ಶೀಘ್ರದಲ್ಲೇ ಮೋದಿ ಸಚಿವ ಸಂಪುಟ ಸರ್ಜರಿ: ಹೊಸ ಸಚಿವರ ನೇಮಕಕ್ಕೆ ಸಿದ್ಧತೆ.!
ಶೀಘ್ರದಲ್ಲೇ ಮೋದಿ ಸಚಿವ ಸಂಪುಟ ಸರ್ಜರಿ: ಹೊಸ ಸಚಿವರ ನೇಮಕಕ್ಕೆ ಸಿದ್ಧತೆ.!

ಕೇಂದ್ರ ಸಚಿವ ಸಂಪುಟ ಶೀಘ್ರದಲ್ಲಿಯೇ ಪುನರ್‌ ರಚನೆ ಆಗುವ ಸಾಧ್ಯತೆ ಇದೆ. ಕೆಲವು ಹೊಸ ಮುಖಗಳು ಮೋದಿ ಸಂಪುಟಕ್ಕೆ ಬರುವ ಸಾಧ್ಯತೆಗಳು ದಟ್ಟವಾಗಿದೆ. ಅದರಲ್ಲೂ ಅಲ್ಪಸಂಖ್ಯಾತ ವ್ಯವಹಾರಗಳು ಹಾಗೂ ಉಕ್ಕು ಸಚಿವಾಲಯಗಳಿಗೆ ಹೊಸ ಸಚಿವರ ನೇಮಕವಾಗುವ ನಿರೀಕ್ಷೆ ಇದೆ. ಬಜೆಟ್ ಅಧಿವೇಶನ ಪ್ರಾರಂಭವಾಗುವ ಮೊದಲು (ಜನವರಿ 31) ಅಥವಾ ಫೆಬ್ರವರಿ 10 ರ ನಂತರ ಅಧಿವೇಶನದ ಮೊದಲ ಸುತ್ತು ಕೊನೆಗೊಳ್ಳುವ ಮೊದಲು ಕೇಂದ್ರ ಸಚಿವ ಸಂಪುಟದಲ್ಲಿ ಪ್ರಮುಖ ಬದಲಾವಣೆ ಆಗಲಿದೆ ಎನ್ನಲಾಗಿದೆ.

ಫೆ.1 ರಂದು ಕೇಂದ್ರ ಬಜೆಟ್‌ ಮಂಡನೆಯೊಂದಿಗೆ ಸಂಸತ್ತಿನ ಬಜೆಟ್‌ ಅಧಿವೇಶನವು ಜನವರಿ 31 ರಿಂದಲೇ ಪ್ರಾರಂಭವಾಗಲಿದೆ ಎನ್ನಲಾಗಿದೆ. ಬುಧವಾರ ಬಿಜೆಪಿ ಪಕ್ಷದ ಕೇಂದ್ರ ಕಚೇರಿಯಲ್ಲಿ ಸಭೆ ನಡೆದಿದ್ದು, ಜನವರಿ 16-17ರಂದು ನಿಗದಿಯಾಗಿರುವ ರಾಷ್ಟ್ರಯ ಕಾರ್ಯಕಾರಿಣಿ ಸಭೆಯ ನಂತರ ಸಂಪುಟ ಪುನಾರಚನೆ ಆಗಬಹುದು ಎನ್ನುವ ಸುಳಿನ ನೀಡಿದೆ. ಈ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಭಾಗವಹಿಸಿದ್ದರು. ಕೆಲವು ಹೊಸ ಮುಖಗಳನ್ನು ಕೇಂದ್ರ ಸಂಪುಟದಲ್ಲಿ ಮಂತ್ರಿಗಳಾಗಿ ಸೇರ್ಪಡೆಗೊಳಿಸಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಕೆಲವು ಹಳೆಯ ಮುಖಗಳು 2024 ರ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ಸಂಪುಟದಲ್ಲಿ ಅಥವಾ ಸಂಘಟನೆಯೊಳಗೆ ಹೊಸ ಜವಾಬ್ದಾರಿಗಳನ್ನು ಪಡೆಯಬಹುದು ಎನ್ನಲಾಗಿದೆ.

ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯವು ಪ್ರಸ್ತುತ ಸ್ಮೃತಿ ಇರಾನಿ ಅವರ ನೇತೃತ್ವದಲ್ಲಿದೆ ಮತ್ತು ಉಕ್ಕು ಸಚಿವಾಲಯದ ಉಸ್ತುವಾರಿಯನ್ನು ಜ್ಯೋತಿರಾದಿತ್ಯ ಸಿಂಧಿಯಾ ವಹಿಸಿದ್ದಾರೆ. ಗ್ರಾಹಕ ವ್ಯವಹಾರಗಳ ಸಚಿವಾಲಯ ಮತ್ತು ಜವಳಿ ಸಚಿವಾಲಯವು ಕೂಡ ಹೊಸ ಸಚಿವರನ್ನು ಪಡೆಯಬಹುದು, ಇದು ಪ್ರಸ್ತುತ ಪಿಯೂಷ್ ಗೋಯಲ್ ಅವರ ನೇತೃತ್ವದಲ್ಲಿದೆ. ಕಲ್ಲಿದ್ದಲು ಸಚಿವಾಲಯ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೂ ಹೊಸ ಮುಖಗಳು ಬರಬಹುದು ಎನ್ನುವ ಊಹಾಪೋಹಗಳಿವೆ.

ಈ ಹಿಂದೆ ಮುಖ್ತಾರ್ ನಖ್ವಿ ನೇತೃತ್ವದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಮುಖ್ಯಸ್ಥರಾಗಲು ಅಲ್ಪಸಂಖ್ಯಾತ ಸಮುದಾಯಗಳ ಒಂದು ಮುಖವು ಮೋದಿ ತಂಡದಲ್ಲಿ ಸ್ಥಾನ ಪಡೆಯಬಹುದು ಎಂದು ನಿರೀಕ್ಷಿಸಲಾಗಿದೆ. ಗುಜರಾತಿನ ಸಿಆರ್ ಪಾಟೀಲ್ ಹೊಸ ಮುಖಗಳ ಪೈಕಿ ಪ್ರಮುಖ ಹೆಸರು. ಹಾಗೇನಾದರೂ ಜೆಪಿ ನಡ್ಡಾ ಅವರಿಗೆ ಪಕ್ಷದ ರಾಷ್ಟ್ರಾಧ್ಯಕ್ಷರಾಗಿ ಇನ್ನೊಂದು ಅವಧಿಗೆ ಅನುಮೋದಿಸದಿದ್ದರೆ, ಗುಜರಾತ್‌ನ ಸಿಆರ್‌ ಪಾಟೀಲ್‌ ಹಾಗೂ ಧರ್ಮೇಂದ್ರ ಪ್ರದಾನ್‌ ಅವರ ಹೆಸರುಗಳು ಜೆಪಿ ನಡ್ಡಾಗೆ ಸಂಭಾವ್ಯ ಉತ್ತರಾಧಿಕಾರಿಗಳಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಕರ್ನಾಟಕ, ರಾಜಸ್ಥಾನ, ಛತ್ತೀಸ್‌ಗಢ ಮತ್ತು ತೆಲಂಗಾಣದ ಕೆಲವು ಸಂಸದರು ಕೂಡ ಸಂಪುಟಕ್ಕೆ ಸೇರ್ಪಡೆಯಾಗಬಹುದು. ಮೋದಿಯವರ ಮಂತ್ರಿ ಮಂಡಲದಲ್ಲಿನ ಬದಲಾವಣೆಗಳು ಮೊದಲಿನಿಂದಲೂ ಅಚ್ಚರಿಯಿಂದ ಕೂಡಿರುತ್ತದೆ. ಇನ್ನು ಖಾತೆ ಬದಲಾವಣೆ ಕೂಡ ಅಚ್ಚರಿಯಿಂದ ಕೂಡಿರುತ್ತದೆ. ಕಳೆದ ಬಾರಿ, ಪ್ರಕಾಶ್ ಜಾವಡೇಕರ್ ಮತ್ತು ರವಿಶಂಕರ್ ಪ್ರಸಾದ್ ಅವರನ್ನು ಸಂಪುಟದಿಂದ ಕೈಬಿಡಲಾಯಿತು ಮತ್ತು ಮಾಜಿ ಐಎಎಸ್ ಅಧಿಕಾರಿ ಅಶ್ವಿನಿ ವೈಷ್ಣವ್ ಅವರನ್ನು ಸೇರ್ಪಡೆಗೊಳಿಸಲಾಯಿತು ಮತ್ತು ರೈಲ್ವೆ ಮತ್ತು ಮಾಹಿತಿ ತಂತ್ರಜ್ಞಾನದಂತಹ ಪ್ರಮುಖ ಸಚಿವಾಲಯಗಳನ್ನು ನೀಡಲಾಯಿತು.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!