ಉಡುಪಿ: ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ದಂಧೆ
ಮೂವರ ಬಂಧನ

ಉಡುಪಿ: ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪಿಗಳನ್ನು ಬಂಧಿಸಿದ ಘಟನೆ ನಡೆದಿದೆ.

ಉಡುಪಿ ಹಳೆ ಕೆ.ಎಸ್‌.ಆರ್‌.ಟಿ.ಸಿ. , ಬಸ್ ನಿಲ್ದಾಣದ ಬಳಿ ಇರುವ ಶಾಂಭವಿ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಖಚಿತ ವರ್ತಮಾನದ ಮೇರೆಗೆ ಪೊಲೀಸರು ದಾಳಿ ನಡೆಸಿ ರೂಮ್ ನಂಬ್ರ: 211 ರಲ್ಲಿದ್ದ ಸಂತ್ರಸ್ಥೆಯನ್ನು ರಕ್ಷಿಸಿ ಆರೋಪಿತರಾದ ಜಯಂತ್ ಸಾಲಿಯಾನ್ ಮತ್ತು ದಿನೇಶ್ ಎಸ್ ಎಂಬವರನ್ನು ಬಂಧಿಸಿದ್ದಾರೆ. 

ಕೃತ್ಯಕ್ಕೆ ಸಂಬಂದಿಸಿದ 4 ಮೊಬೈಲ್ ಪೋನ್ , 5,600 /- ರೂಪಾಯಿ ನಗದು, ಹಾಗೂ ಇತರೆ ಸಾಕ್ಷ್ಯ ಸ್ವತ್ತು ಗಳನ್ನು ವಶಕ್ಕೆ ಪಡೆದಿದ್ದಾರೆ.

ಆಪಾದಿತರಾದ ಶೇಖರ್, ಜಯಂತ್ ಮತ್ತು ದಿನೇಶ್ ಇವರು ಸೇರಿಕೊಂಡು ನೊಂದ ಮಹಿಳೆಯನ್ನು ಲಾಡ್ಜ್ ನ ರೂಮಿನಲ್ಲಿರಿಸಿ ಗಿರಾಕಿಗಳಿಗೆ ಹಣಕ್ಕೆ ಒದಗಿಸಿ ಅಕ್ರಮವಾಗಿ ವೇಶ್ಯವಾಟಿಕೆ ನಡೆಸುತ್ತಿದ್ದರು.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!