ಮಂಗಳೂರು: ನಾಳೆ ಪಿಲಿಕುಳ ವಿಜ್ಞಾನ ಕೇಂದ್ರದಲ್ಲಿ ಗ್ರಹಗಳ ವೀಕ್ಷಣೆ
ಮಂಗಳೂರು: ನಾಳೆ ಪಿಲಿಕುಳ ವಿಜ್ಞಾನ ಕೇಂದ್ರದಲ್ಲಿ ಗ್ರಹಗಳ ವೀಕ್ಷಣೆ

ಮಂಗಳೂರು: ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಜ.5ರ ಗುರುವಾರ ಸಂಜೆ 6.30ರ ಸುಮಾರಿಗೆ ರಾತ್ರಿ ಆಕಾಶ ವೀಕ್ಷಣೆಯನ್ನು ಹಮ್ಮಿಕೊಳ್ಳಲಾಗಿದೆ.

ಈ ವೇಳೆ ಕಾಣಲಿರುವ ಮಂಗಳ, ಗುರು, ಶನಿ ಮತ್ತು ಶುಕ್ರ ಗ್ರಹಗಳನ್ನು ವೀಕ್ಷಿಸಬಹುದು. ವಿಜ್ಞಾನ ಕೇಂದ್ರದ ಆವರಣದಲ್ಲಿ ಇವುಗಳನ್ನು ದೂರದರ್ಶಕದ ಮೂಲಕ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ನಕ್ಷತ್ರ, ಗ್ರಹ ಮತ್ತು ನಕ್ಷತ್ರಪುಂಜಗಳನ್ನು ಗುರುತಿಸುವುದನ್ನು ಪರಿಚಯಿಸಲಾಗುವುದು.

ಬರಿಗಣ್ಣಿನಿಂದ ಇವುಗಳನ್ನು ನೋಡಬಹುದಾದರೂ ದೂರದರ್ಶಕದಿಂದ ನೋಡುವುದು ಬೇರೆಯೇ ಅನುಭವ ನೀಡುತ್ತದೆ ಜೊತೆಗೆ ಚಂದ್ರನನ್ನು ಕಣ್ತುಂಬಿಕೊಳ್ಳಬಹುದು ಎಂದು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!