ಲವ್‌ ಜಿಹಾದ್.!!‌  ಇನ್‌ಸ್ಟಾ ಗ್ರಾಂನಲ್ಲಿ ಪರಿಚಯ ಸುಬ್ರಹ್ಮಣ್ಯದಲ್ಲಿ ಭೇಟಿ - ಮುಸ್ಲಿಂ ಯುವಕನಿಗೆ ಹಿಗ್ಗಾ ಮುಗ್ಗಾ ಥಳಿತ
ಇನ್‌ಸ್ಟಾ ಗ್ರಾಂನಲ್ಲಿ ಪರಿಚಯ ಸುಬ್ರಹ್ಮಣ್ಯದಲ್ಲಿ ಭೇಟಿ - ಮುಸ್ಲಿಂ ಯುವಕನಿಗೆ ಹಿಗ್ಗಾ ಮುಗ್ಗಾ ಥಳಿತ

ಸುಬ್ರಹ್ಮಣ್ಯ: ಹಿಂದೂ ಹುಡುಗಿಯ ಹಿಂದೆ ಹೋದ ಕಲ್ಲುಗುಂಡಿಯ ಅನ್ಯಕೋಮಿನ ಹುಡುಗನಿಗೆ ಹಿಗ್ಗಾ ಮುಗ್ಗಾ ಥಳಿಸಿರುವ ಘಟನೆ ಸುಬ್ರಹ್ಮಣ್ಯ ಬಳಿ ನಡೆದಿದೆ. 

ಕಲ್ಲುಗುಂಡಿಯ ಅನ್ಯಕೋಮಿನ ಹುಡುಗನೊಬ್ಬ ಸುಬ್ರಹ್ಮಣ್ಯದ ಹಿಂದೂ ಹುಡುಗಿ ಜತೆ ಇನ್ ಸ್ಟಾಗ್ರಾಂನಲ್ಲಿ ಪರಿಚಯವಾಗಿ ಸುಬ್ರಹ್ಮಣ್ಯ ಬಸ್ ಸ್ಟ್ಯಾಂಡ್ ನಲ್ಲಿ ಭೇಟಿಯಾಗಿದ್ದಾನೆ. ಈ ಸಂದರ್ಭ ಈತನಿಗೆ ಗುಂಪಿನಿಂದ ಹಲ್ಲೆಯಾಗಿದ್ದು ಅನ್ಯಕೋಮಿನ ಯುವಕನಿಗೆ ಹಿಗ್ಗಾ ಮುಗ್ಗಾ ಥಳಿಸಲಾಗಿದೆ ಎಂದು ತಿಳಿದುಬಂದಿದೆ.  

ಇನ್ ಸ್ಟಾಗ್ರಾಂ ಮೂಲಕ ಇಬ್ಬರಿಗೂ ಪರಿಚಯವಾಗಿದ್ದು, ಇವರಿಬ್ಬರೂ ಸುಬ್ರಹ್ಮಣ್ಯ ಬಸ್ ಸ್ಟಾಂಡ್ ನಲ್ಲಿ ಭೇಟಿಯಾಗಿದ್ದಾರೆ. ಈ ಸಂದರ್ಭ ಕುಮಾರಧಾರ ಹತ್ತಿರ ಗುಂಪಿನಿಂದ ಹಲ್ಲೆ ನಡೆದಿದ್ದು, ಯುವಕನ ತಲೆಗೆ ಏಟು ಬಿದ್ದು, ಆತ ಗಂಭೀರ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. 


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!