕಟ್ಟಿ ಹಿಂಸಾತ್ಮಕವಾಗಿ ಸಾಗಿಸುತ್ತಿರುವುದು ಕಂಡುಬಂದಿದ್ದು ಆರೋಪಿಗಳನ್ನು ವಶಕ್ಕೆ ಪಡೆದು ಜಾನುವಾರುಗಳನ್ನು ಸಾಗಾಟಕ್ಕೆ 5 ಹಾಗೂ ಜನ 5 ಉಪಯೋಗಿಸಿದ ಮಾರುತಿ ಓಮ್ಮಿ ಕಾರನ್ನು ಮತ್ತು ದ್ವಿಚಕ್ರ ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ವಶ ಪಡಿಸಿಕೊಂಡ ಜಾನುವಾರುಗಳ ಅಂದಾಜು ಮೌಲ್ಯ 15,000 ರೂ. ಹಾಗೂ ವಾಹನಗಳ ಅಂದಾಜುಮೌಲ್ಯ 1,75,000/- ರೂ. ಎನ್ನಲಾಗಿದೆ. ಈ ಬಗ್ಗೆ ವೇಣೂರು ಠಾಣೆಯಲ್ಲಿ ಅ.ಕ್ರ ನಂಬ್ರ 01-2023 ಕಲಂ: 5,7,12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧ್ಯಾದೇಶ 2020 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!